»   » ಪುರುಷರನ್ನು ಬಾಸ್ಟರ್ಡ್ಸ್ ಎಂದ ಸ್ನೇಹಾ ಉಲ್ಲಾಳ್

ಪುರುಷರನ್ನು ಬಾಸ್ಟರ್ಡ್ಸ್ ಎಂದ ಸ್ನೇಹಾ ಉಲ್ಲಾಳ್

Written by: ರವಿಕಿಶೋರ್
Subscribe to Filmibeat Kannada

ಜ್ಯೂನಿಯರ್ ಐಶ್ವರ್ಯಾ ರೈ ಎಂದೇ ಗುರುತಿಸಿಕೊಂಡಿರುವ ಸ್ನೇಹಾ ಉಲ್ಲಾಳ್ ದಕ್ಷಿಣದಲ್ಲಿ ಒಂದೇ ಒಂದು ಹಿಟ್ ಚಿತ್ರಕ್ಕಾಗಿ ಒದ್ದಾಡುತ್ತಿದ್ದಾರೆ. ಅತ್ತ ಅವಕಾಶಗಳೂ ಇಲ್ಲದೆ ಇತ್ತ ಸುದ್ದಿಯಲ್ಲೂ ಇಲ್ಲದೆ ಚಡಪಡಿಸುತ್ತಿದ್ದಾರೆ.

ತೆಲುಗಿನಲ್ಲೂ ಮೂರಕ್ಕಿಳಿಯಲಿಲ್ಲ ಆರಕ್ಕೇರಲಿಲ್ಲ. ದೊಡ್ಡ ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡರೂ ಪ್ರಯೋಜನವಾಗಿಲ್ಲ. ಸದ್ಯಕ್ಕೆ ಸಣ್ಣ ಪುಟ್ಟ ಪಾತ್ರಗಳನ್ನು ಹೊರತುಪಡಿಸಿದರೆ ಸ್ನೇಹಾಗೆ ಹೇಳಿಕೊಳ್ಳುವಂತಹ ಅವಕಾಶಗಳಿಲ್ಲ.

ಈಗ ಐಟಂ ಹಾಡುಗಳಿಗೂ ಸಿದ್ಧವಾಗಿದ್ದಾರೆ ಸ್ನೇಹಾ ಉಲ್ಲಾಳ್ ಆದರೂ ಅವಕಾಶಳು ಮಾತ್ರ ಸಿಗುತ್ತಿಲ್ಲ. ಪ್ರಚಾರಕ್ಕಾಗಿ ಆಗಾಗ ಹಾಟ್ ವಿಡಿಯೋ, ಫೋಟೋಗಳನ್ನು ಹಾಕುತ್ತಾ ಬಿಟ್ಟಿ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಇತ್ತೀಚೆಗೆ ಒಂದು ಬ್ರಾಂಡಿಂಗ್ ಚಿತ್ರವನ್ನೂ ಸ್ನೇಹಾ ಬಿಡುಗಡೆ ಮಾಡಿದ್ದರು.

ಅದರಲ್ಲಿ ಒಳ ಉಡುಪುಗಳನ್ನು ಕಾಣುವಂತೆ ಮಾಡಿ ಎಲ್ಲರ ದೃಷ್ಟಿ ತನ್ನ ಮೇಲೆ ಬೀಳುವಂತೆ ಮಾಡಿದ್ದರು. ಇತ್ತೀಚೆಗೆ ಸ್ನೇಹಾ ಉಲ್ಲಾಳ್ ಟ್ವಿಟ್ಟರ್ ನಲ್ಲಿ ಪುರುಷರ ಬಗ್ಗೆ ಅಶ್ಲೀಲ ಪದವನ್ನೂ ಪ್ರಯೋಗ ಮಾಡಿದ್ದಾರೆ.

ತನ್ನ ಮದುವೆ ಬಗ್ಗೆ ಹೇಳುತ್ತಾ ಅವರು, "ಈಗಲೇ ಮದುವೆಯಾಗಬೇಕೆಂಬ ಉತ್ಸಾಹವಿಲ್ಲ. ಹಾಗಂತ ಪುರುಷರೆಲ್ಲಾ ಬಾಸ್ಟರ್ಡ್ಸ್ ಅಲ್ಲ (ಇದು ಸುಳ್ಳು), ಆದರೆ ಕೆರಿಯರ್ ಮತ್ತೊಂದು ಹಾದಿ ಹಿಡಿಯುತ್ತದೆ (ಇದು ಸತ್ಯ)" ಎಂದಿದ್ದಾರೆ.

English summary
Being workless is very hard for any heroine and Sneha Ullal has been hitting headlines with sexy photo shoots and some other explicit and arrogant comments on her Twitter page. Recently she came up with another one and surprisingly she called all men as Bastards.
Please Wait while comments are loading...

Kannada Photos

Go to : More Photos