»   » 'ಮುಕುಂದ ಮುರಾರಿ'ಯ ಮೊದಲ ವಾರದ ಬಾಕ್ಸ್ ಆಫೀಸ್ ಕಲೆಕ್ಷನ್

'ಮುಕುಂದ ಮುರಾರಿ'ಯ ಮೊದಲ ವಾರದ ಬಾಕ್ಸ್ ಆಫೀಸ್ ಕಲೆಕ್ಷನ್

'ಮುಕುಂದ ಮುರಾರಿ' ಚಿತ್ರದ ವಿಕೆಂಡ್ ಕಲೆಕ್ಷನ್ ಎಷ್ಟು ಗೊತ್ತಾ? 'ಸಂತು Straight Forward' ಹಾಗೂ 'ಮುಕುಂದ ಮುರಾರಿ' ಚಿತ್ರಗಳಲ್ಲಿ ಯಾರು ಹೆಚ್ಚು ಗಳಿಸಿದ್ದಾರೆ? ಇಲ್ಲಿದೆ ನೋಡಿ.....

Posted by:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯ 'ಮುಕುಂದ ಮುರಾರಿ' ಚಿತ್ರ, ಕಳೆದ ವಾರ (ಅಕ್ಟೋಬರ್ 28) ತೆರೆಕಂಡಿತ್ತು. ಮೊದಲ ಬಾರಿಗೆ ಇಬ್ಬರು ಸೂಪರ್ ಸ್ಟಾರ್ ಗಳು ಒಟ್ಟಾಗಿ ಅಭಿನಯಿಸಿದ್ದ ಈ ಚಿತ್ರಕ್ಕೆ ಮೊದಲ ದಿನ ಭರ್ಜರಿ ಒಪನಿಂಗ್ ಸಿಕ್ಕಿತ್ತು.

ಒಬ್ಬ ಹೀರೋ ಬಂದ್ರೆನೇ ಬಾಕ್ಸ್ ಆಫೀಸ್ ನಲ್ಲಿ ಆ ಚಿತ್ರ ಧೂಳೆಬ್ಬಿಸುತ್ತೆ. ಇನ್ನೂ ಇಬ್ಬರು ಹೀರೋಗಳು ಒಟ್ಟಿಗೆ ಎಂಟ್ರಿ ಕೊಟ್ರೆ ಬಾಕ್ಸ್ ಆಫೀಸ್ ದಾಖಲೆಗಳೆಲ್ಲ ಪುಡಿ ಪುಡಿ ಆಗುತ್ತೆ ಎಂಬ ಲೆಕ್ಕಾಚಾರ ಗಾಂಧಿನಗರದ್ದು. ಇಂತಹ ನಿರೀಕ್ಷೆಯ ಮಧ್ಯೆ ಬಂದ ಸಿನಿಮಾ 'ಮುಕುಂದ ಮುರಾರಿ'.[ವಿಮರ್ಶೆ: 'ಮುಕುಂದ'ನ ಸವಾಲಿಗೆ ಪರಮಾತ್ಮ 'ಮುರಾರಿ' ಪರಾರಿ....]

ನಿರೀಕ್ಷೆಯಂತೆ 'ಮುಕುಂದ ಮುರಾರಿ'ಯನ್ನ ಜನರು ಒಪ್ಪಿಕೊಂಡಿದ್ದಾರೆ. ಕಿಚ್ಚ ಹಾಗೂ ಉಪ್ಪಿಯ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದು ಪ್ರೇಕ್ಷಕರ ಪ್ರಭುಗಳು ಕೊಟ್ಟ ಪ್ರಶಂಸೆ. ಆದ್ರೆ, ಬಾಕ್ಸ್ ಆಫೀಸ್ ನಲ್ಲಿ 'ಮುಕುಂದ ಮುರಾರಿ'ಯ ಪಲಿತಾಂಶವೇನು ಎಂಬುದು ಸಹಜವಾಗಿ ಕಾಡುವ ಪ್ರಶ್ನೆ.

ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು, 'ಮುಕುಂದ ಮುರಾರಿ'ಯ ಮೊದಲ ವಾರದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತಿರಾ ! ಮುಂದೆ ಓದಿ.....

ಮೊದಲ ದಿನದ ಗಳಿಕೆ

ಮೊದಲ ದಿನದ ಗಳಿಕೆ

ರಾಜ್ಯಾದ್ಯಂತ 290ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ 'ಮುಕುಂದ ಮುರಾರಿ', ಮೊದಲ ದಿನ ಒಳ್ಳೆ ಕಲೆಕ್ಷನ್ ಮಾಡಿದೆ. ಮೂಲಗಳ ಪ್ರಕಾರ ಫಸ್ಟ್ ಡೇ ಸುಮಾರು 2.57 ಕೋಟಿ ಬಾಚಿದೆಯಂತೆ.[ಟ್ವಿಟ್ಟರ್ ವಿಮರ್ಶೆ: 'ಮುಕುಂದ ಮುರಾರಿ'ಯ ಜುಗಲ್ ಬಂದಿಗೆ ಭಕ್ತರು ಏನಂದ್ರು ಗೊತ್ತಾ?]

ಎರಡನೇ ದಿನಕ್ಕೆ 5 ಕೋಟಿ

ಎರಡನೇ ದಿನಕ್ಕೆ 5 ಕೋಟಿ

ಮೊದಲ ದಿನ ಬಾರಿ ವ್ಯಾಪರವನ್ನೇ ಮಾಡಿದ ಸೂಪರ್ ಸ್ಟಾರ್ ಗಳ ಸಿನಿಮಾ, ಎರಡನೇ ದಿನ 2.5 ಕೋಟಿ ಗಳಿಸಿದೆಯಂತೆ. ಹೀಗಾಗಿ ಕೇವಲ ಎರಡು ದಿನಗಳಲ್ಲಿ 5 ಕೋಟಿಗಿಂತ ಹೆಚ್ಚು ಹಣವನ್ನ 'ಮುಕುಂದ ಮುರಾರಿ' ಲೂಟಿ ಮಾಡಿದೆ ಎನ್ನಲಾಗಿದೆ.['ಮುಕುಂದ ಮುರಾರಿ'ಯ ಮಾತಿನ ಸಮರಕ್ಕೆ ವಿಮರ್ಶಕರ ರೆಸ್ಪಾನ್ಸ್ ಹೇಗಿದೆ?]

ಮೊದಲ ವಾರಕ್ಕೆ ದಾಖಲೆ

ಮೊದಲ ವಾರಕ್ಕೆ ದಾಖಲೆ

ಹೀಗೆ ಆರಂಭದಿಂದಲೂ ಒಳ್ಳೆ ಬಿಸ್ ನೆಸ್ ಮಾಡಿದ ಈ ಚಿತ್ರ ವಾರಾಂತ್ಯಕ್ಕೆ ಸುಮಾರು 10 ಕೋಟಿಯನ್ನ ದಾಟಿದೆ ಎನ್ನುತ್ತಿದ್ದಾರೆ ಗಾಂಧಿನಗರದ ಪಂಡಿತರು.

'ಸಂತು' ವರ್ಸಸ್ 'ಮುಕುಂದ ಮುರಾರಿ'

'ಸಂತು' ವರ್ಸಸ್ 'ಮುಕುಂದ ಮುರಾರಿ'

ಒಂದೇ ದಿನ ಎರಡು ಬಿಗ್ ಸ್ಟಾರ್ಸ್ ಸಿನಿಮಾಗಳು ಬಂದಿದ್ದು, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಕಾದಾಡುವಂತಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಎರಡು ಸಿನಿಮಾಗಳು ಒಟ್ಟಿಗೆ ತೆರೆಕಂಡಿದ್ದರ ಪರಿಣಾಮ ಬಿಸ್ ನೆಸ್ ವಿಚಾರದಲ್ಲಿ ಎರಡು ಚಿತ್ರಗಳಿಗೂ ಕಲೆಕ್ಷನ್ ಹಂಚಿಕೆಯಾಗಿದೆ ಎನ್ನುತ್ತಿದ್ದಾರೆ ಕೆಲವರು.

ಮೊದಲ ವಾರ 'ಸಂತು' ಗಳಿಸಿದ್ದೆಷ್ಟು?

ಮೊದಲ ವಾರ 'ಸಂತು' ಗಳಿಸಿದ್ದೆಷ್ಟು?

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕ ಪಂಡಿತ್ ಅಭಿನಯಿಸಿದ್ದ 'ಸಂತು Straight Forward', ಚಿತ್ರಕ್ಕೂ ಪ್ರೇಕ್ಷಕರಿಂದ ಸೂಪರ್ ರೆಸ್ ಪಾನ್ಸ್ ಸಿಕ್ಕಿದ್ದು, ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಬೇಟೆ ಮಾಡುತ್ತಿದೆಯಂತೆ. ನಿರ್ಮಾಪಕ ಕೆ.ಮಂಜು ಹೇಳುವ ಪ್ರಕಾರ, ಮೊದಲ ವಾರದಲ್ಲಿ ಸುಮಾರು 12 ಕೋಟಿ ಗಳಿಸಿರುವ ಸಂತು, ಮುಂದೆ 25 ಕೋಟಿವರೆಗೂ ಕಲೆಕ್ಷನ್ ಮಾಡುವ ಸಾಧ್ಯತೆಯಿದೆಯಂತೆ.['ಸಂತು Straight Forward' ಒಟ್ಟಾರೆ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ]

English summary
1st week box offeice collection of Mukunda Murari. According to Gandhinagar trade pundits Mukunda Murari will collect around 10 crores.
Please Wait while comments are loading...

Kannada Photos

Go to : More Photos