»   » ಸುದೀಪ್ 'ಮಾಣಿಕ್ಯ' ಚಿತ್ರದಲ್ಲಿ ಕ್ರೇಜಿಸ್ಟಾರ್ ಕೈವಾಡ?

ಸುದೀಪ್ 'ಮಾಣಿಕ್ಯ' ಚಿತ್ರದಲ್ಲಿ ಕ್ರೇಜಿಸ್ಟಾರ್ ಕೈವಾಡ?

Written by: ಜೀವನರಸಿಕ
Subscribe to Filmibeat Kannada

ಕಿಚ್ಚ ಸುದೀಪ್ ಆಕ್ಷನ್ ಕಟ್ ಹೇಳಿ ಅಭಿನಯಿಸುತ್ತಿರುವ 'ಮಾಣಿಕ್ಯ' ಚಿತ್ರದ ಶೂಟಿಂಗ್ ಅದ್ಧೂರಿಯಾಗಿ ನಡೀತಿದೆ. ಚಿತ್ರಕ್ಕೆ ಲಕ್ಷಗಟ್ಟಲೇ ಖರ್ಚು ಮಾಡಿ ಸೆಟ್ ಹಾಕಿಸಿದ್ದಾರೆ. ಅಂತೆಲ್ಲಾ ಸುದ್ದಿ ಕೇಳಿರ್ತೀರಾ. ಈ ಚಿತ್ರದ ಬಗೆಗಿನ ಇನ್ನೋಂದು ಇಂಟರೆಸ್ಟಿಂಗ್ ಸಂಗತಿ ತಿಳಿಯೋಣ ಬನ್ನಿ.

ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಸಿನಿಮಾದ ಮೇಕಿಂಗ್ ಬಿಟ್ಟು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಏನೂ ಇರಲಿಲ್ಲ. ಇದೇ ಮೊದಲ ಬಾರಿಗೆ ನಲ್ಲ ಸುದೀಪ್ ಹಾಗೂ ಮಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ ಒಂದೇ ಸಿನಿಮಾದಲ್ಲಿ ನಟಿಸ್ತಿರೋ ತೆಲುಗಿನ 'ಮಿರ್ಚಿ' ರೀಮೇಕ್ ಚಿತ್ರದಲ್ಲಿ 10 ಹಾಡುಗಳು ಇದೆಯಂತೆ. ['ಮಾಣಿಕ್ಯ' ಮೇಕಿಂಗ್ ವಿಡಿಯೋ ಹೈಲೈಟ್ಸ್]

ಆದರೆ ಈಗ ಚಿತ್ರದಲ್ಲಿ ಕಿಚ್ಚನ ಕಮಾಲ್ ಜೊತೆ ಕ್ರೇಜಿಸ್ಟಾರ್ ಕೂಡ ಕೆಲಸ ಮಾಡಿದ್ದಾರಾ ಅನ್ನಿಸ್ತಿದೆ. ಯಾಕಂದ್ರೆ ಕಿಚ್ಚ ಸುದೀಪ್ ಯಾವತ್ತೂ ಸಿನಿಮಾದ ಮೇಕಿಂಗ್ ನ ಬಗ್ಗೆ ತಲೆಕೆಡಿಸಿಕೊಳ್ತಾರೆ. ಆದರೆ ಸಿನಿಮಾದಲ್ಲಿ ಹಾಡುಗಳ ಬಗ್ಗೆ ತಲೆಕೆಡಿಸಿಕೊಳ್ಳೋದು ಕ್ರೇಜಿಸ್ಟಾರ್ ಮಾತ್ರ.

ಹಾಡುಗಳಲ್ಲಿ ಕ್ರೇಜಿಸ್ಟಾರ್ ಕೈವಾಡ ಇರಬಹುದೆ?
  

ಹಾಡುಗಳಲ್ಲಿ ಕ್ರೇಜಿಸ್ಟಾರ್ ಕೈವಾಡ ಇರಬಹುದೆ?

ಚಿತ್ರದಲ್ಲಿ ಹತ್ತು ಹಾಡುಗಳಿವೆ ಅಂದ್ರೆ ಇದು ಕ್ರೇಜಿಸ್ಟಾರ್ ಕೈವಾಡ ಅನ್ನೋದು ಗಾಂಧಿನಗರದ ಗುಮಾನಿ. ಇನ್ನು 10 ಹಾಡುಗಳು ಅಂದರೆ ಸಂಗೀತಪ್ರಿಯರಿಗೆ ಹಬ್ಬ ಅನ್ನೋದರಲ್ಲಿ ಅನುಮಾನವೇ ಇಲ್ಲ. ಅರ್ಜುನ್ ಜನ್ಯ ಸಂಗೀತದ 'ಮಾಣಿಕ್ಯ' ಚಿತ್ರದಲ್ಲಿ ವೆರೈಟಿ ಹಾಡುಗಳು ಚಿತ್ರಪ್ರೇಮಿಗಳ ಕಣ್ಣಿಗೆ ಕಿಚ್ಚುಹಚ್ತಾವಂತೆ.

ಎಷ್ಟು ಹಾಡುಗಳಿಗೆ ಕ್ರೇಜಿಸ್ಟಾರ್ ಸ್ಟೆಪ್ಸ್ ಹಾಕಿದ್ದಾರೋ?
  

ಎಷ್ಟು ಹಾಡುಗಳಿಗೆ ಕ್ರೇಜಿಸ್ಟಾರ್ ಸ್ಟೆಪ್ಸ್ ಹಾಕಿದ್ದಾರೋ?

ಇದರಲ್ಲಿ ಕ್ರೇಜಿಸ್ಟಾರ್ ಎಷ್ಟು ಹಾಡುಗಳಿಗೆ ಸ್ಟೆಪ್ ಹಾಕಿರಬಹುದು. ಕ್ರೇಜಿ ಸ್ಟೆಪ್ ಗಳು ಹೇಗೆ ಥ್ರಿಲ್ ಕೊಡಬಹುದು ಅಂತ ಚಿತ್ರಪ್ರೇಮಿಗಳ ಲೆಕ್ಕಾಚಾರ ಶುರುವಾಗಿದೆ. ಚಿತ್ರದ ಮೇಕಿಂಗ್ ಸ್ಟಿಲ್ಸ್ ಗಳು ನೋಡುತ್ತಿದ್ದರೆ ಅಬ್ಬಬ್ಬಾ ಅನ್ನಿಸದೆ ಇರದು.

ಹಾಡುಗಳಲ್ಲಿ ರವಿಮಾಮನನ್ನು ನೋಡೋದೆ ಮಜಾ
  

ಹಾಡುಗಳಲ್ಲಿ ರವಿಮಾಮನನ್ನು ನೋಡೋದೆ ಮಜಾ

ಯಾಕಂದ್ರೆ ರವಿಮಾಮನನ್ನ ಅದ್ದೂರಿ ಹಾಡುಗಳಲ್ಲಿ ನೋಡೋದೇ ಒಂದು ಮಜಾ. ಇಲ್ಲೂ ದ್ರಾಕ್ಷಿ, ಹೂವು ಹಣ್ಣು ಕಾಯಿ ತಂದಿದ್ದರೂ ಆಚ್ಚರಿಯಿಲ್ಲ ಎಂಬ ಗುಸುಗುಸು ಮಾತುಗಳು ಕೇಳಿಬರುತ್ತಿವೆ.

ಫೆಬ್ರವರಿ ಕೊನೆಗೆ ಮಾಣಿಕ್ಯ ತೆರೆಗೆ
  

ಫೆಬ್ರವರಿ ಕೊನೆಗೆ ಮಾಣಿಕ್ಯ ತೆರೆಗೆ

ಮಾಣಿಕ್ಯ ಚಿತ್ರ ಫೆಬ್ರವರಿ ಕೊನೆಯಲ್ಲಿ ತೆರೆಗೆ ಬರೋ ಸಾಧ್ಯತೆಗಳಿವೆ. ಕಿಚ್ಚ ಡೈರೆಕ್ಷನ್ ಅನ್ನೋ ಕಾರಣಕ್ಕೆ ಚಿತ್ರ ಹೇಗಿರ್ಬಹುದು ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿದೆ.

ಪ್ರೇಮಲೋಕದ ಕಮಾಲ್ ಇಲ್ಲೂ ಇರುತ್ತಾ?
  

ಪ್ರೇಮಲೋಕದ ಕಮಾಲ್ ಇಲ್ಲೂ ಇರುತ್ತಾ?

ಹತ್ತು ಹಾಡುಗಳು ಹೇಗೆಲ್ಲಾ ಇರ್ತವೆ, ರವಿಮಾಮನ ಪ್ರೇಮಲೋಕದ ಕಮಾಲ್ ಇರುತ್ತಾ ಅನ್ನೋ ಸಣ್ಣ ಆಸೆಯೂ ಇದೆ. ರವಿಚಂದ್ರನ್ ಚಿತ್ರಗಳಲ್ಲಿ ಹಾಡುಗಳಿಗೆ ತನ್ನದೇ ಆದಂತಹ ಮಹತ್ವ ಇರುತ್ತವೆ ಎಂಬುದು ನಿಮ್ಮ ಗಮನಕ್ಕಿರಲಿ.

English summary
There has been speculation about Crazy Star Ravichandran have a hand in Sudeep 'Manikya'? Manikya movie is a remake of telugu movie Mirchi. It is a romantic action movie in which, for the first time Sudeep and Ravichandran coming together. Ravichandran playing a prominent role in the film.
Please Wait while comments are loading...

Kannada Photos

Go to : More Photos