»   » 'ಜೋಗಿ ಪ್ರೇಮ್ ಜತೆ ದಿಯಾ ನಟಿಸ್ತಾ ಇಲ್ವಂತೆ'

'ಜೋಗಿ ಪ್ರೇಮ್ ಜತೆ ದಿಯಾ ನಟಿಸ್ತಾ ಇಲ್ವಂತೆ'

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

'ನನಗೆ ತುಂಬಾ ಕುತೂಹಲ ಹುಟ್ಟುತ್ತಿದೆ. ನನಗೇ ಗೊತ್ತಿಲ್ಲದ್ದಂತೆ ನಾನು ದಕ್ಷಿಣ ಭಾರತದಲ್ಲಿ ನಟಿಸಲು ಒಪ್ಪಿಕೊಂಡಿದ್ದೀನಂತೆ ಎಲ್ಲವೂ ಸುಳ್ಳು ಸುದ್ದಿ' ಎಂದು ಕೊಂಚ ಗರಂ ಆಗಿ ನಟಿ ಕಮ್ ನಿರ್ಮಾಪಕಿ, ಭಾರತೀಯ ಸುಂದರಿ ದಿಯಾ ಮಿರ್ಜಾ ಸಾಮಾಜಿಕ ಜಾಲ ತಾಣದಲ್ಲಿ ಸೋಮವಾರ ಟ್ವೀಟ್ ಸ್ಪಷ್ಟನೆ ನೀಡಿದ್ದಾರೆ.

ನಟ ಕಮ್ ನಿರ್ದೇಶಕ ಪ್ರೇಮ್ ಅವರ ಅಭಿನಯದ ಹೊಸ ಚಿತ್ರ ಭಂ ಭಂ ಬೋಲೇನಾಥ್ ಗಾಗಿ ಹಿಂದಿ ಚಿತ್ರರಂಗದ ತಾರೆ ದಿಯಾ ಮಿರ್ಜಾ ಅವರನ್ನು ಕರೆತರುತ್ತಿದ್ದೇವೆ. ಅವರೊಂದಿಗೆ ಮಾತುಕತೆ ಮುಗಿದಿದೆ. ಇನ್ನೇನು ಕಾಲ್ ಶೀಟ್ ನೀಡಿ ಶೂಟಿಂಗ್ ಗೆ ಬರಬೇಕು ಅಷ್ಟೇ ಎಂದು ಚಿತ್ರದ ನಿರ್ಮಾಪಕ ಸುರೇಶ್ ಬಾಬು ಅವರು ಇತ್ತೀಚೆಗೆ ಚಿತ್ರ ಸೆಟ್ಟೇರುತ್ತಿದ್ದಂತೆ ಘೋಷಿಸಿದ್ದರು.

ಸುರೇಶ್ ಬಾಬು ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಹಲವು ಮಾಧ್ಯಮಗಳಲ್ಲಿ ದಿಯಾ ಮಿರ್ಜಾ ಕನ್ನಡಕ್ಕೆ ಎಂದು ಸುದ್ದಿ ಪ್ರಸಾರ ಕೂಡಾ ಆಗಿತ್ತು. ಈ ಸುದ್ದಿ ಹಾಗೂ ಹೀಗೂ ದಿಯಾ ಕಿವಿಗೂ ಬಿದ್ದಿದೆ. ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ದಿಯಾ ಮಿರ್ಜಾ ನಾನು ಯಾವುದೇ ರಮೇಶ್ ಎಂಬ ವ್ಯಕ್ತಿಯನ್ನು ಕಂಡಿಲ್ಲ ಯಾರು ನನ್ನ ಜತೆ ಚಿತ್ರದ ವಿಷಯವಾಗಿ ಮಾತುಕತೆ ನಡೆಸಿಲ್ಲ ಎಂದು ಐಎಎನ್ ಎಸ್ ಸುದ್ದಿ ಸಂಸ್ಥೆ ಮೂಲಕ ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿದ್ದಾರೆ.

ಶ್ರೀನಿವಾಸ್ ತಮ್ಮಯ್ಯ ಅವರ ನಿರ್ದೇಶನ ಭಂ ಭಂ ಬೋಲೆನಾಥ್ ಚಿತ್ರ ಸೆಟ್ಟೇರುತ್ತಿದ್ದಂತೆ ದೊಡ್ಡ ಸುದ್ದಿಯಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಚಿತ್ರದ ಟೈಟಲ್ ಲಾಂಚ್ ಮಾಡಿ ಶುಭ ಕೋರಿದ್ದರು. ಪ್ರೇಮ್ ಮತ್ತೊಮ್ಮೆ ಭರ್ಜರಿ ಮೀಸೆ ಬಿಟ್ಟು ಬೋಲೇನಾಥ್ ಆಗುವ ಹುಮ್ಮಸ್ಸಿನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟರಲ್ಲಿ ನಿರ್ಮಾಪಕರ ಆತುರದ ಹೇಳಿಕೆ ಕಿರಿಕಿರಿ ಉಂಟು ಮಾಡಿದೆ..

ಭಂ ಭಂ ನಿರ್ಮಾಪಕ ಸುರೇಶ್ ಹೇಳಿದ್ದೇನು?
  

ಭಂ ಭಂ ನಿರ್ಮಾಪಕ ಸುರೇಶ್ ಹೇಳಿದ್ದೇನು?

ಭಂ ಭಂ ಬೊಲೇನಾಥ್ ಚಿತ್ರದ ನಿರ್ಮಾಪಕ ಸುರೇಶ್ ಅವರು ಅಂದು ಮಾತನಾಡಿ ದಿಯಾ ಮಿರ್ಜಾ ಅವರನ್ನು ಕನ್ನಡ ಚಿತ್ರಕ್ಕೆ ಕರೆ ತರಲು ರಮೇಶ್ ಎಂಬುವವರು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿಯಾ ಅವರಿಗೆ ಈಗಾಗಲೇ ಕಥೆ ಹೇಳಲಾಗಿದೆ. ಕಥೆ ಕೇಳಿ ದಿಯಾ ಥ್ರಿಲ್ ಆಗಿದ್ದಾರೆ. ಸದ್ಯದಲ್ಲೇ ಬೆಂಗಳೂರಿಗೆ ಬಂದು ಸಹಿ ಹಾಕಲಿದ್ದಾರೆ. ಚಿತ್ರತಂಡದೊಡನೆ ಮಾತುಕತೆ ನಡೆಸಲಿದ್ದಾರೆ ಎಂದಿದ್ದರು.

ಅನುಮತಿ ಇಲ್ಲದೆ ಹೆಸರು ಬಳಕೆಗೆ ದಿಯಾ ಗರಂ
  

ಅನುಮತಿ ಇಲ್ಲದೆ ಹೆಸರು ಬಳಕೆಗೆ ದಿಯಾ ಗರಂ

ನಾನು ಕಥೆ ಕೇಳಿ ಒಪ್ಪಿಗೆ ನೀಡಿದ್ದೇನೆ. ಚಿತ್ರಕ್ಕೆ ಸಹಿ ಹಾಕಿದ್ದೇನೆ ಎಂದು ಗಿಮಿಕ್ ಮಾಡುವ ಅವಶ್ಯಕತೆ ಏನಿದೆ? ಚಿತ್ರ, ಒಪ್ಪಿಗೆಯಾದರೆ ಯಾವುದೇ ಭಾಷೆಯಲ್ಲಿ ನಾನು ನಟಿಸಲು ಸಿದ್ದ.

ಆದರೆ, ನನ್ನನ್ನು ಈ ಬಗ್ಗೆ ಮಾತನಾಡಿಸದೆ ಒಪ್ಪಿಗೆ ನೀಡಿದ್ದೇನೆ ಎಂದೆಲ್ಲ ಹೆಸರು ಬಳಸಿಕೊಳ್ಳುತ್ತಿರುವುದೇಕೆ? ಈ ಬಗ್ಗೆ ಹೇಳಿಕೆ ನೀಡಿರುವವರು ಯಾರು ಎಂಬುದೇ ನನಗೆ ಗೊತ್ತಿಲ್ಲ ಎಂದು ದಿಯಾ ಮಿರ್ಜಾ ಹೇಳಿದ್ದಾರೆ.

  

ಇದು ಸುಳ್ಳು ಸುದ್ದಿ ಎಂದು ದಿಯಾ ಟ್ವೀಟ್

ನಾನು ದಕ್ಷಿಣ ಭಾರತದಲ್ಲಿ ನಟಿಸಲು ಒಪ್ಪಿಕೊಂಡಿದ್ದೀನಂತೆ ಎಲ್ಲವೂ ಸುಳ್ಳು ಸುದ್ದಿ ಎಂದು ದಿಯಾ ಟ್ವೀಟ್

ಪುನೀತ್ ರಾಜ್ ಕುಮಾರ್ ಅವರ ಶುಭಹಾರೈಕೆ
  

ಪುನೀತ್ ರಾಜ್ ಕುಮಾರ್ ಅವರ ಶುಭಹಾರೈಕೆ

ಜೋಗಿ ಪ್ರೇಮ್ ನಾಯಕ ನಟರಾಗಿರುವ ಭಂ ಭಂ ಬೋಲೇನಾಥ್ ಚಿತ್ರದ ಶೀರ್ಷಿಕೆ ರಿಲೀಸ್ ಮಾಡಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಶುಭ ಹಾರೈಸಿ ಚಿತ್ರದ ಶೀರ್ಷಿಕೆ ಪವರ್ ಫುಲ್ ಆಗಿದೆ ಮೂಡಿ ಬಂದಿದೆ ಎಂದಿದ್ದರು.

ಸಂಗೀತ ಮಾಂತ್ರಿಕ ಇಳಯರಾಜ ಅವರ ಸಂಗೀತ ಇರುವ ಈ ಚಿತ್ರಕ್ಕಾಗಿ ವಿಶೇಷ ಶೀರ್ಷಿಕೆ ವಿನ್ಯಾಸಗೊಳಿಸಿದ್ದ ಪ್ರತಿಭಾವಂತ ಶ್ರೀನಿವಾಸ್ ತಮ್ಮಯ್ಯ ಅವರು ಪುನೀತ್ ರಿಂದ ಶೀರ್ಷಿಕೆ ಅನಾವರಣಗೊಳಿಸಿದ್ದರು.

 

  

ಭಂ ಭಂ ಬೋಲೇನಾಥ್ ಶೀರ್ಷಿಕೆ ಹೇಗಿದೆ

ಭಂ ಭಂ ಬೋಲೇನಾಥ್ ಶೀರ್ಷಿಕೆ ಹೇಗಿದೆ ಈ ಟೀಸರ್ ವಿಡಿಯೋ ನೋಡಿ

ದಿಯಾ ಮಿರ್ಜಾಗೆ ಈಗ ಅಂಥಾ ಕೆಲಸವೇನಿದೆ
  

ದಿಯಾ ಮಿರ್ಜಾಗೆ ಈಗ ಅಂಥಾ ಕೆಲಸವೇನಿದೆ

ಹೈದರಾಬಾದ್ ಮೂಲದ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಮಿಸ್ ಏಷ್ಯಾ ಫೆಸಿಫಿಕ್ ಇಂಟರ್ ನ್ಯಾಷನಲ್ ಸೇರಿದಂತೆ ಹಲವು ಮಾಡೆಲಿಂಗ್ ಪ್ರಶಸ್ತಿ ಮುಡಿಗೇರಿಸಿಕೊಂಡವರು.ನಟಿಯಾಗಿ ಒಂದಷ್ಟು ಯಶಸ್ಸುಗೊಳಿಸಿದ ಮೇಲೆ ಸಿನಿಮಾ ಪ್ರೊಡಕ್ಷನ್ ಗೂ ಕೈ ಹಾಕಿದ್ದಾರೆ.

ಇದರ ಜತೆಗೆ ಈಕೆ ಪೆಟಾ, ಚೈಲ್ಡ್ ರೈಟ್ಸ್ ಅಂಡ್ ಯೂ(CRY), ADAPT, ಗ್ರೀನ್ ಪೀಸ್ ಇಂಡಿಯಾ, ಕೋಕಾ ಕೋಲಾ ಫೌಂಡೇಷನ್, ನರ್ಮದಾ ಬಚಾವೋ ಆಂದೋಲನ, ಹೆಣ್ಣು ಭ್ರೂಣ ಹತ್ಯೆ ತಡೆ ಹೋರಾಟ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. 2012ರಲ್ಲಿ ಐಐಎಫ್ ಎ ಗ್ರೀನ್ ಪ್ರಶಸ್ತಿ ಕೂಡಾ ಪಡೆದಿದ್ದಾರೆ. ಹೀಗಾಗಿ ಸಿನಿಮಾ ಜಗತ್ತಿಗಿಂತ ಸಾಮಾಜಿಕ ಕಾರ್ಯಗಳಲ್ಲೇ ಆಕೆ ಸಕತ್ ಬ್ಯುಸಿ.

ಮತ್ತೊಮ್ಮೆ ಪುನೀತ್ ಜತೆ ಜೋಗಿ ಪ್ರೇಮ್ ?
  

ಮತ್ತೊಮ್ಮೆ ಪುನೀತ್ ಜತೆ ಜೋಗಿ ಪ್ರೇಮ್ ?

ಗಾಂಧಿನಗರದ ಗಲ್ಲಿಗಳಲ್ಲಿ ಇನ್ನೊಂದು ಗಾಸಿಪ್ ಸುದ್ದಿ ಕೂಡಾ ಹರಿದಾಡುತ್ತಿದ್ದು, ನಟ ಕಮ್ ನಿರ್ದೇಶಕ ಅವರು ಪುನೀತ್ ರಾಜ್ ಕುಮಾರ್ ಅವರನ್ನು ಹಾಕಿಕೊಂಡು ಚಿತ್ರ ಮಾಡುವ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ 2009ರಲ್ಲಿ ಪೋಲಿ ಎಂಬ ಚಿತ್ರ ರಾಜ್ ಆಗಿ ರಿಲೀಸ್ ಮಾಡಿ ಕುಚ್ ಕುಚ್ ಎಂದಿದೆ ಈ ಹೃದಯ ಎಂದು ಸಿನಿರಸಿಕರ ತಲೆಗೆ ಕೈ ಹಾಕಿದ್ದ ಪ್ರೇಮ್ ಅವರು ಚಿತ್ರ ತೋಪೆದ್ದು ಹೋಗದಂತೆ ತಡೆಯಲು ಶತ ಪ್ರಯತ್ನ ಮಾಡಿ ಸೋಲು ಕಂಡಿದ್ದರು.

English summary
Dia Mirza has tweeeted and rubbished rumours that she has signed the dotted line for a Kannada film. There was news that film producer Suresh Babu had confirmed that Dia has given her consent for a Kannada movie titled "Bham Bham Bholenath"
Please Wait while comments are loading...

Kannada Photos

Go to : More Photos