»   » 'ಕನ್ನಡ ರಾಜ್ಯೋತ್ಸವ'ದಿಂದ 'ಡಬ್ಬಿಂಗ್' ಸಿನಿಮಾಗಳು ತೆರೆಗೆ?

'ಕನ್ನಡ ರಾಜ್ಯೋತ್ಸವ'ದಿಂದ 'ಡಬ್ಬಿಂಗ್' ಸಿನಿಮಾಗಳು ತೆರೆಗೆ?

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ದಿಲ್ಲದೇ 'ಡಬ್ಬಿಂಗ್' ಸಿನಿಮಾಗಳು ನುಸುಳಿದೆ. ಪರಭಾಷೆಯಿಂದ ಈಗಾಗಲೇ ಅನೇಕ ಸಿನಿಮಾಗಳು ಡಬ್ ಆಗಿ ರಿಲೀಸ್ ಆಗುವುದಕ್ಕೆ ಕಾದು ಕುಳಿತಿವೆ.

ಮೂಲಗಳ ಪ್ರಕಾರ ನವೆಂಬರ್ 1 ಅಂದ್ರೆ, ಕನ್ನಡ ರಾಜ್ಯೋತ್ಸವ ದಿನದಿಂದ ಕನ್ನಡಕ್ಕೆ ಡಬ್ ಅಗಿರುವ ಪರಭಾಷೆಯ ಚಿತ್ರಗಳು ಕರ್ನಾಟಕದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

dubbing

ಕನ್ನಡ ರಾಜ್ಯೋತ್ಸವ ದಿನದಿಂದ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ತೆರೆ ಮರೆಯಲ್ಲಿ ನಡೆಯುತ್ತಿದೆ. ಟಿ-ಸೀರೀಸ್ ವತಿಯಿಂದ ಆಗಲೇ ಅನೇಕ ಹಾಡುಗಳು ಡಬ್ ಆಗಿ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. [ಅಂತೂ ಶಾರುಖ್, ಸಲ್ಮಾನ್, ಸನ್ನಿ ಲಿಯೋನ್ ''ಕನ್ನಡ''ಕ್ಕೆ ಬಂದ್ರು.!]

ಕನ್ನಡಕ್ಕೆ ಡಬ್ ಆಗಿರುವ 500ಕ್ಕೂ ಹೆಚ್ಚು ಹಾಡುಗಳನ್ನ ಡಿವಿಡಿ ರೂಪದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗುವುದು. ಹಾಗಂತ ಪ್ರಶಾಂತ್ ಸಂಬರ್ಗಿ ತಿಳಿಸಿದ್ದಾರೆ. [ಕನ್ನಡಕ್ಕೆ ಡಬ್ಬಿಂಗ್ ಬೇಕೇ ಬೇಕು! ಫೇಸ್ ಬುಕ್ ನಲ್ಲಿ ಚಳುವಳಿ]

'ಡಬ್ಬಿಂಗ್' ಕನ್ನಡ ವಿರೋಧಿ, 'ಡಬ್ಬಿಂಗ್'ನಿಂದಾಗಿ ಕನ್ನಡ ಸಂಸ್ಕೃತಿ ಹಾಳಾಗುತ್ತದೆ ಅಂತ ಕೆಲವರು ಬೀದಿಗಿಳಿದು ಹೋರಾಟ ಮಾಡಿದ್ದರು. ಇದೀಗ ಕನ್ನಡ ರಾಜ್ಯೋತ್ಸವ ದಿನದಿಂದ ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳು ರಿಲೀಸ್ ಆಗುತ್ತವೆ ಅಂದ್ರೆ ಅವರೆಲ್ಲವರ ಪ್ರತಿಕ್ರಿಯೆ ಹೇಗಿರಬಹುದು? (ಮಾಹಿತಿ ಕೃಪೆ - ಚಿತ್ರಲೋಕ)

English summary
According to the reports, Dubbed films are all set to release in Karnataka from November 1st.
Please Wait while comments are loading...
Best of 2016

Kannada Photos

Go to : More Photos