twitter
    Celebs»Vijay Suriya»Biography

    ವಿಜಯ ಸೂರ್ಯ ಜೀವನಚರಿತ್ರೆ

    ವಿಜಯ್ ಸೂರ್ಯ ಕನ್ನಡ ಚಿತ್ರರಂಗದ ಸ್ಫುರದ್ರೂಪಿ ನಟ. ಇವರು 1990ರ ಸೆಪ್ಟಂಬರ್ 7ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ನಾಗರಾಜ್ ಹಾಗೂ ತಾಯಿ ಲಲಿತಾಂಬ. ಬೆಂಗಳೂರಿನ ಕ್ಲಾರೆನ್ಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣ ಮುಗಿಸಿದ ಅವರು, ಬೆಂಗಳೂರು ಯುನಿವರ್ಸಿಯಲ್ಲಿ ಪದವಿ ಪಡೆದರು. ಬಳಿಕ ಮುಂಬೈನ ಸುಭಾಷ್ ಗೈರವರ 'ವಿಸ್ಲಿಂಗ್ ವುಡ್ಸ್ ಅಕಾಡೆಮಿಯಲ್ಲಿ' ನಟನೆಯಲ್ಲಿ ಪದವಿ ಪಡೆದರು.


    ಬಾಲ್ಯದ ಕಹಿ ಅನುಭವ

    ವಿಜಯ್ ಚಿಕ್ಕವಯಸ್ಸಿನಲ್ಲಿ ತಾನು ನೋಡಲು ಚೆನ್ನಾಗಿಲ್ಲ ಎಂಬ ಕೀಳರಿಮೆಯಿಂದ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲವಂತೆ. ಉಬ್ಬು ಹಲ್ಲು, ದಪ್ಪ ಹೊಟ್ಟೆ ಮತ್ತು ಕುಳ್ಳಗೆ ಇದ್ದರಂತೆ. ಬಾಲ್ಯದಲ್ಲಿ ಇವರ ಹಲ್ಲು ನೋಡಿ ಸ್ನೇಹಿತರು `ಮೊಲ' ಅಂತ ಕರೆಯುತ್ತಿದ್ದರಂತೆ. ನಂತರ ವಿಜಯ್ ತಮ್ಮ ತಂದೆ-ತಾಯಿ ಹತ್ತಿರ ಜಗಳ ಮಾಡಿ ಹಲ್ಲಿಗೆ ಕ್ಲಿಪ್ ಹಾಕಿಸಿಕೊಂಡರು. ಇದರ ಜೊತೆ ತೊದಲುವ ಸಮಸ್ಯೆ ಕೂಡ ಇತ್ತು. ಹಲವು ಶ್ಲೋಕಗಳನ್ನು ಕಲಿತು ತೊದಲುವ ಸಮಸ್ಯೆಯಿಂದ ಹೊರಬಂದರು. ಸುಮಾರು ಎರಡು ವರ್ಷಗಳ ವರ್ಕೌಟ್ ಮಾಡಿ ದೇಹ ಹುರಿ ಮಾಡಿದರಂತೆ. 


    ಸಿನಿಪಯಣ 

    ಸುಭಾಷ್ ಗೈರವರ ಫಿಲ್ಮ್ ಸ್ಕೂಲ್‌ನಿಂದ ಮರಳಿದ ವಿಜಯ್, ಸಿಹಿಹಿ ಗೀತಾರವರ `ಪಾರ್ವತಿ ಪರಮೇಶ್ವರ' ಸೀರಿಯಲ್‌ನಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಿಸಿದರು. ನಂತರ ಕವಿತಾ ಲಂಕೇಶ್ ನಿರ್ದೇಶನದ `ಕ್ರೇಜಿ ಲೋಕ' ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಬಳಿಕ ಖ್ಯಾತ ಬಾಲಿವುಡ್ ನಟ ಜಾಕಿ ಶ್ರಾಫ್ ಅವರ 'ಉಸ್ಸಫರ್' ಎಂಬ ಕಿರುಚಿತ್ರದಲ್ಲಿ ನಟಿಸಿದರು. ತದನಂತರ ಅಗ್ನಿಸಾಕ್ಷಿ ಸೀರಿಯಲ್ ತಂಡ ತಮ್ಮ ಧಾರಾವಾಹಿಗಾಗಿ ಹೊಸ ಪ್ರತಿಭೆಯ ಶೋಧದಲ್ಲಿದ್ದಾಗ ವಿಜಯ್ ಸ್ನೇಹಿತೆ, ಮಾಜಿ ಮಿಸ್ ಸೌತ್ ಇಂಡಿಯ ವಿಜೇತೆ `ಲಕ್ಷಿ ಆನಂದ' ಎಂಬುವವರು ಅವರ ಪೋಟೋಗಳನ್ನು ಇವರಿಗೆ ತಿಳಿಯದಂತೆ ಕಳಿಸುತ್ತಾರೆ. ಈ ಮೂಲಕ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದ ವಿಜಯ್, ಅಲ್ಲಿಂದ ಮುಂದೆ ಸಿದ್ಧಾರ್ಥ ಎಂದೇ ಪ್ರಸಿದ್ಧರಾದರು. ಚಿತ್ರರಂಗಕ್ಕೆ ಬರುವ ಮುನ್ನ ಮಾಡಲ್ ಆಗಿದ್ದ ವಿಜಯ್ ಸೂರ್ಯ ಬೆಂಗಳೂರು ಮೆಗಾ ಮಾಡೆಲ್ ಹಂಟ್ 2011ರ ವಿಜೇತರಾಗಿದ್ದರು.


    ಅಗ್ನಿಸಾಕ್ಷಿ ಧಾರಾವಾಹಿ ಹೊರತಾಗಿ ವಿಜಯ್, ಕದ್ದುಮುಚ್ಚಿ ಮತ್ತು ಲಕ್ನೌ ಟು ಬೆಂಗಳೂರು, ಸ, ಇಷ್ಟಕಾಮ್ಯ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಕಲರ್ಸ್ ಕನ್ನಡದ `ಕಾಮಿಡಿ ಟಾಕೀಸ್' ಕಾರ್ಯಕ್ರಮದ ನಿರೂಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X