»   » ಕಿಚ್ಚನಿಗೆ ಅಣ್ಣ ಆಗ್ತಾರಂತೆ ಕ್ರೇಜಿಸ್ಟಾರ್..!

ಕಿಚ್ಚನಿಗೆ ಅಣ್ಣ ಆಗ್ತಾರಂತೆ ಕ್ರೇಜಿಸ್ಟಾರ್..!

Posted by:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಹಿಟ್ ಸಿನಿಮಾ 'ಮಾಣಿಕ್ಯ'ದಲ್ಲಿ ಒಂದಾಗಿ ಕಾಣಿಸಿಕೊಂಡಿದ್ದರು. ಮಾತ್ರವಲ್ಲದೇ ಇವರಿಬ್ಬರ ಜೋಡಿ ಹಿಟ್ ಆಗಿ ಪ್ರೇಕ್ಷಕರು ಕೂಡ ಅದನ್ನು ಸಂತೋಷದಿಂದ ಸ್ವೀಕರಿಸಿದ್ದರು.

ಇದೀಗ ಅಂದುಕೊಂಡಂತೆ ಎಲ್ಲಾ ನಡೆದರೆ ಅದೇ ಜೋಡಿ ಮತ್ತೆ ತೆರೆಯ ಮೇಲೆ ವಿಜೃಂಭಿಸಲಿದೆ. ಹೌದು ಸುದೀಪ್ ಅವರು ಆರ್ಮಿ ಆಫೀಸರ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಮುಂಬರುವ ಸಿನಿಮಾ 'ಹೆಬ್ಬುಲಿ'ಯಲ್ಲಿ ಕಿಚ್ಚ ಮತ್ತು ಕ್ರೇಜಿಸ್ಟಾರ್ ಅವರ ಜೋಡಿ ಮತ್ತೆ ಮೋಡಿ ಮಾಡಲಿದೆ.[ಸ್ಯಾಂಡಲ್ ವುಡ್ ನಲ್ಲಿ 'ಹೆಬ್ಬುಲಿ' ಘರ್ಜನೆ ಶುರು ಆಯ್ತು.!]

ನಿರ್ದೇಶಕ 'ಗಜಕೇಸರಿ' ಕೃಷ್ಣ ಅವರು ಆಕ್ಷನ್-ಕಟ್ ಹೇಳುತ್ತಿರುವ 'ಹೆಬ್ಬುಲಿ' ಸಿನಿಮಾದಲ್ಲಿ ಕ್ರೇಜಿಸ್ಟಾರ್ ಅವರನ್ನು ನಟಿಸಲು ನಿರ್ದೇಶಕರು ಕೇಳಿಕೊಂಡಿದ್ದಾರೆ. ನಿರ್ದೇಶಕರೇ ರಚಿಸಿರುವ 'ಹೆಬ್ಬುಲಿ' ಕಥೆಯನ್ನು ನಟ ರವಿಚಂದ್ರನ್ ಅವರು ಮೆಚ್ಚಿದ್ದಾರೆ. ಮತ್ತು ಸಿನಿಮಾದಲ್ಲಿ ಒಂದು ಭಾಗವಾಗಲು ಆಸಕ್ತಿ ತೋರಿದ್ದಾರೆ. ಸಿನಿಮಾದ ಹಣಕಾಸಿನ ವಿಷಯ ಸದ್ಯಕ್ಕೆ ಮಾತು-ಕತೆಯಲ್ಲಿದೆ. ಎಂದು ಮೂಲಗಳು ಮಾಹಿತಿ ನೀಡಿವೆ.[ಕಿಚ್ಚನ 'ಹೆಬ್ಬುಲಿ'ಗೆ, ದೇವಿಶ್ರೀ ಬದಲು ಅರ್ಜುನ್ ಜನ್ಯ ಮ್ಯೂಸಿಕ್]

ಇವರ ಪ್ರಕಾರ ಎಲ್ಲಾ ಸರಿಯಾದರೆ ಕಿಚ್ಚ ಸುದೀಪ್ ಅವರ ಅಣ್ಣನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನ 'ಮಿರ್ಚಿ' ಸಿನಿಮಾದ ರಿಮೇಕ್ 'ಮಾಣಿಕ್ಯ' ದಲ್ಲಿ ನಟ ರವಿಚಂದ್ರನ್ ಮತ್ತು ಸುದೀಪ್ ಅವರು ಮಿಂಚಿದ್ದು, ಆ ಸಿನಿಮಾ ಬಾಕ್ಸಾಪೀಸ್ ನಲ್ಲಿ ಒಳ್ಳೆ ಸದ್ದು ಮಾಡಿತ್ತು.

ಒಟ್ನಲ್ಲಿ ಮತ್ತೊಮ್ಮೆ ಈ ಜೋಡಿಯ ಮೋಡಿ ಸ್ಯಾಂಡಲ್ ವುಡ್ ನ ಪ್ರೇಕ್ಷಕರಿಗೆ ಲಭ್ಯವಾಗಲಿದೆ.

English summary
Actor Ravichandran and Sudeep might come together to recreate the magic of Maanikya. Director S Krishna has approached the show man and crazy star of Kannada cinema for Hebbuli which has Sudeep in the lead, sources claimed.
Please Wait while comments are loading...

Kannada Photos

Go to : More Photos