twitter
    Celebs»Srujan Lokesh»Biography

    ಸೃಜನ್ ಲೋಕೇಶ್ ಜೀವನಚರಿತ್ರೆ

    ಕನ್ನಡ ಚಿತ್ರರಂಗದಲ್ಲಿ  ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿ ಕೊಂಡಿರುವ  ಸೃಜನ್ ತಮ್ಮ ಮನದಾಳವನ್ನ ಯಾರೊಂದಿಗೂ ಹಂಚಿಕೊಳ್ಳದ ಭಾವನಾತ್ಮಕ ವ್ಯಕ್ತಿ. ಖ್ಯಾತ ಹಿರಿಯ ಕನ್ನಡ ಸಿನಿಮಾ ನಟ ದಿವಂಗತ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಜನಿಸಿದ್ದು 28 ಜೂನ್ 1980 ಬೆಂಗಳೂರಿನಲ್ಲಿ. 

    ಕಿರು ಪರಿಚಯ
    ನಿಜನಾಮ ಎಂ.ಎಲ್.ಸೃಜನ್(ಮಾದಲಾಪುರ ಲೋಕೇಶ್ ಸೃಜನ್) ಜನ್ಮ ದಿನಾಂಕ - 28 ಜೂನ್ 1980
    ಹುಟ್ಟಿದ್ದು - ಬಸವನಗುಡಿ, ಬೆಂಗಳೂರು 
    ತಾತ - ಕನ್ನಡ ಚಲನ ಚಿತ್ರರಂಗದ ಪ್ರಪ್ರಥಮ ನಾಯಕ ನಟ ಸುಬ್ಬಯ್ಯ ನಾಯ್ಡು 
    ತಂದೆ - ಲೋಕೇಶ್, ತಾಯಿ- ಗಿರಿಜಾ ಲೋಕೇಶ್ 
    ಅಕ್ಕ - ಪೂಜಾ ಲೋಕೇಶ್ ;ಪತ್ನಿ - ಗ್ರೀಷ್ಮ ; ಪುತ್ರ - ಸುಕೃತ್.
    ವಿದ್ಯಾಭ್ಯಾಸಎಸ್.ಎಸ್.ಎಂ.ಆರ್.ವಿ ಕಾಲೇಜ್.

    ಕಲಾವಿದರ ಕುಟುಂಬದಲ್ಲಿ ಜನಿಸಿದ ಸೃಜನ್ ಲೋಕೇಶ್, ಬಾಲ ನಟರಾಗಿ ಒಟ್ಟು 4 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಟರಾಗಿ ಒಟ್ಟು 15 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 7 ಕನ್ನಡ ಧಾರಾವಾಹಿ ಹಾಗೂ 2 ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ 'ಮಜಾ ವಿತ್ ಸೃಜ' ಮತ್ತು 'ಮಜಾ ಟಾಕೀಸ್' ಕಾರ್ಯಕ್ರಮಗಳಿಂದ ಜನಪ್ರಿಯ. ಇದಲ್ಲದೆ ಇವರು ರೇಡಿಯೋ ಚಾನೆಲ್ ಗಳ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗಿದ್ದಾರೆ.

    10 ಯಶಸ್ವಿ ಶೋಗಳು... 
    ಒಟ್ಟು 10 ಯಶಸ್ವಿ ಟಿವಿ ಶೋಗಳಲ್ಲಿ ಆಂಕರಿಂಗ್ ಮಾಡಿ, ಕರ್ನಾಟಕದ ಮನೆ ಮನಗಳಲ್ಲಿ ಸ್ಪೆಷಲ್ ವೆಲ್ ಕಮ್ ಗಿಟ್ಟಿಸಿಕೊಂಡಿರುವ ಸೃಜನ್ 2012-2013 ರಲ್ಲಿ 'ಮಾಧ್ಯಮ ಅವಾರ್ಡ್' ಹಾಗೂ 2012 ರಿಂದ ಇಲ್ಲಿಯವರೆಗೆ ಸತತವಾಗಿ ಎಲ್ಲಾ ವಾಹಿನಿಗಳಿಂದ 'ಬೆಸ್ಟ್ ಆಂಕರ್ ಅವಾರ್ಡ್' ಪಡೆದಿದ್ದಾರೆ.

    "ನೀಲ ಮೇಘ ಶ್ಯಾಮ" ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕರಾಗಿ ಹೊರ ಹೊಮ್ಮಿದರು.ನಾಯಕನಾಗಿ ನಟಿಸುತ್ತಲೇ ನವಗ್ರಹ, ಚಿಂಗಾರಿ, ಎದೆಗಾರಿಕೆ ಮುಂತಾದ ಚಿತ್ರಗಳಲ್ಲಿ  ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X