ಡ್ರೈವರ್ ಗೆ 12 ಲಕ್ಷದ ಕಾರು ಗಿಫ್ಟ್ ಕೊಟ್ಟ ಅನುಷ್ಕಾ

Posted by:

ಬೆಂಗಳೂರು ಬುಲ್ ಬುಲ್ ಅನುಷ್ಕಾ ಶೆಟ್ಟಿ ತನ್ನ ಬಳಿ ಕೆಲಸ ಮಾಡುವವರಿಗೆ ಆಗಾಗ ಒಳ್ಳೊಳ್ಳೆ ಉಡುಗೊರೆಗಳನ್ನು ಕೊಡುತ್ತಿರುತ್ತಾರಂತೆ. ಈಗ ತನ್ನ ಬಳಿ ಕೆಲಸ ಮಾಡುತ್ತಿರುವ ಡ್ರೈವರ್ ಗೂ ಅದೇ ರೀತಿ ದುಬಾರಿ ಉಡುಗೊರೆಯನ್ನೇ ಕೊಡಲು ಮುಂದಾಗಿದ್ದಾರೆ.

ತನ್ನ ಕಾರಿನ ಡ್ರೈವರ್ ಗೆ ಮತ್ತೊಂದು ಕಾರನ್ನು ಗಿಫ್ಟ್ ರೂಪದಲ್ಲಿ ನೀಡಲು ಮುಂದಾಗಿದ್ದಾರೆ. ಗಿಫ್ಟ್ ಕೊಡುತ್ತಿರುವ ಕಾರಿನ ಬೆಲೆ ರು.10ರಿಂದ ರು.12 ಲಕ್ಷದ ನಡುವೆ ಇರುತ್ತದೆ ಎನ್ನುತ್ತವೆ ಟಾಲಿವುಡ್ ಮೂಲಗಳು. ಅನುಷ್ಕಾ ಡ್ರೈವರ್ ಗೆ ಲಾಟರಿ ಹೊಡೆದಂತಾಗಿದೆ.

ಇಷ್ಟೆಲ್ಲಾ ದುಬಾರಿ ಗಿಫ್ಟ್ ಕಾರು ಕೊಡಲು ಆ ಡ್ರೈವರ್ ಅಂತಹ ಘನಂದಾರಿ ಕೆಲಸ ಏನು ಮಾಡಿದ ಎಂಬುದು ಇನ್ನೂ ಗೊತ್ತಾಗಿಲ್ಲ. ಮೊದಲೇ ಆತನಿಗೆ ಕಾರು ಕೊಡ್ತೀನಿ ಎಂದು ಪ್ರಾಮಿಸ್ ಮಾಡಿದ್ದರಂತೆ. ಹಾಗಾಗಿ ಕೊಡುತ್ತಿದ್ದಾರಂತೆ.

ಸದ್ಯಕ್ಕೆ ಈಕೆ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗೆ ಔತಣಕೂಟ ಒಂದರಲ್ಲಿ ಅನುಷ್ಕಾರ ಕೈಗೆ ನಾಯಿಯೊಂದು ಕಚ್ಚಿ ದೊಡ್ಡ ರಾದ್ಧಾಂತವಾಗಿತ್ತು. ತಾರೆ ಅನುಷ್ಕಾ ಕೈಕಡಿದ ಪಪ್ಪಿ ಸುದ್ದಿ ಇಲ್ಲಿದೆ ಓದಿ.

ಅಂದಹಾಗೆ ಅನುಷ್ಕಾ ಕನ್ನಡದ ಭಕ್ತಿ ಪ್ರಧಾನ ಚಿತ್ರ 'ದೇವಿ ತುಳಜಾ ಭವಾನಿ' ಎಂಬ ಚಿತ್ರಕ್ಕೆ ಸಹಿಹಾಕಿದ್ದಾರೆ ಎಂಬ ಸುದ್ದಿ ಇದೆ. ಎನ್ ಎಂ ಸುರೇಶ್ ನಿರ್ಮಿಸುತ್ತಿರುವ ಈ ಚಿತ್ರದ ಮೂಲಕ ಅನುಷ್ಕಾ ಗಾಂಧಿನಗರಕ್ಕೆ ಅಡಿಯಿಡಲಿದ್ದಾರೆ.

ಒಟ್ಟಿನಲ್ಲಿ ಈಗ ದುಬಾರಿ ಕಾರನ್ನು ಗಿಫ್ಟ್ ಕೊಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಕಾರಿನ ಬ್ರ್ಯಾಂಡ್ ಉಳಿದ ವಿವರಗಳು ಇನ್ನಷ್ಟೇ ಹೊರಬೀಳಬೇಕು. ಕೋಟಿಗಟ್ಟರೆ ಸಂಭಾವನೆ ಎಣಿಸುವ ಅನುಷ್ಕಾ ಶೆಟ್ಟಿಗೆ ಲಕ್ಷಾಂತರ ಬೆಲೆಬಾಳುವ ಕಾರು ಒಂದು ಲೆಕ್ಕನಾ? ಅಂತಿದ್ದಾರೆ ಸಿನೆಮಾ ಮಂದಿ.

Read more about: ಅನುಷ್ಕಾ ಶೆಟ್ಟಿ, ಟಾಲಿವುಡ್, ಕಾರು, ಉಡುಗೊರೆ, anushka shetty, tollywood, car, gift

English summary
Actress Anushka Shetty is known for her generous nature in the past and she has surprised her colleagues and others with her benevolent attitude towards her staff. Now the actress has gift a Rs 12 lakhs car to her driver, who would receive the same soon.
Please Wait while comments are loading...

Kannada Photos

Go to : More Photos