»   » ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ತಾರೆ

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ತಾರೆ

Written by: ರವಿಕಿಶೋರ್
Subscribe to Filmibeat Kannada

Actress Rani Mukherjee
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ, ಆದರೆ ಸಂಸಾರ ಮಾತ್ರ ನರಕದಲ್ಲಿ ಎಂಬ ಹೊಸ ಗಾದೆಮಾತೊಂದು ಚಾಲ್ತಿಯಲ್ಲಿದೆ. ಅದೆಲ್ಲಾ ಸರಿ ಹಾಗಿದ್ದರೆ ನಿಶ್ಚಿತಾರ್ಥ? ತಾರೆಗಳ ವಿಚಾರದಲ್ಲಿ ಗುಟ್ಟಾಗಿಯೇ ನಡೆಯುತ್ತದೆ.

ಬಾಲಿವುಡ್ ತಾರೆ ರಾಣಿ ಮುಖರ್ಜಿ ನಿಶ್ಚಿತಾರ್ಥ ಗುಟ್ಟಾಗಿ ನಡೆದು ರಟ್ಟಾಗಿದೆ. ಯಶ್ ರಾಜ್ ಫಿಲಂಸ್ ನ ಒಡೆಯ ಆದಿತ್ಯ ಚೋಪ್ರಾ ಜೊತೆ ರಾಣಿ ಮುಖರ್ಜಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುತ್ತವೆ ಬಾಲಿವುಡ್ ಮೂಲಗಳು.

ಇವರಿಬ್ಬರೂ ಕಳೆದ ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದರು. ಇವರಿಬ್ಬರದ್ದೂ ಚೋಟಿಸಿ ಲವ್ ಸ್ಟೋರಿ ಏನು ಅಲ್ಲ. ವಯಸ್ಕರ ಪ್ರೇಮ ಕಥೆಯೇ. ಇವರಿಬ್ಬರ ಮದುವೆ ಶೀಘ್ರದಲ್ಲೇ ನೆರವೇರಲಿದೆ ಎನ್ನಲಾಗಿದೆ.

ಇನ್ನೊಂದು ಮೂಲದ ಪ್ರಕಾರ ಇವರಿಬ್ಬರೂ ಈಗಾಗಲೆ ಹಾರ ಬದಲಾಯಿಸಿಕೊಂಡಿದ್ದು ಮದುವೆ ಶಾಸ್ತ್ರಗಳೆಲ್ಲಾ ಮುಗಿಸಿಕೊಂಡಿದ್ದಾರೆ ಎನ್ನುತ್ತವೆ. ಈ ಹಿಂದೆ ರಾಣಿ ಮುಖರ್ಜಿ ಹೆಸರು ಅಭಿಷೇಕ್ ಬಚ್ಚನ್ ಜೊತೆ ಕೇಳಿಬಂದಿತ್ತು. ಇಬ್ಬರೂ ಅನ್ಯೋನ್ಯವಾಗಿದ್ದರು. ಆದರೆ ಅದೇನಾಯಿತೋ ಏನೋ ಇಬ್ಬರೂ ದೂರ ದೂರ ಸರಿದರು.

"ಮದುವೆ ಎಂಬುದು ನಮ್ಮ ಕೈಯಲ್ಲಿಲ್ಲ. ಅದೆಲ್ಲಾ ದೇವರ ಆಟ" ಎನ್ನುತ್ತಿದ್ದ ರಾಣಿ, ಇತ್ತೀಚೆಗೆ ಮುಂಬೈನಲ್ಲಿ ಕ್ಲಿನಿಕ್ ಒಂದರ ಉದ್ಘಾಟನೆಗೆ ಬಂದಿದ್ದರು. ಅಲ್ಲಿ ಆಕೆಯ ಕೈಬೆರಳಲ್ಲಿ ವಜ್ರದ ಉಂಗುರ ಫಳಫಳ ಎಂದು ಹೊಳೆಯುತ್ತಿತ್ತು.

ಕ್ಯಾಮೆರಾ ಕಣ್ಣುಗಳು ಆಕೆಯ ವಜ್ರದುಂಗುರದ ಮೇಲೆ ಫೋಕಸ್ ಮಾಡಲು ಮುಂದಾಗುತ್ತಿದ್ದಂತೆ ಆಕೆ ತಮ್ಮ ಕೈಯನ್ನು ಮರೆಮಾಚಿಕೊಂಡಿದ್ದರು. ಬಹುಶಃ ರಾಣಿ ನಿಶ್ಚಿತಾರ್ಥ ಮಾಡಿಕೊಂಡಿರಬೇಕು. ಈ ಬಗ್ಗೆ ಆಕೆ ಏನೂ ಮಾತನಾಡಿಲ್ಲ ಬೇರೆ. ಬಹುಶಃ ರಾಣಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿರಬೇಕು ಎಂಬ ಸುದ್ದಿ ಹಬ್ಬಿದೆ ಅಷ್ಟೇ.

English summary
Rumors are rife that actress Rani Mukherjee and Yash Raj Films, Aditya Chopra couple may have already tied the nuptial knot in secret. Recently Rani was spotted wearing a big diamond ring.
Please Wait while comments are loading...

Kannada Photos

Go to : More Photos