twitter
    For Quick Alerts
    ALLOW NOTIFICATIONS  
    For Daily Alerts

    ಏನ್ ಹುಡ್ಗೀನೋ ಅದ್ಯಾಕಿಂಗ್ ಆಡ್ತಾಳೋ ನಯನಿ

    By Rajendra
    |

    ಡಾನ್ಸ್ ಮಾಸ್ಟರ್ ಪ್ರಭುದೇವ ಹಾಗೂ ನಟ ಸಿಲಂಬರಸನ್ (ಸಿಂಬು) ಇಬ್ಬರೂ ತಾರೆ ನಯನತಾರಾಗೆ ಕೈಕೊಟ್ಟ ಮೇಲೂ ಆಕೆಗೆ ಇನ್ನೂ ಬುದ್ಧಿಬಂದಂತಿಲ್ಲ. ಇನ್ನೂ ಪ್ರೀತಿ ಪ್ರೇಮದ ಕನಸು ಕಾಣುತ್ತಿದ್ದಾರೆ. ಗುಲಗಂಜಿಯಷ್ಟೂ ನಂಬಿಕೆ ಕಡಿಮೆಯಾಗಿಲ್ಲ. "ಎಲ್ಲೋ ಒಂದು ಕಡೆ ನನ್ನನ್ನು ಅರ್ಥ ಮಾಡಿಕೊಳ್ಳುವ ಹೃದಯ ಇದ್ದೇ ಇರುತ್ತದೆ. ಈ ವಿಚಾರದಲ್ಲಿ ಭಗವಂತ ನನ್ನ ಕೈಬಿಡಲ್ಲ" ಎಂದಿದ್ದಾರೆ.

    ಆದರೆ ಆ ಅದೃಷ್ಟವಂತ ಯಾರು ಎಂಬುದು ಮಾತ್ರ ಇನ್ನೂ ನಯನತಾರಾ ಬಾಯ್ಬಿಟ್ಟಿಲ್ಲ. ಪ್ರಭುದೇವ ಜೊತೆ ಲವ್ವು ಶುರುವಾಗುವ ಮೊದಲು ನಯನತಾರಾ ಹೆಸರು ನಟ ಸಿಲಂಬರಸನ್ (ಸಿಂಬು) ಜೊತೆ ಕೇಳಿಬಂದಿತ್ತು. ಈಗ ಮತ್ತೆ ಹಳೆ ಬಾಯ್ ಫ್ರೆಂಡ್ ಸಿಂಬುಗೇ ನಯನತಾರಾ ಗಂಟು ಬಿದ್ದಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಅದು ಎಷ್ಟು ನಿಜವೋ ಅದೆಷ್ಟೋ ಸುಳ್ಳೋ ಗೊತ್ತಿಲ್ಲ.

    ಪ್ರಭುದೇವ ಅವರನ್ನು ಮದುವೆಯಾಗುವ ಸಲುವಾಗಿ ನಯನತಾರಾ ಕ್ರಿಶ್ಚಿಯನ್ ಧರ್ಮದಿಂದ ಹಿಂದೂಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ ಅದೇನಾಯಿತೋ ಏನೋ ಅವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿ ಇಬ್ಬರೂ ನಾನೊಂದು ತೀರ ನೀನೊಂದು ತೀರ ಎಂಬಂತಾದರು.

    ಈಗ ನಯನತಾರಾ ಹಳೆಯದೆಲ್ಲವನ್ನೂ ಮರೆತಿದ್ದಾರಂತೆ. ಅದರಿಂದ ಸಾಕಷ್ಟು ಪಾಠವನ್ನೂ ಕಲಿತಿದ್ದಾರಂತೆ. "ಜೀವನದಲ್ಲಿ ಖುಷಿ ಪಡೋದಕ್ಕೆ ದೇವರು ನನಗೆ ಸಾಕಷ್ಟು ಅವಕಾಶಗಳನ್ನು ಕೊಟ್ಟಿದ್ದಾನೆ. ಪ್ರೀತಿ ಪ್ರೇಮದ ವಿಚಾರದಲ್ಲೂ ಅವನು ನನಗೆ ಸಹಾಯ ಮಾಡುತ್ತಾನೆ. ಶೀಘ್ರದಲ್ಲೇ ನನಗಾಗಿ ಒಂದು ಹೃದಯವನ್ನೂ ಹುಡುಕಿಕೊಡಲಿದ್ದಾನೆ..." ಎಂದಿದ್ದಾರೆ.

    "ನನ್ನ ಚಿತ್ರಗಳು ಸೋತಾಗ ಅದಕ್ಕೆ ಕಾರಣಗಳನ್ನು ಹುಡುಕಿಕೊಂಡಿದ್ದೇವೆ. ಮುಂದಿನ ಚಿತ್ರಗಳಲ್ಲಿ ಅದೇ ತಪ್ಪು ಮರುಕಳುಹಿಸದಂತೆ ಜಾಗ್ರತೆ ವಹಿಸಿದ್ದೇನೆ. ನನ್ನ ಜೀವನದಲ್ಲಾದ ಕಹಿ ಘಟನೆಗಳೂ ಅಷ್ಟೇ, ಸಾಕಷ್ಟು ಪಾಠ ಕಲಿಸಿವೆ. ಮುಂದೆ ಅದೇ ತಪ್ಪುಗಳಾಗದಂತೆ ಎಚ್ಚರಿಸಿವೆ. ಮರೆಯಲಾಗದ ಪಾಠ ಕಲಿತಿದ್ದೇನೆ..." ಎಂದು ವೇದಾಂತಕ್ಕೆ ಹೊರಳುತ್ತಾರೆ ನಯನತಾರಾ. ಏನ್ ಹುಡ್ಗೀರೋ ಅದ್ಯಾಕ್ ಹಿಂಗ್ ಆಡ್ತಾರೋ... ನಮ್ಮ ಕ್ರೇಜಿಸ್ಟಾರ್ ಅವರೇ ಹೇಳಬೇಕು. (ಒನ್ ಇಂಡಿಯಾ ಸಿನಿ ಡೆಸ್ಕ್)

    English summary
    Actress Nayantara doesn’t lost faith in the ‘concept’ of love. Despite her much-publicized love affair and the subsequent break-up with celebrity stars like Simbu and Prabhudeva.
    Tuesday, September 11, 2012, 7:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X