»   » ಬಿಡುಗಡೆಗೂ ಮುನ್ನವೇ ಪವರ್ ಸ್ಟಾರ್ ಚಿತ್ರ ಲೀಕ್

ಬಿಡುಗಡೆಗೂ ಮುನ್ನವೇ ಪವರ್ ಸ್ಟಾರ್ ಚಿತ್ರ ಲೀಕ್

Written by: ಅನಂತರಾಮು, ಹೈದರಾಬಾದ್
Subscribe to Filmibeat Kannada

ಈ ರೀತಿಯ ಅಚ್ಚರಿಗಳು ಸಿನಿಮಾ ಕ್ಷೇತ್ರದಲ್ಲಿ ಬಿಟ್ಟರೆ ಇನ್ನೆಲ್ಲಾದರೂ ಕಂಡರಿಯಲು ಸಾಧ್ಯವೇ? ಬಿಡುಗಡೆಗೂ ಮುನ್ನವೇ ಭಾರಿ ಬಜೆಟ್ ಚಿತ್ರವೊಂದರ ನಕಲಿ ಸಿಡಿಗಳು ಮಾರುಕಟ್ಟೆಗೆ ಬಂದಿವೆ. ಈ ಮೂಲಕ ತೆಲುಗು ಚಿತ್ರರಂಗಕ್ಕಷ್ಟೇ ಅಲ್ಲ ಭಾರತೀಯ ಚಿತ್ರರಂಗಕ್ಕೆ ಹೊಸ ಸವಾಲೊಡ್ಡಿದೆ.

ಇಷ್ಟಕ್ಕೂ ಬಿಡುಗಡೆಗೂ ಮುನ್ನವೇ ಲೀಕ್ ಆಗಿರುವ ಚಿತ್ರ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ಅತ್ತಾರಿಂಟಿಕಿ ದಾರೇದಿ' (ಅತ್ತೆ ಮನೆಗೆ ದಾರಿಯಾವುದು). ಒಟ್ಟು 90 ನಿಮಿಷಗಳ ಕಾಲದ ನಕಲಿ ಸಿಡಿಗಳು ಈಗ ಬಿಡುಗಡೆಯಾಗಿ ತೆಲುಗು ಚಿತ್ರೋದ್ಯಮವನ್ನು ತಲ್ಲಣಗೊಳಿಸಿದೆ.

ಚಿತ್ರದ ನಕಲಿ ಸಿಡಿಗಳು ಎರಡು ವಾರದ ಮುಂಚೆಯೇ ಮಾರುಕಟ್ಟೆಗೆ ಬಂದಿರುವುದು ಅತ್ತ ನಿರ್ಮಾಪಕರು ಇತ್ತ ಅಭಿಮಾನಿಗಳನ್ನು ಕಳವಳಕ್ಕೀಡು ಮಾಡಿದೆ. ಇದರಲ್ಲಿ ಯಾರ ಕೈವಾಡ ಇರಬಹುದು ಎಂಬ ಗುಮಾನಿಗಳು ಸಾಕಷ್ಟು ಹರಿದಾಡುತ್ತಿವೆ.

ಈ ಚಿತ್ರಕ್ಕೆ ಸಂಬಂಧಿಸಿದ ನಕಲಿ ಸಿಡಿಗಳು ವಿಜಯವಾಡದಲ್ಲಿ ಕಾಳಸಂತೆಯಲ್ಲಿ ಬಿಕರಿಯಾಗುತ್ತಿವೆ. ತೆಲುಗು ಚಿತ್ರರಂಗದ ಇತಿಹಾಸದಲ್ಲೇ ಇದೊಂದು ಕಪ್ಪು ಚುಕ್ಕೆ. ಈ ದಿನವನ್ನು ತೆಲುಗು ಚಿತ್ರೋದ್ಯಮ ಬ್ಲ್ಯಾಕ್ ಡೇ ಆಗಿ ಘೋಷಿಸಿದೆ. ನಕಲಿ ಸಿಡಿ ಹಾವಳಿಯನ್ನು ತಡೆಯಲು ಅಭಿಮಾನಿಗಳು ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ ಚಿತ್ರದ ನಿರ್ಮಾಪಕರು.

ಅತ್ತಾರಿಂಟಿಕಿ ದಾರೇದಿ ನಕಲಿ ಸಿಡಿಗಳು ದಾಂಗುಡಿ

ಅತ್ತಾರಿಂಟಿಕಿ ದಾರೇದಿ ನಕಲಿ ಸಿಡಿಗಳು ದಾಂಗುಡಿ

'ಅತ್ತಾರಿಂಟಿಕಿ ದಾರೇದಿ' ಚಿತ್ರದ ನಕಲಿ ಸಿಡಿಗಳು ಹಾಗೂ ಇಂಟರ್ನೆಟ್ ಲಿಂಕ್ ಸಿಕ್ಕಿದರೆ ದಯವಿಟ್ಟು ಇವರಿಗೆ ಇ-ಮೇಲ್ ಕಳುಹಿಸಲು ಕೋರಲಾಗಿದೆ.

ಅಭಿಮಾನಿಗಳನ್ನು ವಿನಂತಿಸಿಕೊಂಡ ರಾಜಮೌಳಿ

ಅಭಿಮಾನಿಗಳನ್ನು ವಿನಂತಿಸಿಕೊಂಡ ರಾಜಮೌಳಿ

ಈ ಬಗ್ಗೆ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಖೇದ ವ್ಯಕ್ತಪಡಿಸಿದ್ದು, ನಕಲಿ ಸಿಡಿ, ಅಂತರ್ಜಾಲ ಕೊಂಡಿಗಳನ್ನು ಮೇಲಿನ ಇ-ಮೇಲ್ ಗೆ ಕಳುಹಿಸಿ ಎಂದು ವಿನಂತಿಸಿಕೊಂಡಿದ್ದಾರೆ.

ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಿರುವ ಚಿತ್ರ

ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಿರುವ ಚಿತ್ರ

ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಬಗ್ಗೆ ಆಂಧ್ರದಲ್ಲಿ ಭಾರಿ ನಿರೀಕ್ಷೆಗಳಿವೆ.

ತೆಲುಗು ಚಿತ್ರೋದ್ಯಮದಲ್ಲಿ ಹೊಸ ಆತಂಕ

ತೆಲುಗು ಚಿತ್ರೋದ್ಯಮದಲ್ಲಿ ಹೊಸ ಆತಂಕ

ಈಗ ಚಿತ್ರದ ನಕಲಿ ಸಿಡಿಗಳು ಬಂದಿರುವುದು ತೆಲುಗು ಚಿತ್ರೋದ್ಯಮದಲ್ಲಿ ಹೊಸ ಆತಂಕ ಸೃಷ್ಟಿಸಿದೆ.

ರಿಲಯನ್ಸ್ ಎಂಟರ್ ಟೈನ್ ಮೆಂಟ್ ನಿರ್ಮಾಣ

ರಿಲಯನ್ಸ್ ಎಂಟರ್ ಟೈನ್ ಮೆಂಟ್ ನಿರ್ಮಾಣ

ರಿಲಯನ್ಸ್ ಎಂಟರ್ ಟೈನ್ ಮೆಂಟ್ ಹಾಗೂ ಬಿವಿಎಸ್ಎನ್ ಪ್ರಸಾದ್ ಜಂಟಿಯಾಗಿ ನಿರ್ಮಿಸಿರುವ ಚಿತ್ರ ಇದಾಗಿದೆ.

ಪವನ್ ಜೊತೆ ಇಬ್ಬರು ನಾಯಕಿಯರು

ಪವನ್ ಜೊತೆ ಇಬ್ಬರು ನಾಯಕಿಯರು

ಪವನ್ ಕಲ್ಯಾಣ್ ಜೊತೆ ಸಮಂತಾ, ಪ್ರಣೀತಾ ನಾಯಕಿಯರು.

ಚಿತ್ರದಲ್ಲಿ ಹೀರೋಯಿನ್ ನಮ್ಮ ಪ್ರಣೀತಾ

ಚಿತ್ರದಲ್ಲಿ ಹೀರೋಯಿನ್ ನಮ್ಮ ಪ್ರಣೀತಾ

ಪವನ್ ಕಲ್ಯಾಣ್ ಅವರಿಗೆ ಅತ್ತೆಯಾಗಿ ನದಿಯಾ ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಮ್ಮ ಕನ್ನಡದ ಬೆಡಗಿ ಪ್ರಣೀತಾ ಸಹ ನಾಯಕಿ ಎಂಬುದು ವಿಶೇಷ.

ಅಕ್ಟೋಬರ್ 9ರಂದು ಚಿತ್ರ ತೆರೆಗೆ

ಅಕ್ಟೋಬರ್ 9ರಂದು ಚಿತ್ರ ತೆರೆಗೆ

ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನದ ಚಿತ್ರದ ಆಡಿಯೋಗೆ ಈಗಾಗಲೆ ತೆಲುಗು ಪ್ರೇಕ್ಷಕರು ತಲೆದೂಗಿದ್ದಾರೆ. ಈ ಚಿತ್ರ ಅಕ್ಟೋಬರ್ 9ರಂದು ತೆರೆಗೆ ಅಪ್ಪಳಿಸುತ್ತಿದೆ.

English summary
The release date of Pawan Kalyan's much-hyped and highly anticipated movie Attarintiki Daredi (AD), which was slated to hit the screen on October 9, has been preponed by two weeks. The makers of the film have taken a hasty decision after a video was allegedly leaked online over the weekend.
Please Wait while comments are loading...

Kannada Photos

Go to : More Photos