ವೀಣಾ ಮಲಿಕ್ ಹಿಂದೂ ಧರ್ಮಕ್ಕೆ ಮತಾಂತರ?

Posted by:

ಪಾಕಿಸ್ತಾನದ ಬೆಡಗಿ ವೀಣಾ ಮಲಿಕ್ ಅವರು ಬಾಲಿವುಡ್ ಅಂಗಳಕ್ಕೆ ಅಡಿಯಿಟ್ಟಾಗಿನಿಂದ ಅವರ ಭಾರತೀಯ ಸಂಪ್ರದಾಯ, ಸಂಸ್ಕೃತಿಗೆ ಮಾರುಹೋದರು. ಈ ಬಗ್ಗೆ ಅಪಾರ ಒಲವು ಬೆಳಸಿಕೊಂಡರು. ಭಾರತೀಯ ಹಬ್ಬ ಹರಿದಿನಗಳನ್ನು ಆಚರಿಸಿ ಸಂಭ್ರಮಿಸಿದರು.

2012ರಲ್ಲಿ ಗಣೇಶನ ಮೂರ್ತಿಯನ್ನು ಮನೆಗೆ ತರುವ ಮೂಲಕ ಗಣಪತಿ ಬಪ್ಪ ಮೋರಿಯಾ ಎಂದು ಹಾಡಿ ಸಂಭ್ರಮಿಸಿ ಗಣೇಶ ಚತುರ್ಥಿ ಆಚರಿಸಿಕೊಂಡಿದ್ದರು. ಈ ವರ್ಷ ಬಣ್ಣದ ಹಬ್ಬ ಹೋಳಿಯನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ.

ಇಲ್ಲಿನ ಹಬ್ಬ ಹರಿದಿನಗಳನ್ನು ಅವರು ಎಂಜಾಯ್ ಮಾಡುತ್ತಿದ್ದು ಹಿಂದೂ ಸಂಪ್ರದಾಯದ ಬಗ್ಗೆ ಅವರಿಗೇ ಅರಿವಿಲ್ಲದಂತೆ ಆಸಕ್ತಿ ಬೆಳೆದುಬಿಟ್ಟಿದೆ. ಮೂಲಗಳ ಪ್ರಕಾರ ಅವರು ಹಿಂದೂ ಧರ್ಮಕ್ಕೆ ಮತಾಂತರವಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ವೀಣಾ ಹೋಳಿ ಸಂಭ್ರಮದ ಚಿತ್ರಗಳು...

ಕಳೆದ ವರ್ಷ ಗಣೇಶ ಚತುರ್ಥಿ, ಈಗ ಹೋಳಿ

ಈ ಸಂದರ್ಭದಲ್ಲಿ ಪತ್ರಿಕೆಯೊಂದರ ಜೊತೆ ಮಾತನಾಡಿರುವ ಅವರು, "ಕಳೆದ ವರ್ಷ ಗಣೇಶ ಚತುರ್ಥಿ ಆಚರಿಸಿ ಸಂಭ್ರಮಿಸಿದೆ. ಈ ವರ್ಷ ಹೋಳಿ. ಇಲ್ಲಿನ ಸಂಸ್ಕೃತಿಗೆ ಮಾರುಹೋಗಿದ್ದೇನೆ. ನಾನು ಭಾರತೀಯಳಾಗಿದ್ದೇನೆ ಎನ್ನುತ್ತಿದ್ದಾರೆ ನನ್ನ ಗೆಳೆಯರು. ಈ ಮಾತನ್ನು ನಾನು ಒಪ್ಪುತ್ತೇನೆ" ಎಂದಿದ್ದಾರೆ.

ಹಿಂದೂ ಧರ್ಮಕ್ಕೆ ಮತಾಂತರ ಸಾಧ್ಯತೆ

ಒಟ್ಟಿನಲ್ಲಿ ಅವರ ಒಟ್ಟಾರೆ ಮಾತಿನ ಅರ್ಥ ಮುಂದೊಂದು ದಿನ ಹಿಂದೂ ಧರ್ಮಕ್ಕೆ ಮತಾಂತರವಾಗುವ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ವೀಣಾ ಮಲಿಕ್ ಕನ್ನಡ, ತೆಲುಗು ಸೇರಿದಂತೆ ಹಿಂದಿಯಲ್ಲೂ ಬಿಜಿಯಾಗಿದ್ದಾರೆ. ಕನ್ನಡದ 'ಸಿಲ್ಕ್ ಸಖತ್ ಹಾಟ್' ಚಿತ್ರ ಇನ್ನೇನು ತೆರೆಗೆ ಅಪ್ಪಳಿಸುತ್ತಿದೆ.

ಭಗವದ್ಗೀತೆ ಮೇಲೂ ವೀಣಾಗೆ ಪ್ಯಾರ್

ವೀಣಾ ಮಲಿಕ್ ರಂಗಿನಾಟದ ಚಿತ್ರಗಳನ್ನು ತಮ್ಮ ಮೈಕ್ರೋ ಬ್ಲಾಗಿಂಗ್ ತಾಣದಲ್ಲೂ ಹಾಕಿಕೊಂಡಿದ್ದಾರೆ. ಈ ಹಿಂದೊಮ್ಮೆ ವೀಣಾ ಮಲಿಕ್ ಅವರಿಗೆ ಇದ್ದಕ್ಕಿದ್ದಂತೆ ಭಗವದ್ಗೀತೆ ಮೇಲೆ ಪ್ಯಾರ್ ಗೆ ಆಗ್ಬಿಟ್ಟೈತೆ.

ಮನಸ್ಸಿಗೆ ನೆಮ್ಮದಿ ಕೊಡುವ ಭಗವದ್ಗೀತೆ

ಭಗವದ್ಗೀತೆ ಪಠಣದಿಂದಲಾದರೂ ತಮ್ಮ ಮನಸ್ಸಿಗೆ ಒಂದಷ್ಟು ನೆಮ್ಮದಿ ಸಿಗುತ್ತದೆ ಎಂದು ಭಾವಿಸಿದ್ದಾರೆ. ಸದ್ಯಕ್ಕೆ "The City That Never Sleep" ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಭಗವದ್ಗೀತೆ ಬಗ್ಗೆ ವೀಣಾ ಅನಿಸಿಕೆ

ಭಗವದ್ಗೀತೆ ಓದುತ್ತಿದ್ದರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಭಕ್ತಿ ಮಾರ್ಗಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಮಾನವನು ತನ್ನ ಗುರಿಯೆಡೆಗೆ ತಲುಪಲು ಸಹಾಯ ಮಾಡುತ್ತದೆ.

ಖುರಾನ್ ಜೊತೆಗೆ ಭಗವದ್ಗೀತೆ

ನಾನು ಪ್ರತಿದಿನ ನಮಾಜ್ ಬಳಿಕ ಖುರಾನ್ ಓದುತ್ತೇನೆ. ಈಗ ಭಗವದ್ಗೀತೆಯನ್ನೂ ಓದುತ್ತಿದ್ದೇನೆ. ಕಡೆಗೆ ನನಗೆ ಅನ್ನಿಸಿದ್ದೇನೆಂದರೆ ಈ ಎರಡೂ ಗ್ರಂಥಗಳ ಸಾರ ಒಂದೇ ಅನ್ನಿಸಿತು.

See next photo feature article

ಭಗವದ್ಗೀತೆ ಓದುವುದು ಅಷ್ಟು ಸುಲಭವಲ್ಲ

ಭಗವದ್ಗೀತೆ ಓದುವುದು ಅಷ್ಟು ಸುಲಭವಲ್ಲ. ಸಂಸ್ಕೃತದಲ್ಲಿರುವ ಕಾರಣ ನಿಧಾನಕ್ಕೆ ಒಂದೊಂದನ್ನೇ ಓದಿ ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಧರ್ಮ ಎನ್ನುವುದು ನಂಬಿಕೆಗಳ ಮೇಲೆ ನಿಂತಿದೆ ಅಲ್ಲವೆ ಎನ್ನುತ್ತಾರೆ ವೀಣಾ ಮಲಿಕ್.

Read more about: veena malik, bollywood, gossip, holi, hindu, ವೀಣಾ ಮಲಿಕ್, ಬಾಲಿವುಡ್, ಗಾಸಿಪ್, ಹೋಳಿ, ಹಿಂದೂ ಧರ್ಮ

English summary
Veena Malik is a Pakistani actress, but she is fallen in love with the ethnic flavours of India. Sources close to the actress claim that she is so much fascinated by Hindu culture that it would not be an exaggeration if she convert to Hinduism.
Please Wait while comments are loading...

Kannada Photos

Go to : More Photos