twitter
    Celebs»Srinagara Kitty»Biography

    ಶ್ರೀನಗರ ಕಿಟ್ಟಿ ಜೀವನಚರಿತ್ರೆ

    ಶ್ರೀನಗರ ಕಿಟ್ಟಿ ಎಂದೇ ಪ್ರಸಿದ್ಧವಾಗಿರುವ ಕೃಷ್ಣ ಕನ್ನಡದ ಪ್ರತಿಭಾನಿತ್ವ ಚಲನಚಿತ್ರ ನಟ. ಬೆಂಗಳೂರಿನಲ್ಲಿ 1977 ಜುಲೈ 8 ಜನಿಸಿದ ಕಿಟ್ಟಿ ಬಾಲ್ಯದಿಂದಲೇ ಕಿರುತೆರೆಯಲ್ಲಿ ಬಾಲನಟನಾಗಿ ಅಭಿನಯ ಆರಂಭಿಸಿದರು.

    ಬಾಲನಟನಾಗಿ `ಮಲೆನಾಡಿನ ಚಿತ್ರಗಳು', `ದೊಡ್ಮನೆ',`ಕಂದನ ಕಾವ್ಯ' ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಇದೇ ಸಮಯದಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಕಿಟ್ಟಿ `ಕಾಡು', `ಕಪ್ಪೆ ಭಾವಿ ನಕ್ಷತ್ರ', `ಅಕ್ಕ', `ಸಂಜೆ ಮಲ್ಲಿಗೆ' ಮುಂತಾದ ನಾಟಕಗಳಲ್ಲಿ ನಟಿಸಿದ್ದಾರೆ. ಶಿಕ್ಷಣ ಮುಗಿದ ನಂತರ ನಟನಾಗಿ `ಚಂದ್ರಿಕಾ', `ಪ್ರೀತಿಗಾಗಿ', `ಆನಂದ ಸಾಗರ', `ಮನೆ ಮನೆ ಕಥೆ' ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದರು.

    2003 ರಲ್ಲಿ ತೆರೆಕಂಡ `ಚಂದ್ರ ಚಕೋರಿ' ಚಿತ್ರದಲ್ಲಿ ಖಳನಾಯಕನಾಗಿ ಅಭಿನಯ ಆರಂಭಿಸಿದರು. ನಂತರ ಮತ್ತೆರೆಡು ವರ್ಷ `ಗೌಡ್ರು', ಲವ್ ಸ್ಟೋರಿ', ಆದಿ' ,`ಅಯ್ಯ' ಮುಂತಾದ ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸಿದರು. 2005 ರಲ್ಲಿ ತೆರೆಕಂಡ `ಗಿರಿ' ಚಿತ್ರದಿಂದ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಅದರೆ ನಾಯಕನಾಗಿ ಇವರಿಗೆ ಕೀರ್ತಿ ತಂದು ಕೊಟ್ಟ ಚಿತ್ರ ದುನಿಯಾ ಸೂರಿ ನಿರ್ದೇಶನದ `ಇಂತಿ ನಿನ್ನ ಪ್ರೀತಿಯ'.   ನಂತರ `ಸವಾರಿ', ` ಸಂಜು ವೆಡ್ಸ್ ಗೀತಾ', `ಹುಡುಗರು',`ಕೋಕೋ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

    ಕಿಟ್ಟಿ ಅಭಿನಯದ ಇಪ್ಪತ್ತೈದನೇ ಚಿತ್ರ `ಬಹುಪರಾಕ್'  2014 ರಲ್ಲಿ ತೆರೆಕಂಡಿತು. ಈ ಚಿತ್ರದಲ್ಲಿ ಕಿಟ್ಟಿ ಮೂರು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದರು.ಇವರು ಕನ್ನಡದ ಖ್ಯಾತ ಲೇಖಕ ಮತ್ತು ಪತ್ರಕರ್ತ ರವಿ ಬೆಳಗೆರೆ ಪುತ್ರಿ ಕಿರುತೆರೆ ನಿರ್ಮಾಪಕಿ ಭಾವನಾ ಬೆಳಗೆರೆಯವರನ್ನು ವಿವಾಹವಾಗಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X