twitter
    For Quick Alerts
    ALLOW NOTIFICATIONS  
    For Daily Alerts

    ಮರಾಠಿ ರೀಮೇಕ್ ಗೆ ಹೆಗಲು ಕೊಡ್ತಾರಾ ಕಲಾ ಸಾಮ್ರಾಟ್.?

    By Suneetha
    |

    ಮರಾಠಿಯ ಬ್ಲಾಕ್ ಬಸ್ಟರ್ ಹಿಟ್ 'ಸೈರತ್' (ಸೈರಟ್) ಸಿನಿಮಾವನ್ನು ಕನ್ನಡಕ್ಕೆ ತರುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈ ಮೊದಲು ಚಿತ್ರಕ್ಕೆ ನಿರ್ದೇಶನ ಯಾರು ಮಾಡಲಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರ ದೊರೆತಿರಲಿಲ್ಲ.

    ಇದೀಗ ಚಿತ್ರದ ನಿರ್ದೇಶಕರಾಗಿ ಎಸ್ ನಾರಾಯಣ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮೂಲಕ ಅಂತಿಮ ತೆರೆ ಎಳೆಯಲಾಗಿದೆ. ಸೈರತ್ ರೀಮೇಕ್ ಹಕ್ಕು ಖರೀದಿ ಮಾಡಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಇದೀಗ ಚಿತ್ರಕ್ಕೆ ನಿರ್ದೇಶಕರಾಗಿ ಎಸ್ ನಾರಾಯಣ್ ಅವರನ್ನು ಆಯ್ಕೆ ಮಾಡಿದ್ದಾರೆ.[ಮರಾಠಿ ಚಿತ್ರದ ಮೇಲೆ ರಾಕ್ ಲೈನ್ ವೆಂಕಟೇಶ್ ಕಣ್ಣು ಬಿದ್ದದ್ದು ಹೇಗೆ.?]

    Director S.Narayan to direct 'Sairat' in Kannada

    'ರೀಮೇಕ್ ಸಿನಿಮಾಗಳನ್ನು ನಿಭಾಯಿಸುವುದಕ್ಕೆ ಎಸ್ ನಾರಾಯಣ್ ಅವರು ಸಮರ್ಥ ವ್ಯಕ್ತಿ. ಈ ಸಿನಿಮಾದ ಬಹುತೇಕ ತಾರಾಗಣ ಹೊಸಬರಾಗಿರುವುದರಿಂದ ಎಸ್ ನಾರಾಯಣ್ ಹೊಸ ನಟರಿಂದ ಒಳ್ಳೆಯ ನಟನೆಯನ್ನು ಸಮರ್ಥವಾಗಿ ಹೊರತೆಗೆಯಬಲ್ಲರು. ಮಾತ್ರವಲ್ಲದೇ ಅವರು ಹೊಸಬರನ್ನು ಬಹಳ ತಾಳ್ಮೆಯಿಂದ ಕಾಣುತ್ತಾರೆ' ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ತಿಳಿಸಿದ್ದಾರೆ.[ಮರಾಠಿ 'ಸೈರಟ್' ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ ರಾಕ್ ಲೈನ್]

    Director S.Narayan to direct 'Sairat' in Kannada

    ಅಂದಹಾಗೆ ಇನ್ನೂ ಹೆಸರಿಡದ ಈ ಚಿತ್ರದ ಪಾತ್ರವರ್ಗಕ್ಕೆ ಆಡಿಶನ್ ನಡೆಯುತ್ತಿದ್ದು, ನಾಯಕ ನಟನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಮಗ ವಿಕ್ರಂ ಅವರ ಹೆಸರು ಅಲ್ಲಲ್ಲಿ ಕೇಳಿಬರುತ್ತಿದೆ. ರಾಕ್ ಲೈನ್ ಅವರ ನಿರ್ಮಾಣದಲ್ಲಿ ತೆಲುಗಿನಲ್ಲಿ ಮೂಲ ಮರಾಠಿ ನಿರ್ದೇಶಕ ನಾಗರಾಜ್ ಮಂಜುಳೆ ಅವರು ನಿರ್ದೇಶನ ಮಾಡಲಿದ್ದಾರೆ.

    Director S.Narayan to direct 'Sairat' in Kannada

    ರಿಂಕು ರಾಜಗುರು, ಆಕಾಶ್ ತೋಸರ್, ತಾನಾಜಿ ಮುಂತಾದವರು ಮಿಂಚಿದ್ದ ಮರಾಠಿ 'ಸೈರತ್' ಸಿನಿಮಾ ಕೋಟಿ ಕೋಟಿ ಬಾಚುವ ಮೂಲಕ ಮರಾಠಿ ಚಿತ್ರರಂಗದಲ್ಲಿ ಸಂಚಲನ ಹುಟ್ಟುಹಾಕಿತ್ತು.

    English summary
    Kannada Director S Narayan is likely to direct the Kannada remake of Marathi blockbuster "Sairat." The forthcoming Kannada movie will be bankrolled by leading producer Rockline Venkatesh.
    Saturday, June 25, 2016, 14:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X