twitter
    Celebs»Sadhu Kokila»Biography

    ಸಾಧು ಕೋಕಿಲ ಜೀವನಚರಿತ್ರೆ

    ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆಯುಳ್ಳ ಹಾಗೂ ಖ್ಯಾತ ಹಾಸ್ಯ ನಟನಾಗಿ ಹೊರಹೊಮ್ಮಿರುವ  ಸಾಧು ಕೋಕಿಲಾ ಅಲಿಯಾಸ್ ಸಾಧು ಮಹಾರಾಜ್ ಇವರು ನತೇಶ್ ಹಾಗು ಮಂಗಲ ದಂಪತಿಗಳ ಮಗನಾಗಿ 24 ಮಾರ್ಚ್ 1966 ರಲ್ಲಿ ಜನಿಸಿದರು. ಇವರ ತಂದೆ ಪೋಲಿಸ್ ಸಂಸ್ಥೆಯಲ್ಲಿ ಪಿಟೀಲು ವಾದಕರಾಗಿದ್ದರು. ಇವರ ತಾಯಿ ಮತ್ತು ಅಕ್ಕ ಹಿನ್ನಲೆ ಗಾಯಕರಗಿದ್ದರು. ಇವರ ಅಣ್ಣ ಲಯೇಂದ್ರ ಸಹ ನಟರಾಗಿದ್ದರು.

    ಇವರು ಬೆಂಗಳೂರಿನ ಸೆಂಟ್ ಜೋಸೆಫ್ ಪ್ರೌಢ ಶಾಲೆಯಲ್ಲಿ ವ್ಯಾಸಾಂಗ ಮುಗಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಮೊದಲು ಸಂಗೀತ ನಿರ್ದೇಶಕ, ಕೀಬೋರ್ಡ್, ಡೈರೆಕ್ಟರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು. ನಂತರ ಹಾಸ್ಯ ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಅಷ್ಟೇ ಅಲ್ಲದೆ ಈಗ ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

    1992 ರಲ್ಲಿ ಕನ್ನಡ ಚಿತ್ರರಂಗ ಪ್ರವೇಶ ಮಾಡಿರುವ ಇವರು "ಶ್" ಕನ್ನಡ ಚಿತ್ರಕ್ಕೆ ಮೊದಲಬ ಬಾರಿ ಸಂಗೀತ ನಿರ್ದೇಶನ ಮಾಡಿದರು. ಹೀಗೆ ಇವರು ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿರುವ ಸಾಧು ಕನ್ನಡ ಚಿತ್ರರಂಗದಲ್ಲಿ ಅತಿ ವೇಗವಾಗಿ ಕೀಬೋರ್ಡ್ ಅನ್ನು ನುಡಿಸುವಂತ ಕಲಾವಿದ ಎನಿಸಿಕೊಂಡಿದ್ದಾರೆ.

    ಕನ್ನಡ ಚಿತ್ರ  ರಂಗದಲ್ಲಿ ಹಾಸ್ಯ ನಟನಾಗಿ ಅನೇಕ ಚಿತ್ರಗಳಲ್ಲಿ ಅಭಿನಯಸಿ ಜನರ ಮನಸ್ಸನ್ನು ಗೆದ್ದಿರುವ  ಇವರಿಗೆ ಕೋಕಿಲ ಎನ್ನುವ ಹೆಸರನ್ನು ಉಪೇಂದ್ರ ಅವರು ಇಟ್ಟಿದ್ದಾರೆ. 1993 ರಲ್ಲಿ ಇವರು ಸಲೀನ ಎನ್ನುವರನ್ನು ವಿವಾಹವಾದರು. 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X