»   » ತಾಜ್ ಮಹಲ್ ಬಳಿ ಪ್ರಿಯಕರನೊಂದಿಗೆ ತ್ರಿಷಾ ಕೃಷ್ಣನ್

ತಾಜ್ ಮಹಲ್ ಬಳಿ ಪ್ರಿಯಕರನೊಂದಿಗೆ ತ್ರಿಷಾ ಕೃಷ್ಣನ್

Written by: ರವಿಕಿಶೋರ್
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಜೊತೆಗೆ 'ಪವರ್ ***' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ತ್ರಿಷಾ ಕೃಷ್ಣನ್ ಅವರ ಮದುವೆ ಬಗೆಗಿನ ಗೊಂದಲಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ತ್ರಿಷಾ ಅವರ ತಾಯಿಯೇನೋ ತನ್ನ ಮಗಳಿಗೆ ನಿಶ್ಚಿತಾರ್ಥನೂ ಇಲ್ಲ ಮಣ್ಣು ಮಸಿ ಎಂಥದೂ ಆಗಿಲ್ಲ ಎನ್ನುತ್ತಿದ್ದಾರೆ.

ಆದರೆ ತ್ರಿಷಾ ಮಾತ್ರ ತನ್ನ ಪ್ರಿಯಕರ ಕಮ್ ಭಾವಿ ಪತಿಯೊಂದಿಗಿನ ಫೋಟೋಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದಾರೆ. ನಟಿಯೊಬ್ಬರು ಹಸೆಮಣೆ ಏರುತ್ತಿದ್ದಾರೆ ಎಂದರೆ ಅವರ ವೃತ್ತಿಬದುಕಿನ ಕೊನೆಯ ಅಧ್ಯಾಯಕ್ಕೆ ಅಡಿಯಿಡುತ್ತಿದ್ದಾರೆ ಎಂದೇ ಭಾವಿಸಲಾಗುತ್ತದೆ. [ತಾರೆ ತ್ರಿಷಾ ಕೃಷ್ಣನ್ ವರಿಸಲಿರುವ ಹುಡುಗ ಇವರೇನಾ?]

ನಟಿಯೊಬ್ಬರಿಗೆ ನಿಶ್ಚಿತಾರ್ಥ, ಮದುವೆ ಎಂದರೆ ಅವಕಾಶಗಳು ಅಧೋಮುಖವಾಗುತ್ತಾ ಸಾಗುತ್ತವೆ, ಬಹುಶಃ ಇದನ್ನು ಗಮನದಲ್ಲಿಟ್ಟುಕೊಂಡೇ ತ್ರಿಷಾ ಅವರ ತಾಯಿ ಅವರ ಮದುವೆ ಸುದ್ದಿಯನ್ನು ಅಲ್ಲಗಳೆದಿರಬಹುದು. ಆದರೆ ತ್ರಿಷಾ ಮಾತ್ರ ತಮ್ಮ ಸಂಭ್ರಮವನ್ನು ಹತ್ತಿಕ್ಕಿಕೊಳ್ಳಲಾರದೆ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈಗ ಇನ್ನೊಂದಿಷ್ಟು ಫೋಟೋಗಳ ಝಲಕ್ ನೋಡಿ.

ವಿಶೇಷ ವಿಮಾನದಲ್ಲಿ ಹಾರಾಡಿದ ತ್ರಿಷಾ

ವಿಶೇಷ ವಿಮಾನದಲ್ಲಿ ಹಾರಾಡಿದ ತ್ರಿಷಾ

ತನ್ನ ಭಾವಿ ಪತ್ನಿ ತ್ರಿಷಾಗಾಗಿ ವರುಣ್ ಮಣಿಯನ್ ವಿಶೇಷ ವಿಮಾನದಲ್ಲಿ ಕರೆದೊಯ್ದಿರುವುದು ಗಮನಾರ್ಹ ಸಂಗತಿ. ಜೊತೆಗೆ ವರುಣ್ ಗೆಳೆಯರೂ ಇದ್ದರೆನ್ನಿ. ಎಲ್ಲರೂ ಆಗ್ರಾದ ತಾಜ್ ಮಹಲ್ ಸೇರಿದಂತೆ ದೆಹಲಿಯ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.

ಆಗ್ರಾ, ದೆಹಲಿಯಲ್ಲಿ ತ್ರಿಷಾ ಅಂಡ್ ಗ್ಯಾಂಗ್

ಆಗ್ರಾ, ದೆಹಲಿಯಲ್ಲಿ ತ್ರಿಷಾ ಅಂಡ್ ಗ್ಯಾಂಗ್

ತ್ರಿಷಾ ಮತ್ತವರ ಗ್ಯಾಂಗ್ ವಿಶೇಷ ವಿಮಾನದಲ್ಲಿ ಆಗ್ರಾ, ದೆಹಲಿಯಲ್ಲಿ ಕಾಣಿಸಿಕೊಂಡದ್ದು ಹೀಗೆ.

ಪ್ರೇಮದ ಸಂಕೇತ ತಾಜ್ ಮಹಲ್ ಬಳಿ

ಪ್ರೇಮದ ಸಂಕೇತ ತಾಜ್ ಮಹಲ್ ಬಳಿ

ಪ್ರೇಮದ ಸಂಕೇತವಾದ ತಾಜ್ ಮಹಲ್ ಬಳಿ ಪ್ರೀತಿ ಪ್ರೇಮದಲ್ಲಿ ತೇಲಾಡುತ್ತಿರುವ ತ್ರಿಷಾ ಸಂಭ್ರಮಿಸಿದ ಬಗೆ.

ಖುಷಿ ಖುಷಿಯಾಗಿ ಕಳೆದ ಒಂದು ಗಳಿಗೆ

ಖುಷಿ ಖುಷಿಯಾಗಿ ಕಳೆದ ಒಂದು ಗಳಿಗೆ

ತನ್ನ ಸ್ನೇಹಿತರೊಂದಿಗೆ ತಾಜ್ ಮಹಲ್ ಬಳಿ ತ್ರಿಷಾ ಖುಷಿ ಖುಷಿಯಾಗಿ ಕಳೆದ ಒಂದು ಗಳಿಗೆ.

ದರ್ಗಾಗೆ ಇದೇ ಮೊದಲ ಭೇಟಿ

ದರ್ಗಾಗೆ ಇದೇ ಮೊದಲ ಭೇಟಿ

ದರ್ಗಾ ಬಳಿ ತ್ರಿಷಾ ಕಾಣಿಸಿಕೊಂಡಿದ್ದು ಹೀಗೆ. ಇದೇ ಮೊದಲ ಬಾರಿಗೆ ದರ್ಗಾಗೆ ಬಂದಿದ್ದೇನೆ. ದೇವರು ಸರ್ವಾಂತರ್ಯಾಮಿ ಎಂದೂ ಹೇಳಿಕೊಂಡಿದ್ದಾರೆ.

English summary
Actress Trisha Krishnan has denied rumours that she secretly got engaged to producer-businessman Varun Manian in a hush-hush ceremony recently. But recently the duo visits Taj Mahal, Check out photos.
Please Wait while comments are loading...

Kannada Photos

Go to : More Photos