twitter
    Celebs»Ramya»Biography

    ರಮ್ಯಾ ಜೀವನಚರಿತ್ರೆ

    ರಮ್ಯಾ ಎಂದೇ ಖ್ಯಾತಿ ಪಡೆದಿರುವ ದಿವ್ಯ ಸ್ಪಂದನ ಭಾರತೀಯ ನಟಿ ಹಾಗೂ ರಾಜಕಾರಣಿ ಆಗಿದ್ದಾರೆ. ಇವರು ಆರ್.ಟಿ ನಾರಾಯಣ್  ಮತ್ತು ರಂಜಿತ ದಂಪತಿಗಳ ಪುತ್ರಿಯಾಗಿ  29 ನವೆಂಬರ್ 1982 ರಲ್ಲಿ ಜನಿಸಿದರು.  ಇವರು ಪ್ರಾಥಮಿಕ ಶಿಕ್ಷಣವನ್ನು ಊಟಿಯಲ್ಲಿ ಮುಗಿಸಿದ್ದಾರೆ  ಮತ್ತು ಪ್ರೌಢ ಶಿಕ್ಷಣವನ್ನು ಚನ್ನೈನಲ್ಲಿ ಪೂರ್ಣಗೊಳಿಸಿದ್ದಾರೆ.

    ಸಿನಿಮಾರಂಗ 
    2003 ರಲ್ಲಿ ಇವರು ಪುನೀತ್ ರಾಜ್ ಕುಮಾರ್ ಅಭಿನಯಿಸಿದ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. ಅಭಿ ಚಿತ್ರ ಭರ್ಜರಿ ಪ್ರದರ್ಶನ ಕಾಣುವ ಮೂಲಕ ರಮ್ಯರ ಸಿನಿಪಯಣಕ್ಕೆ ಭದ್ರ ಬುನಾದಿ ಹಾಕಿತು.

    ನಂತರ ಕನ್ನಡ ಚಿತ್ರರಂಗದ ದೊಡ್ಡ-ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಅಭಿನಯಿಸಿ ಸ್ಯಾಂಡಲ್ ವುಡ್ ಕ್ವೀನ್ ಆಗಿ ಹೊರ ಹೊಮ್ಮಿದರು.  ಹೀಗೆ ಹಲವು ಕನ್ನಡ ಚಿತ್ರಗಳು ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    ರಾಜಕೀಯ ಕ್ಷೇತ್ರದಲ್ಲಿ 
    ರಮ್ಯಾ ಅವರು ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ರಾಜಕೀಯ ಕ್ಷೇತ್ರದಲ್ಲೂ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಇವರು 2011 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು 2013 ರ ಉಪಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ದಿಸಿ ಜಯಭೇರಿ ಬಾರಿಸಿ ಮೊದಲ ಬಾರಿಗೆ ಲೋಕಸಭಾ ಪ್ರವೇಶ ಮಾಡಿದರು...

     

    ನಂತರ 16ನೇ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪುನಹಃ ಸ್ಪರ್ಧಿಸಿ ಜೆಡಿ(ಎಸ್)ನ ಸಿ ಎಸ್ ಪುಟ್ಟರಾಜು ಅವರ ವಿರುದ್ಧ ಸೋಲು ಕಂಡರು. ಒಂದು ಬಾರಿ ಲೋಕಸಭೆಯನ್ನು ಪ್ರವೇಶ ಮಾಡಿರುವ ರಮ್ಯಾ ಅವರು ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೆಯಾದ ವರ್ಚಸ್ಸನ್ನು ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.


    ಪ್ರಶಸ್ತಿಗಳು 

    ಉದಯ ಪ್ರಶಸ್ತಿ - ಅತ್ತ್ಯುತ್ತಮ ನಟಿ - 2005 (ಅಮೃತಧಾರೆ)

    ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ನಟಿ- 2006 (ತನನಂ ತನನಂ)

    ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ನಟಿ - 2008 (ಮಸ್ಸಂಜೆ ಮಾತು)

    ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ನಟಿ - 2010 ( ಜಸ್ಟ್ ಮಾತ್ ಮಾತಲ್ಲಿ)

    ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ತ್ಯುತ್ತಮ ನಟಿ - 2011 (ಸಂಜು ವೇಡ್ಸ್ ಗೀತಾ)

    ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ನಟಿ- 2011 (ಸಂಜು ವೇಡ್ಸ್ ಗೀತಾ)

    ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ನಟಿ- 2012(ಸಿದ್ಲಿಂಗು)

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X