twitter
    Celebs»V Harikrishna»Biography

    ವಿ ಹರಿಕೃಷ್ಣ ಜೀವನಚರಿತ್ರೆ

    ವಿ.ಹರಿಕೃಷ್ಣ ಇವರು ಜನಿಸಿದ್ದು 05 ನವೆಂಬರ್ 1974 ಬೆಂಗಳೂರಿನಲ್ಲಿ. ಇವರ ತಂದೆ ಮಮೋರಂಜನ್ ಪ್ರಭಾಕರ್ 1990 ರಲ್ಲಿ ಮರಣಹೊಂದಿದ ನಂತರ ಇವರು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ 1994 ರಲ್ಲಿ ಮೆಕ್ಯಾನಿಕ್ ಅಂಗಡಿಯೊಂದನ್ನು ತೆರೆದು ಮೆಕ್ಯಾನಿಕ್ ಕೆಲಸ ಮಾಡಲು ಶುರು ಮಾಡದರು. ಮೆಕ್ಯಾನಿಕ್ ಕೆಲಸ ಮಾಡುವುದ ಜೊತೆಗೆ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು.

     ಇವರು 1997 ರಲ್ಲಿ ಸಂಗೀತ ಸಂಯೋಜಕರು ಜಿ.ಕೆ ವೆಂಕಟೇಶ್ ಅವರ ಪುತ್ರಿ ವಾಣಿ ಎನ್ನುವರನ್ನು ವಿವಾಹವಾದರು. ಹರಿಕೃಷ್ಣ ಅವರ ಸಂಗೀತಕ್ಕೆ ವೆಂಕಟೇಶ್ ಅವರು ಪ್ರೇರಣೆಯಾದರು. ಅಂದಿನಿಂದ ಹರಿಕೃಷ್ಣ ಅವರು ಮೊದಲು ಸಂಗೀತ ಸಂಯೋಜಕರ ಜೊತೆ ಕೆಲಸ ಮಾಡುತ್ತಿದ್ದರು. ಹಂಸಲೇಖ, ವಿ.ರವಿಚಂದ್ರನ್, ಗುರು ಕಿರಣ್, ಮೊದಲಾದವರ ಜೊತೆಯಲ್ಲಿ ಕೀಬೋರ್ಡ್ ಅನ್ನು ನುಡಿಸುತಿದ್ದರು. ನಂತರ ಇವರು ಶಾರ್ಟ್ ಫಿಲ್ಮ್ ಗಳಿಗೆಲ್ಲ ಮ್ಯೂಸಿಕ್ ಕೊಡಲು ಪ್ರಾರಂಭಿಸದರು.


    2006 ರಲ್ಲಿ ಹರಿಕೃಷ್ಣ ಅವರಿಗೆ ದಿನಕರನ್ ತೂಗುದೀಪ್ ಅವರ ನಿರ್ಮಾಣದಲ್ಲಿ ಮೂಡಿಬಂದ "ಜೊತೆ ಜೊತೆಯಲಿ" ಚಿತ್ರಕ್ಕೆ ಸಂಗೀತ ಸಂಯೋಜಕರಾಗಿ ಅವಕಾಶ ದೊರೆಯಿತು. ಈ ಜೊತೆ ಜೊತೆಯಲಿ ಚಿತ್ರ ಭರ್ಜರಿಯಾಗಿ ಯಶಸ್ಸು ಕಂಡಿತು. ಇದರಿಂದ ಇವರಿಗೆ ಒಳ್ಳೆ ಇಮೇಜ್ ಬಂತು.

    ಹೀಗೆ ದಿನಕರ್ ತೂಗುದೀಪ್ ಅವರ ನಿರ್ಮಾಣದಲ್ಲಿ ಮತ್ತಷ್ಟು ಚಿತ್ರಗಳು ಹರಿಕೃಷ್ಣ ಅವರ ಕೈ ಸೇರಿತು. ದರ್ಶನ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರಗಳಾದ, ನವಗ್ರಹ, ಭೂಪತಿ, ಗಜ, ಪೊರ್ಕಿ, ಪ್ರಿನ್ಸ್, ಸಾರಾಥಿ, ಚಿಂಗಾರಿ, ಇನ್ನು ಹಲವು ಚಿತ್ರಗಳಲ್ಲಿ ಸಂಗೀತ ಸಂಯೋಜಕರಾಗಿ ಚಿತ್ರ ರಂಗದಲ್ಲಿ ಒಂದು ಒಳ್ಳೆಯ ಸ್ಥಾನವನ್ನು ಪಡೆದರು.

    ನಂತರ ಹರಿಕೃಷ್ಣ ಅವರು ಯೋಗರಾಜ್ ಭಟ್ ನಿರ್ಮಾಣದಲ್ಲಿ ಮೂಡಿಬಂದ "ಗಾಳಿಪಟ" ಚಿತ್ರದಲ್ಲಿ ಸಂಗೀತ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದ ಈ ಚಿತ್ರ ಪ್ರೇಕ್ಷಕರ ಮನಗೆದ್ದಿತು. ಈ ಚಿತ್ರಕ್ಕೆ ಇವರಿಗೆ ಫಿಲ್ಮ್ ಫೇರ್ ಅವಾರ್ಡ್ ಸಹ ಲಭಿಸಿತು.

    2010 ರಲ್ಲಿ ಹರಿಕೃಷ್ಣ ಅವರು 8 ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಆ ವರ್ಷದಲ್ಲಿ ಬಿಡುಗಡೆಯಾದ ಜಾಕಿ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿ ಹಾಟ್ರಿಕ್ ಫಿಲ್ಮ್ ಫೇರ್ ಅವಾರ್ಡ್ ಅನ್ನು ತಮ್ಮದಾಗಿಸಿಕೊಂಡರು. ಉಪೇಂದ್ರ ಅವರ ನಿರ್ಮಾಣದಲ್ಲಿ ಮೂಡಿ ಬಂದ "ಸೂಪರ್" ಚಿತ್ರಕ್ಕೆ ಒಳ್ಳೆ ಸಂಗೀತ ಸಂಯೋಜನೆಯನ್ನು ಮಾಡಿ ಸೈ ಎನಿಸಿಕೊಂಡರು.

    ೨೦೧೨ ರಲ್ಲಿ ಬಿಡುಗಡೆಗೊಂಡ ಅದ್ಧೂರಿ, ಕಠಾರಿ ವೀರ ಸುರಸುಂದರಾಂಗಿ, ಅಣ್ಣಬಾಂಡ್, ಜಾನು, ಇನ್ನು ಹಲವಾರು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X