Celebs » Yograj Bhat » Biography
ಜೀವನಚರಿತ್ರೆ


ಭಾರತದ ಕನ್ನಡ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು, ಅಕ್ಟರ್, ಹಿನ್ನಲೆ ಗೀತಕಾರರಾದ ಯೋಗರಾಜ್ ಭಟ್ ಇವರು 08 ಅಕ್ಟೋಬರ್ 1973 ರಲ್ಲಿ ರಾಮಕೃಷ್ಣ ಮತ್ತು ಜಯಲಕ್ಷ್ಮೀ ದಂಪತಿಯ ಮಗನಾಗಿ ಉಡುಪಿ ಜಿಲ್ಲೆಯ ಮಂದರ್ತಿ ಗ್ರಾಮದಲ್ಲಿ ಜನಿಸಿದ್ದಾರೆ. ಇವರಿಗೆ  ಕಾಲೇಜು ದಿನಗಳಲ್ಲಿ ಸಿನಿಮಾಗಳ ಹುಚ್ಚು ಇತ್ತು. 22 ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಆಗಮಿಸಿ ಸಿನಿಮಾಗಳಲ್ಲಿ ಕ್ಯಾಮರಾ ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡರು.

ನಂತರ ಇವರು ಗಿರೀಶ್ ಕಾಸರವಳ್ಳಿ, ವಿ, ರವಿಚಂದ್ರನ್, ಸನೀಲ್ ಕುಮಾರ್ ದೇಸಾಯಿ ಅವರ ಅಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆ ಮುಂದೆ ಇವರು ಮೊಟ್ಟ ಮೊದಲು "ಮಣಿ" ಕನ್ನಡ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.  ಮಣಿ ಚಿತ್ರದ ಯಶಸ್ವಿಯಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ "ರಂಗ ಎಸ್.ಎಸ್,ಎಲ್.ಸಿ" ಚಿತ್ರಕ್ಕೆ ಇವರು ನಿರ್ದೇಶನ ಮಾಡಿದ್ದಾರೆ.

ಇವರು ಕೇವಲ ಚಿತ್ರಗಳಿಗೆ  ನಿರ್ದೇಶನ ಮಾಡುವುದು ಮಾತ್ರವಲ್ಲದೆ ಇವರೋಬ್ಬ ಪ್ರಸಿದ್ಧಿ ಸಂಗೀತ ರಚನೆಕಾರರು, ನಟನೆಗಾರರು ಸಹ ಆಗಿದ್ದಾರೆ.  ಹೀಗೆ ಹಲವು ಕಲೆಯನ್ನು ಅಳವಡಿಸಿಕೊಂಡಿರುವ ಯೋಗರಾಜ್ ಭಟ್ಟರು ಕನ್ನಡ ಚಿತ್ರರಂಗದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ.

ನಿರ್ದೇಶಿಸಿದ ಕೆಲ ಉತ್ತಮ ಚಿತ್ರಗಳು :

* ಮಣಿ
* ಮುಂಗಾರು ಮಳೆ.
* ಗಾಳಿಪಟ.
* ಮನಸಾರೆ.
* ಪಂಚರಂಗಿ.
* ಲೈಫು ಇಷ್ಟೇನೆ.
* ಡ್ರಾಮಾ.
* ವಾಸ್ತು ಪ್ರಕಾರ.
* ದನ ಕಾಯೋನು.

ಪ್ರಶಸ್ತಿಗಳು :

* ಫಿಲ್ಮ್ ಫೇರ್ ಪ್ರಶಸ್ತಿ- ಉತ್ತಮ ಗೀತಕಾರಕ- ಬೊಂಬೆ ಹಾಡ್ಸೋನು (ಡ್ರಾಮಾ) 2013.
* ಫಿಲ್ಮ್ ಫೇರ್ ಪ್ರಶಸ್ತಿ-  ಉತ್ತಮ ನಿರ್ದೇಶಕ (ಗಾಳಿಪಟ) 2008.
* ಫಿಲ್ಮ್ ಫೇರ್ ಪ್ರಶಸ್ತಿ- ಉತ್ತಮ ಗೀತಕಾರಕ- ಶಿವ ಅಂತ ಹೋಗುತ್ತಿದ್ದೆ (ಜಾಕಿ) 2010.