»   » ಸದ್ದಿಲ್ಲದಂತೆ ನಡದೇಹೋಯ್ತು ನಯನತಾರಾ ಮದುವೆ!

ಸದ್ದಿಲ್ಲದಂತೆ ನಡದೇಹೋಯ್ತು ನಯನತಾರಾ ಮದುವೆ!

Written by: ಉದಯರವಿ
Subscribe to Filmibeat Kannada

ಡಾನ್ಸ್ ಮಾಸ್ಟರ್ ಪ್ರಭುದೇವ ಜೊತೆಗೆ ಸಂಬಂಧ ಕಳೆದುಕೊಂಡ ಬಳಿಕ ನಟಿ ನಯನತಾರಾ ವಿರಹ ನೂರು ನೂರು ತರಹ ಎನ್ನುವಂತಿದ್ದರು. ಸ್ವಲ್ಪ ದಿನಗಳ ಬಳಿಕ ಚೇತರಿಸಿಕೊಂಡು ಹತ್ತಿರವಾಗಿದ್ದು ಸಿಂಬು ಯಾನೆ ಸಿಲಂಬರಸನ್ ಜೊತೆಗೆ.

ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದದ್ದು, ಕುಳಿತದ್ದು, ನಿಂತದ್ದು, ಎದ್ದದ್ದು ಎಲ್ಲವೂ ಸುದ್ದಿಯಾಗುತ್ತಿತ್ತು. ಈಗ ಇಬ್ಬರೂ ಮದುವೆಯಾಗಿದ್ದಾರೆ! ಅರೆ ನಯನತಾರಾ ಮದುವೆ ಇಷ್ಟು ಸಿಂಪಲ್ಲಾಗಿ ಸದ್ದುಗದ್ದಲವಿಲ್ಲದಂತೆ ನಡೆದುಹೋಯ್ತೆ? ಮುಂದೆ ಓದಿ ಇವರಿಬ್ಬರ ಮದುವೆ ಮಸಾಲಾ ಸುದ್ದಿ. [ಸಿಂಬು ನಯನತಾರಾ ಕಣ್ಣು ಕಣ್ಣು ಕಲೆತಾಗ]

Actress Nayantara gets married in idhu namma aalu

ಈ ಮದುವೆಯನ್ನು ಕಣ್ತುಂಬಿಕೊಳ್ಳಬೇಕೆಂದರೆ ಏಪ್ರಿಲ್ 2015ರ ತನಕ ಕಾಯಬೇಕು. ಸದ್ಯಕ್ಕೆ ಮದುವೆ ಫೊಟೋಗಳು ಮಾತ್ರ ಬಿಡುಗಡೆಯಾಗಿವೆ. ಕಂಪ್ಲೀಟ್ ಚಿತ್ರ ನೋಡಬೇಕೆಂದರೆ ಸ್ವಲ್ಪ ದಿನ ಕಾಯಲೇಬೇಕು. ಏಕೆಂದರೆ ಇದು ರಿಯಲ್ ಅಲ್ಲ ರೀಲ್ ಮದುವೆ.

ಇವರಿಬ್ಬರೂ ಜೊತೆಯಾಗಿ ಅಭಿನಯಿಸಿರುವ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಇದು ನಮ್ಮ ಆಲು' (ಅವಳು ನನ್ನವಳು) ಚಿತ್ರದಲ್ಲಿ ಇಬ್ಬರ ಮದುವೆ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಈ ಚಿತ್ರಕ್ಕೆ ಸಿಲಂಬರಸನ್ ಅವರೇ ಬಂಡವಾಳ ಹೂಡುತ್ತಿದ್ದು ಪಾಂಡಿರಾಜು ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.

Actress Nayantara gets married in idhu namma aalu2

ಜ್ಯೂ ರಜನಿ ಎಂದೇ ಚಿಕ್ಕಂದಿನಲ್ಲಿ ಖ್ಯಾತಿ ಗಳಿಸಿದ್ದ ಸಿಂಬು ಹಾಗೂ ನಯನಿ ನಡುವೆ ಎಲ್ಲೆ ಮೀರಿದ ಪ್ರೇಮ ಇತ್ತು ಎಂಬುದು ಬೆತ್ತಲಾಗಿರುವ ಸತ್ಯ. ಇವರಿಬ್ಬರ ಮದುವೆ ರಿಯಲ್ ಆಗಿ ಅಲ್ಲದಿದ್ದರೂ ರೀಲ್ ನಲ್ಲಾದರೂ ನಡೆಯಿತಲ್ಲಾ ಎಂಬುದೇ ಸಮಾಧಾನದ ಸಂಗತಿ.

English summary
Believe it or not South Indian actress Nayantara gets married! But not in real life. Tamil romantic comedy film Idhu Namma Aalu first look released. In this first look Silambarasan and Nayantara appeared like newely married couple.
Please Wait while comments are loading...

Kannada Photos

Go to : More Photos