Celebs » Sudeep » Biography
ಜೀವನಚರಿತ್ರೆ

ಕಿಚ್ಚ ಎಂದೇ ಖ್ಯಾತಿ ಪಡೆದಿರುವ ಸುದೀಪ್ ಕನ್ನಡ, ಹಿಂದಿ, ತೆಲುಗು ಭಾಷೆಯ ನಟರಾಗಿದ್ದಾರೆ. ಇವರು ಸಂಜೀವ್ ಮಂಜಪ್ಪ ಮತ್ತು ಸರೋಜಾ ದಂಪತಿಗಳ ಮಗನಾಗಿ 2 ಸೆಪ್ಟೆಂಬರ್ 1973 ರಲ್ಲಿ ಜನಿಸಿದರು. ಇವರು ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ.

 ಇವರು ಸಿನಿಮಾಗಳಲ್ಲಿ ನಟಿಸುವುದರಲ್ಲಿ ಅಷ್ಟೇ ಅಲ್ಲದೆ ಕಾಲೇಜು ದಿನಗಳಲ್ಲಿ ಇವರು ರಾಜ್ಯ ಮಟ್ಟದ ಯುನಿವರ್ಸಿಟಿ, ಅಂಡರ್ 17, ಅಂಡರ್ 19 ನಲ್ಲಿ ಕ್ರಿಕೆಟ್ ಆಡಿದ್ದಾರೆ. ಹೀಗೆ ಮುಂದೆ ಇವರಿಗೆ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಹುಟ್ಟಿದ್ದರಿಂದ ಮುಂಬೈನ ತನೇಜ ಸ್ಕೂಲ್ ಆಫ್ ಅಕ್ಟಿಂಗ್ ನಲ್ಲಿ ತರಬೇತಿ ಪಡೆದುಕೊಂಡರು.

 2001 ರಲ್ಲಿ  ಪ್ರಿಯ ಎನ್ನುವರ ಜೊತೆ ವಿವಾಹವಾದರು. ಸುದೀಪ್ ಮೊದಲು ಚಿತ್ರರಂಗ ಪ್ರವೇಶಿಸುವ ಮುನ್ನ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಬಂಢಾರಿ ಅವರ ನಿರ್ದೇಶನದ ಪ್ರೇಮದ ಕಾದಂಬರಿಯಲ್ಲಿ ಅಭಿನಹಿಸಿದ್ದಾರೆ. ತಾಯವ್ವ ಚಿತ್ರದ ಮೂಲಕ ಇವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರು.

 ತದನಂತರ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸ್ಪರ್ಶ(1999) ಚಿತ್ರದಲ್ಲಿ ಕಾಣಿಸಿಕೊಂಡರು. 2001 ರಲ್ಲಿ ಮೂಡಿ ಬಂದ ಹುಚ್ಚ ಸಿನಿಮಾ ಸುದೀಪರನ್ನು ಕನ್ನಡ ಚಿತ್ರರಂಗದಲ್ಲಿ ಮೇರು ನಟನಾಗಿ ಮಾಡಿತು.

 2011 ರಲ್ಲಿ ನಟಿಸಿದ್ದ ವಿಷ್ಣುವರ್ಧನ ಮತ್ತು ಕೆಂಪೇಗೌಡ ಸಿನಿಮಾಗಳು ಕನ್ನಡ ಚಿತ್ರ ರಂಗದಲ್ಲಿ ಒಳ್ಳೆಯ ಸದ್ದು ಮಾಡಿತು. ಇದಾದ ನಂತರ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರನ್ನೇ ಪಡೆದಿರುವ ನಿರ್ದೇಶಕ ರಾಜಮೌಳಿ ಅವರು ನಿರ್ದೇಶಿಸಿದ ಈಗ ಚಿತ್ರದಲ್ಲಿ ಅಭಿನಹಿಸುವ ಅವಕಾಶ ಇವರಿಗೆ ದೊರೆಯಿತು. "ಈಗ" ಚಿತ್ರ ತೆಲುಗು ಚಿತ್ರರಂಗದಲ್ಲಿ ಬಹಳಷ್ಟು ಸದ್ದು ಮಾಡಿತು. ಇದರಿಂದ ಕಿಚ್ಚ ಅವರಿಗೆ ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಲು ಬಹಳಷ್ಟು ಅವಕಾಶಗಳು ದೊರೆತವು.

ಕನ್ನಡ ಚಿತ್ರರಂದಲ್ಲಿ ಅಷ್ಟೇ ಅಲ್ಲದೆ ಬೇರೆ-ಬೇರೆ ಬಾಷೆಗಳಲ್ಲಿ ನಟಿ ಸೈ ಎನಿಸಿಕೊಂಡಿರುವ ಕಿಚ್ಚ ಸುದೀಪ್ ಕೇವಲ ಚಿತ್ರದಲ್ಲಿ ಅಷ್ಟೇ ಅಲ್ಲದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಶೋ ಅನ್ನು ಕೂಡ ಇವರೇ ನಿರೂಪಿಸಿದ್ದಾರೆ. ಈ ಶೋ ಮೂಲಕ ಕರ್ನಾಟಕದ ಮನೆ ಮಾತಗಿದ್ದಾರೆ ಕಿಚ್ಚ ಸುದೀಪ್.

 

 ಸೂದೀಪ್ ಅವರ ಸಿನಿಮಾಗಳು:-

ತಾಯವ್ವ, ಸ್ಪರ್ಷ
ಹುಚ್ಚ,  ಕಿಚ್ಚ
ಪಾರ್ಥ, ಧಮ್
ನಂದಿ, ಚಂದು
ರಂಗ -sslc, ಸ್ವಾತಿಮುತ್ತು, ಮೈ ಆಟೋಗ್ರಾಫ್
ವಾಲಿ, ನಮ್ಮಣ್ಣ
ಗುನ್ನ, ತುಂಟಾಟ, ಕೇರ್ ಆಫ್ ಫುಟ್ ಪಾತ್
ಮಿ.ತೀರ್ಥ, ಜಸ್ಟ್ ಮಾತ್ ಮಾತಲ್ಲಿ
ಮಸ್ತ್ ಮಜಾ ಮಾಡಿ, ಸೈ
ನಲ್ಲ, ತಿರುಪತಿ
ಮಹಾರಾಜ, ನಂ ೭೩ ಶಾ೦ತಿನಿವಾಸ
ಗೂಳಿ, ಕಾಮಣ್ಣನ ಮಕ್ಕಳು
ಮಾತಾಡ್ ಮಾತಾಡ್ ಮಲ್ಲಿಗೆ,  ಈ ಶತಮಾನದ ವೀರ ಮದಕರಿ
ಮುಸ್ಸ೦ಜೆ ಮಾತು, ಕಿಚ್ಚ ಹುಚ್ಚ
ವೀರ ಪರಂಪರೆ, ಕೆಂಪೇಗೌಡ
ವಿಷ್ಣುವರ್ಧನ, ವರದನಾಯಕ
ಬಚ್ಚನ್, ಬಚ್ಚನ್೨
ಮಾಣಿಕ್ಯ, ಮದಗಜ
ರಾಜಹಂಸ, ರನ್ನ , ಕೋಟಿಗೊಬ್ಬ-2

ಸುದೀಪ್ ಅಭಿನಯದ ಹಿಂದಿ ಚಿತ್ರಗಳು:-

ಫೂಂಕ್
ಫೂಂಕ್ ೨
ರಣ್
ರಕ್ತ ಚರಿತ್ರ ೧
ರಕ್ತ ಚರಿತ್ರ ೨