»   » ವಿಚ್ಛೇದನ ಪಡೆದ್ರೆ ಏನಂತೆ, ಅಮಲಾ ಪೌಲ್ ಗೆ ಸಿನಿಮಾಗಳು ಸಿಗ್ಬೇಕಲ್ಲ.!

ವಿಚ್ಛೇದನ ಪಡೆದ್ರೆ ಏನಂತೆ, ಅಮಲಾ ಪೌಲ್ ಗೆ ಸಿನಿಮಾಗಳು ಸಿಗ್ಬೇಕಲ್ಲ.!

Posted by:
Subscribe to Filmibeat Kannada

ಮದುವೆ ಆದ ಎರಡೇ ವರ್ಷಗಳಲ್ಲಿ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಇಡಲು ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ಎ.ಎಲ್.ವಿಜಯ್ ನಿರ್ಧರಿಸಿದ್ದಾಗಿದೆ.

ಪರಸ್ಪರ ಒಪ್ಪಿಗೆ ಮೇರೆಗೆ ಅಮಲಾ ಮತ್ತು ವಿಜಯ್ ಆಗಸ್ಟ್ 6 ರಂದು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕುಟುಂಬದ ಬಗ್ಗೆ ಅಮಲಾ ಗಮನ ಕೊಡುತ್ತಿಲ್ಲ. ಮದುವೆ ಆದ ಮೇಲೂ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಅಂತ ವಿಜಯ್ ತಂದೆ ಅಳಗಪ್ಪನ್ ಬೇಸರ ವ್ಯಕ್ತ ಪಡಿಸಿದ್ದರು. [ನಟಿ ಅಮಲಾ ಪೌಲ್ ಸಂಸಾರದಲ್ಲಿ ಬಿರುಗಾಳಿ..! ಕಾರಣ ಯಾರು.?]

ವೃತ್ತಿ ಜೀವನದ ಮೇಲೆ ಆಸಕ್ತಿ ತೋರಿರುವ ಅಮಲಾಗೆ ಈಗ ಕಾಲಿವುಡ್ ನಿಂದ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಮುಂದೆ ಓದಿ....

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇ ದೊಡ್ಡ ಹೊಡೆತ.!

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇ ದೊಡ್ಡ ಹೊಡೆತ.!

ವಿಚ್ಛೇದನ ಕೋರಿ ನಟಿ ಅಮಲಾ ಪೌಲ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಿಂದ ಅವರ ವೃತ್ತಿ ಜೀವನಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. [ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟಿ ಅಮಲಾ ಪೌಲ್ ದಂಪತಿ]

ಕಾಲಿವುಡ್ ನಲ್ಲಿ Unofficial Ban.?

ಕಾಲಿವುಡ್ ನಲ್ಲಿ Unofficial Ban.?

ಕಾಲಿವುಡ್ ನಲ್ಲಿ ನಟಿ ಅಮಲಾ ಪೌಲ್ ಅನ್ ಆಫೀಶಿಯಲ್ ಬ್ಯಾನ್ ಆಗಲಿದ್ದಾರೆ ಅಂತ ಗುಲ್ಲೆದ್ದಿದೆ. [ನಟಿ ಅಮಲಾ ಪೌಲ್ - ವಿಜಯ್ ಗಲಾಟೆ ಸಂಸಾರದ ಗುಟ್ಟು ರಟ್ಟು.!]

ಯಾರೂ ಅವಕಾಶ ನೀಡುವುದಿಲ್ಲ.?

ಯಾರೂ ಅವಕಾಶ ನೀಡುವುದಿಲ್ಲ.?

ತಮ್ಮ ಚಿತ್ರಕ್ಕೆ ಅಮಲಾ ಪೌಲ್ ನಾಯಕಿ ಆಗ್ಬೇಕು ಅಂದುಕೊಂಡಿದ್ದ ಹಲವು ತಮಿಳು ನಿರ್ಮಾಪಕರು ಈಗ ಬೇರೆ ನಾಯಕಿಯರ ಹುಡುಕಾಟದಲ್ಲಿದ್ದಾರಂತೆ.! [ನಟಿ ಅಮಲಾ ಪೌಲ್ ಗೆ ವಿಚ್ಛೇದನ: ಪತಿ ವಿಜಯ್ ಬಾಯ್ಬಿಟ್ಟ ಸತ್ಯ ಏನು.?]

ವಿಜಯ್ ಕುಟುಂಬದ ವಿರುದ್ಧ ಹೋಗಲು ಇಷ್ಟ ಇಲ್ಲ.!

ವಿಜಯ್ ಕುಟುಂಬದ ವಿರುದ್ಧ ಹೋಗಲು ಇಷ್ಟ ಇಲ್ಲ.!

ಎಲ್ಲರಿಗೂ ಗೊತ್ತಿರುವ ಹಾಗೆ, ನಿರ್ದೇಶಕ ಎ.ಎಲ್.ವಿಜಯ್ ರವರ ತಂದೆ ಎ.ಎಲ್.ಅಳಗಪ್ಪನ್ ತಮಿಳು ಚಿತ್ರಗಳ ನಿರ್ಮಾಪಕ. ಕಾಲಿವುಡ್ ನಲ್ಲಿ ಅಳಗಪ್ಪನ್ ಹಿರಿಯ ತಲೆ. ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ತಮಿಳು ಸಿನಿ ನಿರ್ಮಾಪಕರು ಅಮಲಾ ಪೌಲ್ ಗೆ ಆಫರ್ ನೀಡಬಾರದು ಅಂತ ನಿರ್ಧರಿಸಿದ್ದಾರೆ ಎನ್ನಲಾಗಿದೆ.

'ವಡಾ ಚೆನ್ನೈ'ನಲ್ಲಿ ಅಮಲಾ ಪೌಲ್

'ವಡಾ ಚೆನ್ನೈ'ನಲ್ಲಿ ಅಮಲಾ ಪೌಲ್

ಧನುಷ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ 'ವಡಾ ಚೆನ್ನೈ'ನಲ್ಲಿ ಅಮಲಾ ಪೌಲ್ ನಾಯಕಿ ಆಗಿ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಮೂರು ವರ್ಷಗಳ ಸುದೀರ್ಘ ಕಾಲ್ ಶೀಟ್ ನೀಡಿದ್ದಾರೆ ಅಮಲಾ ಪೌಲ್.

ಅಮಲಾ ಕೈಯಲ್ಲಿದೆ 'ಹೆಬ್ಬುಲಿ' ಚಿತ್ರ

ಅಮಲಾ ಕೈಯಲ್ಲಿದೆ 'ಹೆಬ್ಬುಲಿ' ಚಿತ್ರ

ತಮಿಳಿನಲ್ಲಿ 'ವಡಾ ಚೆನ್ನೈ' ಬಿಟ್ಟರೆ ಅಮಲಾ ಕೈಯಲ್ಲಿ ಇರುವುದು ಕನ್ನಡದ 'ಹೆಬ್ಬುಲಿ' ಚಿತ್ರ ಮಾತ್ರ. ಸುದೀಪ್ ಜೊತೆ ನಾಯಕಿ ಆಗುವ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ ಅಮಲಾ.

ಇದುವರೆಗೂ ಅಮಲಾ ತುಟಿ ಎರಡು ಮಾಡಿಲ್ಲ.!

ಇದುವರೆಗೂ ಅಮಲಾ ತುಟಿ ಎರಡು ಮಾಡಿಲ್ಲ.!

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮೇಲೂ ನಟಿ ಅಮಲಾ ಪೌಲ್ ತುಟಿ ಎರಡು ಮಾಡಿಲ್ಲ.

English summary
Actres Amala Paul recently filed for divorce from her husband, Director AL Vijay. If the rumours are to be true, Amala is facing an 'unofficial ban' after she decided to go for a divorce.
Please Wait while comments are loading...

Kannada Photos

Go to : More Photos