»   » 'ನಾಟಿಕೋಳಿ'ಗೆ ಮಿರ್ಚಿ ಮಸಾಲೆ ರುಬ್ಬೋಕೆ ಪಾರುಲ್ ಬರ್ತಾರಾ?

'ನಾಟಿಕೋಳಿ'ಗೆ ಮಿರ್ಚಿ ಮಸಾಲೆ ರುಬ್ಬೋಕೆ ಪಾರುಲ್ ಬರ್ತಾರಾ?

Posted by:
Subscribe to Filmibeat Kannada

ನಿರ್ದೇಶಕ ಶ್ರೀನಿವಾಸ ರಾಜು ಅವರ 'ನಾಟಿಕೋಳಿ'ಗೂ ನಮ್ಮ ಸ್ಯಾಂಡಲ್ ವುಡ್ ನ ನಾಯಕಿಯರಿಗೂ ಯಾಕೋ ಆಗಿ ಬರೋಲ್ಲ ಅನ್ಸುತ್ತೆ. ಯಾಕಂದ್ರೆ ಸಾಮಾನ್ಯವಾಗಿ ಸಿನಿಮಾಗಳು ಲೋಕೇಶನ್ ಚೆಂಚ್ ಅಂದ್ರೆ, ನಮ್ಮ ನಾಟಿಕೋಳಿ ಚಿತ್ರತಂಡ ಹಿರೋಯಿನ್ ಚೇಂಚ್ ಅನ್ನುತ್ತಿದೆ.

ಈ ಮೊದಲು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮತ್ತು ಶ್ರೀನಿವಾಸ ರಾಜು ಅವರ 'ನಾಟಿಕೋಳಿ' ಸಿನಿಮಾ ತಂಡದ ನಡುವೆ ಮಾರಾಮಾರಿ ನಡೆದಿರುವ ವಿಷಯ ನಿಮಗೆ ಗೊತ್ತೇ ಇದೆ.[ಇಷ್ಟ ಆದರೆ 'ನಾಟಿಕೋಳಿ' ಓಕೆ ಎಂದ ಪ್ರಿಯಾಮಣಿ]

ಆಮೇಲೆ ರಾಗಿಣಿ ಅವರು ರಂಪ ಮಾಡಿಕೊಂಡು ಚಿತ್ರದಿಂದ ಔಟ್ ಆದ ಮೇಲೆ ನಟಿ ಪ್ರಿಯಾಮಣಿ ಅವರು ಚಿತ್ರದ ಕಥೆ ಇಷ್ಟ ಆದರೆ ಮಾಡುತ್ತೇನೆ ಇಲ್ಲಾಂದ್ರೆ ಇಲ್ಲ ಎಂದಿದ್ದರು. ಅಲ್ಲಿಗೆ ಮತ್ತೆ ಪ್ರೇಕ್ಷಕರು ನಾಟಿಕೋಳಿ ಸಾಂಬಾರು ರೆಡಿ ಆಗಬಹುದು ಎಂಬ ಸಣ್ಣ ಆಸೆಯಲ್ಲಿದ್ದರು.

ಆದರೆ ಇದೀಗ ಮತ್ತೆ ಸಮಸ್ಯೆ ಏನಪ್ಪಾ ಅಂದ್ರೆ 'ನಾಟಿಕೋಳಿ' ಚಿತ್ರಕ್ಕೆ ಮಸಾಲೆ ಅರೆಯಲು ಪ್ರಿಯಾಮಣಿ ಒಪ್ಪಿಲ್ಲವಂತೆ, ಯಾಕೆ? ಏನು? ಅನ್ನೋದರ ಬಗ್ಗೆ ಯಾರೂ ಬಾಯಿ ಬಿಡದೇ ಇದ್ದರೂ ಕೂಡ ಒಟ್ನಲ್ಲಿ ಮಣಿ ಅವರಿಗೆ ನಾಟಿಕೋಳಿ ಇಷ್ಟವಾಗದೇ ಎದ್ದು ಹೋಗಿದ್ದಾರಂತೆ.['ನಾಟಿ ಕೋಳಿ' ಸಾರಿಗೆ ಪ್ರಿಯಾಮಣಿ ಗರಂಮಸಾಲೆ ಇಲ್ಲ?]

ಇದೀಗ ಹೊಸ ವಿಷ್ಯಾ ಏನಪ್ಪಾ ಅಂದ್ರೆ, ಇವರಿಬ್ಬರ ಜಾಗಕ್ಕೆ 'ನಕ್ಕೋ ನಕ್ಕೋ' ಎಂದಿದ್ದ 'ಕಿಲ್ಲಿಂಗ್ ವೀರಪ್ಪನ್' ಬೆಡಗಿ ಗ್ಲಾಮರ್ ನಟಿ ಪಾರುಲ್ ಯಾದವ್ 'ನಾಟಿಕೋಳಿ' ಸಾಂಬಾರ್ ಗೆ ಮಸಾಲೆ ರುಬ್ಬೋಕೆ ಬರ್ತಾರೆ ಅಂತಾ ಲೇಟೇಸ್ಟ್ ಮಾಹಿತಿ. ಆದರೆ ಯಾವುದು ಸತ್ಯ ಯಾವುದು ಸುಳ್ಳು ಗೊತ್ತಿಲ್ಲ.

ಸದ್ಯಕ್ಕೆ ಗಾಂಧಿನಗರದಲ್ಲಿ ಈ ತರ ಗಾಳಿಸುದ್ದಿ ಹಬ್ಬುತ್ತಿದೆ. ಯಾವುದಕ್ಕೂ ಈ ಸುದ್ದಿ ಪಕ್ಕಾ ಅಂತಾದ ಮೇಲೆ ನಿಜಾನೋ, ಸುಳ್ಳೋ ಗೊತ್ತಾಗಬೇಕಿದೆ. ಒಟ್ನಲ್ಲಿ 'ನಾಟಿಕೋಳಿ'ಗೆ ಹೊಸ ಜೀವ ಬರುತ್ತಾ ಅಥವಾ ಮತ್ತೆ ಹೊಸ ವಿವಾದದ ಅಲೆ ಏಳುತ್ತಾ ಅಂತ ಕಾದು ನೋಡೋಣ.

English summary
According to the grapevine Actress Priyamani has not agreed to play lead in Srinivas Raju Directorial 'Nati Koli'. Now the latest report says that Actress Parul Yadav Play the lead role in 'Nati Koli'.
Please Wait while comments are loading...

Kannada Photos

Go to : More Photos