»   » ಡಬ್ಬಿಂಗ್ ಬೇಕೇ? ಬೇಡ್ವೇ? ಹೃದಯಶಿವ ಪ್ರಶ್ನೆಗೆ ಉತ್ತರ

ಡಬ್ಬಿಂಗ್ ಬೇಕೇ? ಬೇಡ್ವೇ? ಹೃದಯಶಿವ ಪ್ರಶ್ನೆಗೆ ಉತ್ತರ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

'ನಮಗೆ ಡಬ್ಬಿಂಗ್ ಬೇಡ. ಅದಕ್ಕೂ ಮುಂಚೆ ಈ ಕೆಳಗಿನ ಅಂಶಗಳು ಜಾರಿಗೆ ಬರಲಿ... ಇದು ಸಾಧ್ಯವೇ ಯೋಚಿಸಿ. ಸಾಧ್ಯವಾಗುವುದೇ ಆದರೇ ನಮಗೆ ಡಬ್ಬಿಂಗ್ ಬೇಡ. ಇಲ್ಲದಿದ್ದರೆ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರೋಧಿಸಿ ಚಿತ್ರೋದ್ಯಮ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದ ಯುವ ಚಿತ್ರ ಸಾಹಿತಿ ಹೃದಯಶಿವ ಅವರು ಅಂದು ಫೇಸ್ ಬುಕ್ ಪುಟದಲ್ಲಿ ಹಾಕಿದ್ದ ಸಮಯೋಚಿತ ಪ್ರಶ್ನೆಗಳಿಗೆ ಒನ್ ಇಂಡಿಯಾ ಕನ್ನಡದ ಓದುಗರೊಬ್ಬರ ಉತ್ತರಿಸಿದ್ದಾರೆ.

ಸಾಹಿತಿ ಹೃದಯಶಿವ ಅವರ ಪ್ರಶ್ನೆಗಳು ಸಂದರ್ಭೋಚಿತವಾಗಿದ್ದರೂ ಕೆಲವು ಸಲಹೆಗಳನ್ನು ಒಪ್ಪಿಕೊಳ್ಳುವುದು ವಾಸ್ತವವಾಗಿ ಸಾಧ್ಯವಿಲ್ಲದ ಮಾತು ಎಂಬ ಉತ್ತರ ಸಿಕ್ಕಿದೆ. ಓದುಗರು ನೀಡಿದ ಉತ್ತರವನ್ನು ಇಲ್ಲಿ ಹಾಗೆ ಪ್ರಕಟಿಸಲಾಗಿದೆ. [ಡಬ್ಬಿಂಗ್ ವಿರೋಧಿಗಳಿಗೆ ಸಾಮಾನ್ಯ ಪ್ರೇಕ್ಷಕನ ಪ್ರಶ್ನೆ]

ಡಬ್ಬಿಂಗ್: ಪರಭಾಷಾ ನಟನಟಿಯರು ನಟಿಸಬಾರದು
  

ಡಬ್ಬಿಂಗ್: ಪರಭಾಷಾ ನಟನಟಿಯರು ನಟಿಸಬಾರದು

ಪ್ರಶ್ನೆ) ಯಾವುದೇ ಕಾರಣಕ್ಕೂ ಕನ್ನಡ ಚಿತ್ರಗಳಲ್ಲಿ ಹೀರೋಯಿನ್ ಸೇರಿದಂತೆ ಪರಭಾಷಾ ನಟನಟಿಯರು ನಟಿಸಬಾರದು. ನಾಯಕನಿಂದ ಹಿಡಿದು ಒಂದು ಪುಟ್ಟ ಪಾತ್ರದವರೆಗೂ ಅಪ್ಪಟ ಕನ್ನಡಿಗರೇ ನಟಿಸಬೇಕು.

ಉತ್ತರ : ಪರ ಭಾಷೆಯ ನಟಿಯರನ್ನು ಕರೆದು ಮಣೆ ಹಾಕಿ ಪಾತ್ರ ಕೊಡೋದು ಬಿಟ್ಟು ಕಾಲ ಆಯ್ತು ಈಗ ಏನಿದ್ದರು ಕನ್ನಡ ನಟಿ, ಸಹ ನಟರು, ಪೋಷಕ ನಟರು ಕನ್ನಡ ಚಿತ್ರರಂಗದಲ್ಲಿ ಜಾಸ್ತಿ ಬೆಳಿಯುತ್ತಿದ್ದಾರೆ

ಈ ರೀತಿ ತುಗಲಕ್ ರೂಲ್ಸ್ ಹಾಕಿದರೆ ಬೇರೆ ಭಾಷೆಯಲ್ಲಿ ಕನ್ನಡದ ನಟರಾದ ಸುದೀಪ್, ಶರತ್ ಲೋಹಿತಾಶ್ವ, ಅವಿನಾಶ್, ಕಿಶೋರ್ ಮುಂತಾದವರು ಜನಪ್ರಿಯ ಆಗುತ್ತಿರಲ್ಲಿಲ್ಲ

 

ಎಲ್ಲಾ ವಾದ್ಯಗಾರರೂ ಕನ್ನಡಿಗರೇ ಆಗಿರಬೇಕು
  

ಎಲ್ಲಾ ವಾದ್ಯಗಾರರೂ ಕನ್ನಡಿಗರೇ ಆಗಿರಬೇಕು

ಪ್ರಶ್ನೆ) ಪರಭಾಷಾ ಸಂಗೀತ ನಿರ್ದೇಶಕರಿಂದ ಕನ್ನಡ ಚಿತ್ರಗಳಿಗೆ ಸಂಗೀತ ಮಾಡಿಸಬಾರದು. ಕನ್ನಡದ ಸಂಗೀತ ನಿರ್ದೇಶಕರು ಸಂಗೀತ ನೀಡುವ ಕನ್ನಡ ಚಿತ್ರಗಳಿಗೂ ಪರಭಾಷೆಯ ರಿದಂ- ಕೀ ಬೋರ್ಡ್ ಪ್ಲೇಯರ್ಸ್, ಲೈವ್ ವಾದ್ಯ ನುಡಿಸುವವರು ಇರಬಾರದು. ಎಲ್ಲಾ ವಾದ್ಯಗಾರರೂ ಕನ್ನಡಿಗರೇ ಆಗಿರಬೇಕು.

ಉತ್ತರ : ರೀ ಸ್ವಾಮೀ ಇವತ್ತಿನ ಸಂಗೀತ ನಿರ್ದೇಶಕರೆಲ್ಲರು ಕನ್ನಡದವರೇ ಕನ್ನಡ ಚಿತ್ರರಂಗ ಇವತ್ತು ಸ್ವಂತ ಕನ್ನಡದ ಕಲಾವಿದರಿಗೆ ಪ್ರೊಸ್ಸಹ ನೀಡುತ್ತಿದೆ ಕನ್ನಡ ಚಿತ್ರಗಳಿಗೂ ಪರಭಾಷೆಯ ರಿದಂ- ಕೀ ಬೋರ್ಡ್ ಪ್ಲೇಯರ್ಸ್, ಲೈವ್ ವಾದ್ಯ ನೀಡುವ ಪರಭಾಷೆಯ ಕಲಾವಿದ ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕನ್ನಡದ ನೀರು ಕುಡಿದು ಬೆಳೆದ ತಮಿಳ ತೆಲುಗ ಅಥವಾ ಮಲಯಾಳಿ ಆಗಿರುತ್ತಾನೆ ಅವನೂ ನಮ್ಮ ನಿಮ್ಮ ತರಹ ಕನ್ನಡಿಗನೇ

ಪರಭಾಷಾ ಗಾಯಕರಿಂದ ಹಾಡಿಸಬಾರದು
  

ಪರಭಾಷಾ ಗಾಯಕರಿಂದ ಹಾಡಿಸಬಾರದು

3) ಪರಭಾಷಾ ಗಾಯಕರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಯೇಸುದಾಸ್, ಕೆ.ಎಸ್.ಚಿತ್ರಾ, ಸೋನುನಿಗಮ್, ಹರಿಹರನ್, ಕಾರ್ತಿಕ್, ಟಿಪ್ಪು, ಉದಿತ್ ನಾರಾಯಣ್, ಕುನಾಲ್ ಗಾಂಜಾವಾಲಾ, ಮಧು ಬಾಲಕೃಷ್ಣ, ಶ್ರೇಯಾ ಘೋಶಾಲ್, ಸುನಿಧಿ ಚೌಹಾಣ್- ಇಂಥವರಿಂದ ಕನ್ನಡ ಚಿತ್ರಗಳಿಗೆ ಹಾಡು ಹಾಡಿಸಬಾರದು. ಎಲ್ಲ ಕನ್ನಡ ಚಿತ್ರಗಳಲ್ಲೂ ಕನ್ನಡಿಗ ಗಾಯಕ/ಗಾಯಕಿಯರೇ ಹಾಡಬೇಕು

ಪರಭಾಷಾ ಗಾಯಕರಿಂದ ಹಾಡಿಸಬಾರದು ನಿಮ್ಮ ಮಾತು ಒಪ್ಪಬಹುದು. ಆದರೆ, ಸಂಗೀತಕ್ಕೆ ಭಾಷೆ ಪರಿಧಿಯಿಲ್ಲವೆಂದರೂ ಕನ್ನಡದವರಿಗೆ ಪ್ರಾಧಾನ್ಯತೆ ಕೊಡಲೇಬೇಕು

ಚಿತ್ರಗಳನ್ನು ಕನ್ನಡಕ್ಕೆ ರಿಮೇಕ್ ಮಾಡಬಾರದು
  

ಚಿತ್ರಗಳನ್ನು ಕನ್ನಡಕ್ಕೆ ರಿಮೇಕ್ ಮಾಡಬಾರದು

4) ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ರಿಮೇಕ್ ಮಾಡಬಾರದು. ಬದಲಾಗಿ ಕನ್ನಡಿಗರೇ ಬರೆದಿರುವ ಕಥೆ/ಕಾದಂಬರಿ ಅಥವಾ ಸ್ವತಃ ಕನ್ನಡ ಸಿನಿಮಾ ಲೇಖಕರು ಬರೆದಿರುವ ಕಥೆಗಳನ್ನು ಇಟ್ಟುಕೊಂಡೇ ಸಿನಿಮಾ ಮಾಡಬೇಕು. ಯಾವುದೇ ಕಾರಣಕ್ಕೂ ತೆಲುಗು, ತಮಿಳು, ಹಿಂದಿಯ ಕಥೆಗಾರರನ್ನು ಕರೆತಂದು ಕನ್ನಡ ಚಿತ್ರಗಳಿಗೆ ಕಥೆ ಬರೆಸಬಾರದು.
ಉತ್ತರ
* ಈ ಮಾತಿಗೆ 100% ಒಪ್ಪಿಗೆ ರಿಮೇಕ್ ಚಿತ್ರಗಳು ಕೂಡಾ ಸೃಜನಶೀಲತೆಗೆ ಮಾರಕ

ಕನ್ನಡ ಸಿನಿಮಾಗಳನ್ನು ನಿರ್ದೇಶಿಸಲು ಅವಕಾಶ
  

ಕನ್ನಡ ಸಿನಿಮಾಗಳನ್ನು ನಿರ್ದೇಶಿಸಲು ಅವಕಾಶ

5) ಪರಭಾಷಾ ನಿರ್ದೇಶಕರನ್ನು ಕರೆತಂದು ಕನ್ನಡ ಸಿನಿಮಾಗಳನ್ನು ನಿರ್ದೇಶಿಸಲು ಅವಕಾಶ ಮಾಡಿಕೊಡಬಾರದು. ಎಲ್ಲಾ ಕನ್ನಡ ಚಿತ್ರಗಳನ್ನು ಕನ್ನಡಿಗರೇ ನಿರ್ದೇಶಿಸಬೇಕು.
ಉತ್ತರ : ಕನ್ನಡ ನಾಡಿನಲ್ಲಿ ನಿರ್ದೇಶಕರಿಗೆನು ಕಮ್ಮಿ ಇಲ್ಲ 90% ಚಿತ್ರಗಳನ್ನು ಕನ್ನಡ ನಿರ್ದೇಶಕರೇ ನಿರ್ದೇಶನ ಮಾಡಿ ಗೆಲ್ಲುತ್ತಿದ್ದಾರೆ. ಪರಭಾಷಾ ನಿರ್ದೇಶಕರು ಕನ್ನಡ ಸಿನಿಮಾ ನಿರ್ದೇಶನ ಮಾಡಿ ಗೆದ್ದರೆ ನಿಮಗೇನ್ರಿ ನಷ್ಟ?

ಕಲಾ ನಿರ್ದೇಶಕರೂ ಕೂಡ ಕನ್ನಡದವರೇ
  

ಕಲಾ ನಿರ್ದೇಶಕರೂ ಕೂಡ ಕನ್ನಡದವರೇ

6) ಕನ್ನಡ ಚಿತ್ರಗಳ ಕ್ಯಾಮೆರಾಮ್ಯಾನ್, ಕಾಸ್ಟೂಮ್ ಡಿಸೈನರ್, ಸಂಕಲನಕಾರ, ನೃತ್ಯ ನಿರ್ದೇಶಕ, ಸಾಹಸ ನಿರ್ದೇಶಕ, ಕಲಾ ನಿರ್ದೇಶಕರೂ ಕೂಡ ಕನ್ನಡದವರೇ ಆಗಿರಬೇಕು.
ಉತ್ತರ : 90% ಎಲ್ಲ ಕನ್ನಡಿಗರೇ ಸ್ವಾಮಿ ಕನ್ನಡ ಚಿತ್ರರಂಗ 1970ನಲ್ಲಿ ಇದ್ದ ತರಹ ಇವಾಗ ಇಲ್ಲ ನಮ್ಮಲ್ಲಿ ತಂತ್ರಜ್ಞರು, ಸಹಕಲಾವಿದರು ಇದ್ದಾರೆ ಅವರೇ ಕನ್ನಡದಲ್ಲಿ ಮೆರೆಯುತ್ತಿದ್ದಾರೆ ಮತ್ತು ಬೇರೆ ಭಾಷೆಗೂ ಸಲ್ಲುತ್ತಿದ್ದಾರೆ

ಪರಭಾಷಾ ಚಿತ್ರಗಳನ್ನು ವಿತರಿಸಬಾರದು
  

ಪರಭಾಷಾ ಚಿತ್ರಗಳನ್ನು ವಿತರಿಸಬಾರದು

7) ಯಾವುದೇ ಕಾರಣಕ್ಕೂ ಕನ್ನಡದ ಚಿತ್ರವಿತರಕರು ಪರಭಾಷಾ ಚಿತ್ರಗಳ ವಿತರಣಾ ಹಕ್ಕು ಪಡೆದು ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳನ್ನು ವಿತರಿಸಬಾರದು. ಹಾಗೇನೆ, ಮಲ್ಟಿಪ್ಲೆಕ್ಸ್ ಗಳನ್ನುಳ್ಳ ಕನ್ನಡಿಗರು ತೆಲುಗು, ತಮಿಳು, ಹಿಂದಿ, ಇಂಗ್ಲೀಷ್ ಚಿತ್ರಗಳನ್ನು ತಮ್ಮ ಮಲ್ಪಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬಾರದು. ಬರೀ ಕನ್ನಡ ಚಿತ್ರಗಳನ್ನಷ್ಟೇ ಪ್ರದರ್ಶಿಸಬೇಕು.
ಉತ್ತರ  : ಹೌದು ಇದಪ್ಪ ಒಪ್ಪುವ ಮಾತು ಆದರೆ ಕನ್ನಡಿಗರೇ ಪರಭಾಷಾ ಚಿತ್ರಗಳನ್ನು ವಿತರಣ ಹಕ್ಕು ಪಡೆದು ದುಡ್ಡು ಮಾಡುತ್ತಿದ್ದಾರೆ ಇದನ್ನು ತಡೆಯೋರು ಯಾರು?
ಅವರೇ ಡಬ್ಬಿಂಗ್ ಗೆ ದಬ್ಬಾಳಿಕೆ ಮಾಡಿ ಹೋರಾಟ ಮಾಡುತ್ತಿದ್ದಾರೆ

ಕರ್ನಾಟಕದಲ್ಲೇ ಎಲ್ಲಾ ಕೆಲಸಗಳನ್ನು ಮಾಡಬೇಕು
  

ಕರ್ನಾಟಕದಲ್ಲೇ ಎಲ್ಲಾ ಕೆಲಸಗಳನ್ನು ಮಾಡಬೇಕು

8) ಕನ್ನಡ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚೆನ್ನೈ, ಬಾಂಬೆಯ ಸ್ಟುಡಿಯೋಗಳಿಗೆ ಹೋಗದೆ ಕರ್ನಾಟಕದಲ್ಲೇ ಸುಸಜ್ಜಿತವಾಗಿರುವ ಸ್ಟುಡಿಯೋಗಳಲ್ಲೇ ಎಲ್ಲಾ ಕೆಲಸಗಳನ್ನು ಮಾಡಬೇಕು.
ಕನ್ನಡ ಚಲನಚಿತ್ರರಂಗಹಾಗು ಬೆಂಗಳೂರು ಈವತ್ತಿಗೆ ಮುಂಬೈ, ಚೆನ್ನೈ, ಹೈದರಾಬಾದಿನಲ್ಲಿರುವ ಸ್ಟುಡಿಯೋ ರೀತಿಯಲ್ಲಿ ಸುಸಜ್ಜಿತವಾಗಿದೆ ಮತ್ತು ಸ್ವಾವಲಂಬಿ ಆಗಿದೆ.

* ಹೌದು ಇದು ಕೂಡಾ ಒಪ್ಪುವಂಥ ಮಾತು ಇದು ಜಾರಿಗೆ ಬರಬೇಕು

ಕನ್ನಡತನ, ಕನ್ನಡ ಸಂಸ್ಕೃತಿ ದಟ್ಟವಾಗಿರಬೇಕು.
  

ಕನ್ನಡತನ, ಕನ್ನಡ ಸಂಸ್ಕೃತಿ ದಟ್ಟವಾಗಿರಬೇಕು.

9) ಮುಖ್ಯವಾಗಿ ಕನ್ನಡ ಚಿತ್ರಗಳಲ್ಲಿ ಕನ್ನಡತನ, ಕನ್ನಡ ಸಂಸ್ಕೃತಿ ದಟ್ಟವಾಗಿರಬೇಕು.
ಹೌದು, ಇದು ಕೂಡಾ ಕೂಡಾ ಒಪ್ಪುವಂಥ ಮಾತು ಇದು ಜಾರಿಗೆ ಬರಬೇಕು

English summary
Oneindia reader has answered questions thrown by Kannada film lyricist Hrudaya Shiva regarding accepting Dubbing in Kananda cinema. Recently Hrudaya Shiva in his facebook wall raised some of the FAQs about Dubbing Ban and demanded answers from KFI artists and director who are against dubbing
Please Wait while comments are loading...

Kannada Photos

Go to : More Photos