»   » 'ಬಂಡೆ' ಚಿತ್ರಕ್ಕೆ ದರ್ಶನ್ ಅಥವಾ ಸುದೀಪ್ ಹೀರೋ

'ಬಂಡೆ' ಚಿತ್ರಕ್ಕೆ ದರ್ಶನ್ ಅಥವಾ ಸುದೀಪ್ ಹೀರೋ

Written by: ಜೀವನರಸಿಕ
Subscribe to Filmibeat Kannada

ಸುಪಾರಿ ಕಿಲ್ಲರ್ ಮುನ್ನಾ ಎನ್ ಕೌಂಟರ್ ವೇಳೆ ಮೃತಪಟ್ಟ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಕುರಿತ 'ಬಂಡೆ' ಅನ್ನೋ ಸಿನಿಮಾ ತಯಾರಾಗಲಿದೆ. ಚಿತ್ರದ ಕಥೆ ಚಿತ್ರಕಥೆ ಈಗಾಗಲೇ ತಯಾರಾಗ್ತಿದ್ದು ಮಂಜುನಾಥ ಗೊಂಡಬಾಳ ಅನ್ನೋರು ಚಿತ್ರ ಮಾಡೋಕೆ ತಯಾರಿ ನಡೆಸಿದ್ದಾರೆ.

ಚಿತ್ರವನ್ನು ಒಂದು ಕೋಟಿ ಬಜೆಟ್ ನಲ್ಲಿ ತಯಾರಾಗಲಿದ್ದು ಚಿತ್ರಕ್ಕಾಗಿ ಪ್ರತಿಭಾನ್ವಿತ ನಿರ್ದೇಶಕರ ಹುಡುಕಾಟದಲ್ಲಿದ್ದಾರಂತೆ. ಚಿತ್ರದ ಶೂಟಿಂಗ್ ಸೂಪರ್ ಕಾಪ್ ಮಲ್ಲಿಕಾರ್ಜುನ ಬಂಡೆ ಬೆಳೆದ ರಾಯಚೂರು, ಗುಲ್ಬರ್ಗ, ಮಸ್ಕಿ, ಹೈದರಾಬಾದ್ ಹಾಗೂ ಬೆಂಗಳೂರುಗಳಲ್ಲಿ ನಡೆಯಲಿದೆಯಂತೆ. [ಪಿಎಸ್ಸೈ ಬಂಡೆ ಸಾವಿಗೆ ಕಾರಣವಾದ ಪಾತಕಿ ಇವನೇ]


ಚಿತ್ರದಲ್ಲಿ ಮಲ್ಲಿಕಾರ್ಜುನ ಬಂಡೆಯವರ ಬಾಲ್ಯ ಜೀವನ, ಪೊಲೀಸ್ ಅಧಿಕಾರಿಯಾಗಿ ಸಲ್ಲಿಸಿದ ದಕ್ಷ ಸೇವೆಯೇ ಹೈಲೈಟ್. ಚಿತ್ರದಲ್ಲಿ ಬರೋ ಲಾಭದ ಮೂರನೇ ಒಂದು ಭಾಗವನ್ನ ನಿರ್ಮಾಪಕರು ಮಲ್ಲಿಕಾರ್ಜುನ ಬಂಡೆಯವರ ಮನೆಯವರಿಗೆ ನೀಡಲಿದ್ದಾರಂತೆ.

'ಬಂಡೆ' ಅನ್ನೋ ಟೈಟಲ್ ಗೆ "ಕರ್ನಾಟಕದ ರಿಯಲ್ ಸಿಂಗಂ" ಅನ್ನೋ ಟ್ಯಾಗ್ ಲೈನ್ ಕೊಟ್ಟಿರೊ ನಿರ್ಮಾಪಕರು ಬಂಡೆಯ ಪಾತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶರ್ ರಿಗೆ ಸೂಟಾಗುತ್ತೆ. ಇಲ್ಲದಿದ್ರೆ ಸುದೀಪ್ ರನ್ನು ಸಂಪರ್ಕಿಸ್ತೀವಿ ಅಂದಿದ್ದಾರೆ.

ಆದರೆ ಪಾಪ ಒಂದು ಕೋಟಿಯಲ್ಲಿ ಚಿತ್ರ ಮಾಡೋಕೆ ಹೊರಟಿರೋ ನಿರ್ಮಾಪಕರಿಗೆ ಗೊತ್ತಿಲ್ಲ ಅನ್ನಿಸುತ್ತೆ ದರ್ಶನ್, ಸುದೀಪ್ ಸಂಭಾವನೆಯಲ್ಲಿ ಅಂತಹಾ ನಾಲ್ಕು ಬಂಡೆ ಸಿನಿಮಾ ಮಾಡ್ಬಹುದು ಅಂತ. 'ಬಂಡೆ' ಚಿತ್ರಕ್ಕೆ ನಾಯಕ ನಟನಾಗಿ ಸಾಯಿಕುಮಾರ್ ಬಂದರೂ ಅಚ್ಚರಿಯಿಲ್ಲ.

English summary
If sources are to be believed Challenging Star Darshan or Kichcha Sudeep to play a role of Mallikarjun Bande, who lost his life after getting injured and was shot on head during the gun fight between Gulbarga police and Munna darabar , a wanted rowdy sheeter in Gulbarga. Kannada movie titled as 'Bande', sub title 'Karnataka real Singam'.
Please Wait while comments are loading...