ನಲ್ಲನ ವಿರುದ್ಧ ಗರಂ ಆದ ಮಲ್ಲನ ಅಭಿಮಾನಿಗಳು

Written by: ಉದಯರವಿ

ನಲ್ಲ ಸುದೀಪ್ ವಿರುದ್ಧ ಮಲ್ಲ ರವಿಚಂದ್ರನ್ ಅಭಿಮಾನಿಗಳು ಗರಂ ಆಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ತಮ್ಮ ಗುರು ರವಿಚಂದ್ರನ್ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಸಂಗತಿ. ಸುದೀಪ್ ನಟಿಸಿ, ನಿರ್ದೇಶಿಸಿರುವ 'ಮಾಣಿಕ್ಯ' ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಇದೇ ಸಂದರ್ಭದಲ್ಲೇ ಸಣ್ಣ ವಿವಾದವೊಂದು ತಲೆಯೆತ್ತಿದೆ. ಅದೇನೆಂದರೆ ಸಂತೋಷ್ ಚಿತ್ರಮಂದಿರದ ಮುಂದೆ ನಿಲ್ಲಿಸಲಾಗಿರುವ ಕಟೌಟ್ ನಲ್ಲಿ ನಲ್ಲ ಮಲ್ಲರಿಬ್ಬರೂ ಇದ್ದಾರೆ. ಆದರೆ ಕಟೌಟ್ ನಲ್ಲಿ ಸುದೀಪ್ ಅವರಿಗೆ ಮಾತ್ರ ಹೂವಿನ ಹಾರ ಹಾಕಲಾಗಿದ್ದು ಕ್ರೇಜಿಸ್ಟಾರ್ ಗೆ ಹಾಕದಿರುವ ಬಗ್ಗೆ ಅಭಿಮಾನಿಗಳ ನಡುವೆ ಮನಸ್ತಾಪ ಉಂಟಾಗಿದೆ. [ಮಾಣಿಕ್ಯ ಚಿತ್ರವಿಮರ್ಶೆ]

ನಲ್ಲನ ವಿರುದ್ಧ ಗರಂ ಆದ ಮಲ್ಲನ ಅಭಿಮಾನಿಗಳು

ಚಿತ್ರದಲ್ಲಿ ರವಿಚಂದ್ರನ್ ಅವರು ಸುದೀಪ್ ಅವರಿಗೆ ತಂದೆಯಾಗಿ ಅಭಿನಯಿಸಿರುವುದು ಗೊತ್ತೇ ಇದೆ. ಈ ಬಗ್ಗೆ ಅಭಿಮಾನಿಗಳ ತಕರಾರು ಏನೂ ಇಲ್ಲ. ಆದರೆ ಚಿತ್ರಮಂದಿರದ ಮುಂದೆ ನಿಲ್ಲಿಸಿರುವ ಕಟೌಟ್ ನಲ್ಲಿ ಸುದೀಪ್ ಫೋಟೋಗೆ ಮಾತ್ರ ಭರ್ಜರಿ ಚೆಂಡು ಹೂವಿನ ಹಾರ ಹಾಕಿದ್ದಾರೆ. ಆದರೆ ಪಕ್ಕದಲ್ಲೇ ಇರುವ ರವಿಚಂದ್ರನ್ ಗೆ ಮಾತ್ರ ಒಂದೇ ಒಂದು ಹೂವಿನ ಹಾರದ ಭಾಗ್ಯ ಇಲ್ಲ.

ಇಬ್ಬರೂ ಒಟ್ಟಿಗೆ ಇರುವ ಕಟೌಟ್ ನಲ್ಲೂ ಸುದೀಪ್ ಕುತ್ತಿಗೆ ಮಾತ್ರ ಹಾರ ಬೀಳುವಂತೆ ಹಾಕಿದ್ದಾರೆ. ರವಿಚಂದ್ರನ್ ಮುಖ ಕಾಣಿಸದಂತೆ ಹಾಕಿದ್ದಾರೆ ಎಂಬುದು ಅವರ ಅಭಿಮಾನಿಗಳ ಆರೋಪ. ಒಟ್ಟಾರೆಯಾಗಿ ಒಂದು ಮಲ್ಟಿಸ್ಟಾರ್ ಸಿನಿಮಾ ಎಂದರೆ ಇದೆಲ್ಲಾ ಕಿರಿಕಿರಿ ಮಾಮೂಲಿ ಬಿಡಿ. ಒಟ್ಟಾರೆಯಾಗಿ ಅಭಿಮಾನಿಗಳ ನಡುವಿನ ಮಸ್ತಾನ ವಿಕೋಪಕ್ಕೆ ಹೋಗದಿದ್ದರೆ ಅಷ್ಟೇ ಸಾಕು.

Read more about: sudeep, ravichandran, controversy, ಸುದೀಪ್, ರವಿಚಂದ್ರನ್, ವಿವಾದ

English summary
Crazy Star Ravichandran fans furious over Sudeep fans. Ravi fans have alleged that, Ravichandran was dishonoured at the Santosh theatre. Huge garland used only for Sudeep but no garland put to Ravichandran in the cut-out.

Kannada Photos

Go to : More Photos