»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 52ನೇ ಸಿನಿಮಾನೂ ಫಿಕ್ಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 52ನೇ ಸಿನಿಮಾನೂ ಫಿಕ್ಸ್!

Written by:
Subscribe to Filmibeat Kannada
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಹಿನ್ನಲೆ ದರ್ಶನ್ ರವರ 51ನೇ ಚಿತ್ರವನ್ನ ಅನೌನ್ಸ್ ಮಾಡಲಾಗಿತ್ತು. ಬಿ.ಸುರೇಶ್ ಮತ್ತು ಶೈಲಜಾ ನಾಗ್ ಕಡೆಯಿಂದ 51ನೇ ಚಿತ್ರದ ಅಧೀಕೃತವಾಗಿ ಘೋಷಣೆಯಾಗಿತ್ತು. ಇದರ ಬೆನ್ನಲ್ಲೆ ಈಗ 52ನೇ ಚಿತ್ರವೂ ಫಿಕ್ಸ್ ಆಗಿದೆ ಎನ್ನಲಾಗಿದೆ.[ದರ್ಶನ್ 'ಬಾಸ್' ಹುಟ್ಟುಹಬ್ಬ ವಿಶೇಷ: 51ನೇ ಸಿನಿಮಾ ಅನೌನ್ಸ್]

ಹೌದು, ದರ್ಶನ್ ರವರ 52ನೇ ಚಿತ್ರವನ್ನ 'ಹೆಬ್ಬುಲಿ' ಚಿತ್ರದ ನಿರ್ಮಾಪಕ ಉಮಾಪತಿ ಅವರು ನಿರ್ಮಾಣ ಮಾಡಲಿದ್ದಾರಂತೆ. ಹೀಗಾಂತ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ನಿನ್ನೆ (ಫೆಬ್ರವರಿ 16) ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡಲಾಗಿದೆ ಅಂತೆ. ಸದ್ಯ, ನಿರ್ಮಾಪಕರು ಮಾತ್ರ ಅಂತಿಮವಾಗಿದ್ದು, ಚಿತ್ರದ ಬಗ್ಗೆ ಹೆಚ್ಚೇನೂ ಮಾಹಿತಿ ಬಹಿರಂಗವಾಗಿಲ್ಲ.

Darshan 52nd movie With Hebbuli Producer

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ, ದರ್ಶನ್ ರವರ 49ನೇ ಚಿತ್ರವನ್ನ (ತಾರಕ್) ಮಿಲನ ಪ್ರಕಾಶ್ ನಿರ್ದೇಶಿಸಲಿದ್ದಾರೆ. 50ನೇ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳ್ತಾರೆ ಅಂತ ಸುದ್ದಿ ಹರಿದಾಡುತ್ತಿದೆ. ಹೀಗಿರುವಾಗಲೇ, 51ನೇ ಚಿತ್ರ ಬಿ.ಸುರೇಶ್ ಮತ್ತು ಶೈಲಜಾ ನಾಗ್ ಅವರ ಪಾಲಾಗಿದೆ ಈಗ 52ನೇ ಸಿನಿಮಾ 'ಹೆಬ್ಬುಲಿ' ನಿರ್ಮಾಪಕರು ಫಿಕ್ಸ್ ಆಗಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಈ ಬಗ್ಗೆ ಉಮಾಪತಿ ಅವರಾಗಲಿ ಅಥವಾ ದರ್ಶನ್ ಅವರಾಗಲಿ ಖಚಿತ ಪಡಿಸಿಲ್ಲ.

ದರ್ಶನ್ ಅವರ ಮುಂದಿನ ಸಿನಿಮಾಗಳ ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದ್ತಾಯಿರಿ....

English summary
According to Source Challenging Star Darshan's 52nd Movie With Hebbuli Producer Umapathi.
Please Wait while comments are loading...

Kannada Photos

Go to : More Photos