Celebs » Srujan Lokesh » Biography
ಜೀವನಚರಿತ್ರೆ
ಖ್ಯಾತ ಹಿರಿಯ ಕನ್ನಡ ಸಿನಿಮಾ ನಟ ದಿವಂಗತ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಇವರು ಜನಿಸಿದ್ದು 28 ಜೂನ್ 1980 ಬೆಂಗಳೂರಿನಲ್ಲಿ. ತಂದೆ ಲೋಕೇಶ್ ತಾಯಿ ಗಿರಿಜಾ ಲೋಕೇಶ್. ಇವರು ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಎಸ್.ಎಸ್.ಎಂ.ಆರ್.ವಿ ಕಾಲೇಜ್ ನಲ್ಲಿ.

ಇವರು ಮೊದಲು ಟಿವಿ ನಿರೂಪಕರಾಗಿ ತೆರೆಯ ಮೇಲೆ ಕಾಣಿಸಿಕಕೊಂಡರು. "ಮಜಾ ವಿತ್ ಸೃಜಾ" ಶೋ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದರು ಸೃಜನ್ ಲೋಕೇಶ್. ಇದಲ್ಲದೆ ಇವರು ರೇಡಿಯೋ ಚಾನೆಲ್ ಗಳ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ಗುರುತಿಸಿಕೊಂಡ ಸೃಜನ್. ನಿರೂಪಕರಾಗಿ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.

ಹೀಗೆ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳವ ಮೂಲಕ "ನೀಲ ಮೇಘ ಶ್ಯಾಮ" ಚಿತ್ರದಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ನಾಯಕರಾಗಿ ಹೊರ ಹೊಮ್ಮಿದ್ದಾರೆ. ನವಗ್ರಹ, ಚಿಂಗಾರಿ, ಎದೆಗಾರಿಕೆ, ಅನೇಕ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಇವರು ಅಭಿನಹಿಸಿದ್ದಾರೆ.