twitter
    Celebs»Radhika Pandit»Biography

    ರಾಧಿಕಾ ಪಂಡಿತ್ ಜೀವನಚರಿತ್ರೆ

    ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟಿ. ಇವರು 1984 ಮಾರ್ಚ್  07ರಂದು ಮಲ್ಲೇಶ್ವರಂ ಉಪನಗರದಲ್ಲಿನ ಬೆಂಗಳೂರು ಅರಮನೆ ನರ್ಸಿಂಗ್ ಹೋಮ್‌ನಲ್ಲಿ ಜನಿಸಿದರು. ಇವರ ತಂದೆ ಕೃಷ್ಣಪ್ರಸಾದ್ ಪಂಡಿತ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯವರು ಹಾಗೂ ಮಂಗಳಾ ಗೋವಾದವರು.


    ಆರಂಭಿಕ ಜೀವನ

    ರಾಧಿಕಾ ತಮ್ಮ ಬಾಲ್ಯ ಶಿಕ್ಷಣವನ್ನು ಕ್ಲೂನಿ ಕಾನ್ವೆಂಟ್ ಹೈಸ್ಕೂಲ್‌ನಲ್ಲಿ ಮುಗಿಸಿದರು. ನಂತರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಕೋರ್ಸ್ ಮುಗಿಸಿದರು. ಆ ನಂತರ ಶಿಕ್ಷಿಕಯಾಗಬೇಕೆಂಬ ಕನಸು ಕಂಡಿದ್ದರು. 2007ರಲ್ಲಿ ರಾಧಿಕಾ ಅಂತಿಮ ವರ್ಷದ ಬಿಕಾಂ ಓದುತ್ತಿದ್ದಾಗ, ಅಶೋಕ್ ಕಶ್ಯಪ ತಮ್ಮ ನಿರ್ದೇಶನದ 'ನಂದ ಗೋಕುಲ' ಧಾರಾವಾಹಿಯಲ್ಲಿ  ನಟಿಸುವ ಅವಕಾಶ ದೊರೆಯಿತು. ಈ ಸೀರಿಯಲ್‌ನಲ್ಲಿ ಅಡಿಷನ್ ಇಲ್ಲದೇ ಆಯ್ಕೆಯಾದರು. ಅದೇ ವರ್ಷ ಮತ್ತೊಂದು ಧಾರಾವಾಹಿ ಸುಮಂಗಲಿನಲ್ಲಿ ಕಾಣಿಸಿಕೊಂಡರು. 


    ಸ್ಯಾಂಡಲ್‌ವುಡ್ ಪ್ರವೇಶ

    ರಾಧಿಕಾ ನಟನೆಯ ಮೊದಲ ಧಾರಾವಾಹಿ ಮುಕ್ತಾಯವಾಗುತ್ತಿದ್ದಂತೆ ಅವರ ಫೋಟೋಗಳು ಮ್ಯಾಗಜಿನ್‌ಗಳಲ್ಲಿ ಪ್ರಕಟವಾಗಿದ್ದವು. ಈ ಸಂದರ್ಭದಲ್ಲಿ ನಿರ್ದೇಶಕ ಶಶಾಂಕ್ ತಮ್ಮ ಮೊಗ್ಗಿನ ಮನಸ್ಸು ಸಿನಿಮಾಗೆ ನಾಯಕಿಯ ಹುಡುಕಾಟದಲ್ಲಿದ್ದರು. ಬಳಿಕ ತಮ್ಮ ಸಿನಿಮಾಗೆ ರಾಧಿಕಾ ಪಂಡಿತ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದರು. ಈ ಚಿತ್ರದ ಅಭಿನಯಕ್ಕೆ ಇವರಿಗೆ ಫಿಲ್ಮ್ ಫೇರ್ ಮತ್ತು ರಾಜ್ಯ ಪ್ರಶಸ್ತಿ ನೀಡಲಾಯಿತು. ಚೊಚ್ಚಲ ಸಿನಿಮಾದಲ್ಲೇ ರಾಜ್ಯ ಪ್ರಶಸ್ತಿ ಪಡೆದ ಹಗ್ಗೆಳಿಕೆಗೆ ರಾಧಿಕಾ ಪಾತ್ರರಾದರು. 


    ಮೊಗ್ಗಿನ ಮನಸ್ಸು ಸಿನಿಮಾ ರಾಧಿಕಾ ಪಂಡಿತ್‌ಗೆ ಒಳ್ಳೆಯ ಇಮೇಜ್ ಕ್ರಿಯೇಟ್ ಆಯಿತು. ನಂತರ ಒಲವೇ ಜೀವನ ಲೆಕ್ಕಚಾರ, ಲವ್, ಗುರು, ಕೃಷ್ಣನ್ ಲವ್ ಸ್ಟೋರಿ, ಗಾನಾ ಬಜಾನ, ಹುಡುಗರು, ಅಲೆಮಾರಿ, ಬ್ರೆಕಿಂಗ್ ನ್ಯೂಸ್, ಅದ್ಧೂರಿ, ಸಾಗರ್, ಡ್ರಾಮಾ, ಕಡ್ಡಿಪುಡಿ, ದಿಲ್‌ವಾಲಾ, ಬಹುದ್ದೂರ್, ಮಿಸ್ಟರ್ ಅ೦ಡ್ ಮಿಸ್ಸಸ್ ರಾಮಾಚಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಡಿಸಿದ್ದಾರೆ. ಕನ್ನಡದ ಅನೇಕ ನಟರೊಡನೆ ಅಭಿನಯಿಸಿರುವ ರಾಧಿಕಾ ಪಂಡಿತ್, ಇತ್ತೀಚೆಗೆ ಯಾವ ಸಿನಿಮಾದಲ್ಲೂ ಅಭಿನಯಿಸಿಲ್ಲ.


    ವಿವಾಹ: ರಾಧಿಕಾ ಪಂಡಿತ್ 2016ರ ಡಿಸೆಂಬರ್ 9ರಂದು ರಾಕಿಂಗ್ ಸ್ಟಾರ್ ಯಶ್ ಅವರನ್ನು ಪ್ರೀತಿಸಿ ಮದುವೆಯಾದರು. ಗೋವಾದಲ್ಲಿ ಮದುವೆಯಾದ ಈ ಜೋಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗಾಗಿ ಅದ್ಧೂರಿ ಔತಣಕೂಟ ಏರ್ಪಡಿಸಿದ್ದರು. ಯಶ್ ಹಾಗೂ ರಾಧಿಕಾಗೆ ಐರಾ ಹಾಗೂ ಯಥರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ.


    ರಾಧಿಕಾ ಪಂಡಿತ್ ಅವರಿಗೆ ಲಭಿಸಿದ ಪ್ರಶಸ್ತಿಗಳು:

    * ಫಿಲ್ಮ್ ಫೇರ್ ಪ್ರಶಸ್ತಿ - ಅತ್ಯುತ್ತಮ ನಟಿ - ಮೊಗ್ಗಿನ ಮನಸ್ಸು(2009)

    * ಸುವರ್ಣ ಫಿಲ್ಮ್ ಪ್ರಶಸ್ತಿ - ಜನಪ್ರಿಯ ನಟಿ - ಒಲವೇ ಜೀವನ ಲೆಕ್ಕಾಚಾರ(2010)

    * ಸೌತ್ ಫಿಲ್ಮ್  ಫೇರ್ ಪ್ರಶಸ್ತಿ - ಅತ್ಯುತ್ತಮ ನಟಿ- ಲವ್ ಗುರು-(2010)

    * ಸೌತ್ ಸಿನಿ ಪ್ರಶಸ್ತಿ- ಅತ್ಯುತ್ತಮ ನಟಿ- ಲವ್ ಗುರು-(2010)

    * ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ-ಅತ್ಯುತ್ತಮ ನಟಿ - ಮೊಗ್ಗಿನ ಮನಸ್ಸು(2010)

    * ಬಿಗ್ ಕನ್ನಡ ಎಂಟರ್ ಟೈನ್ಮೆಂಟ್ ಪ್ರಶಸ್ತಿ.ವರ್ಷದ ಹಾಸ್ಯ ನಟಿ-ಕೃಷ್ನನ್ ಲವ್ ಸ್ಟೋರಿ(2011)

    * ಸುವರ್ಣ ಫಿಲ್ಮ್ ಪ್ರಶಸ್ತಿ - ಅತ್ಯುತ್ತಮ ನಟಿ- ಕೃಷ್ಣನ್ ಲವ್ ಸ್ಟೋರಿ(2011)

    * ಉದಯ ಫಿಲ್ಮ್ ಪ್ರಶಸ್ತಿ - ಅತ್ಯುತ್ತಮ ನಟಿ- ಕೃಷ್ಣನ್ ಲವ್ ಸ್ಟೋರಿ(2011)

    * ಟಿವಿ9 ಸ್ಯಾಂಡಲ್ ವುಡ್ ಸ್ಟಾರ್ ಪ್ರಶಸ್ತಿ- ಅತ್ಯುತ್ತಮ ನಟಿ- ಹುಡುಗರು(2012)

    * ಸೌತ್ ಫಿಲ್ಮ್  ಫೇರ್ ಪ್ರಶಸ್ತಿ - ಅತ್ಯುತ್ತಮ ನಟಿ - ಹುಡುಗರು(2012)

    * ದಿ ಬೆಂಗಳೂರು ಟೈಮ್ಸ್ ಪ್ರಶಸ್ತಿ - ಅತ್ಯುತ್ತಮ ನಟಿ - ಹುಡುಗರು(2012)

    * ಸೌತ್ ಫಿಲ್ಮ್  ಫೇರ್ ಪ್ರಶಸ್ತಿ - ಅತ್ಯುತ್ತಮ ನಟಿ- ಅದ್ಧೂರಿ(2013)

    * ಉದಯ ಫಿಲ್ಮ್ ಪ್ರಶಸ್ತಿ - ಅತ್ಯುತ್ತಮ ನಟಿ-  ಅದ್ಧೂರಿ(2013)

    * ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಫ್ರಶಸ್ತಿ -  ಅದ್ಧೂರಿ(2013)

    * ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಫ್ರಶಸ್ತಿ - ದಿಲ್ ವಾಲ(2014)

    * ಸೌತ್ ಫಿಲ್ಮ್  ಫೇರ್ ಪ್ರಶಸ್ತಿ - ಅತ್ಯುತ್ತಮ ನಟಿ- ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ(2015)

    * ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಫ್ರಶಸ್ತಿ - ಅತ್ಯುತ್ತಮ ನಟಿ- ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ(2015)

    * IBNLive ಪ್ರಶಸ್ತಿ- ಅತ್ಯುತ್ತಮ ನಟಿ- ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ(2016)

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X