twitter
    For Quick Alerts
    ALLOW NOTIFICATIONS  
    For Daily Alerts

    ಅಂತ್ಯವಾಗದ ನಾರಾಯಣ್, ಗಣೇಶ್ ಸೋಲಿನ ಗಲಾಟೆ

    By ಜೀವನ್ ಸೂರ್ಯ
    |
    <ul id="pagination-digg"><li class="next"><a href="/gossips/ganesh-cheque-bounce-producers-s-narayan-movies-067042.html">Next »</a></li></ul>

    ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಇಬ್ಬರೂ 'ಮುಂಜಾನೆ' ಚಿತ್ರದ ಸೋಲಿನ ಬಳಿಕ ಮಾತಿನ ಚಕಮಕಿ ನಡೆಸಿದ್ದರು. ಇವರಿಬ್ಬರ ಸಂಗಮದ 'ಶೈಲೂ' ಚಿತ್ರ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದರೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಶೈಲೂ ನಂತರ ಬಂದ ಮುಂಜಾನೆ ಚಿತ್ರ ದಯನೀಯ ಸೋಲು ಕಂಡಿತ್ತು.

    ಮುಂಜಾನೆ ಚಿತ್ರಕ್ಕೆ ನಿರ್ಮಾಪಕರೂ ಆಗಿದ್ದ ನಾರಾಯಣ್, ನನ್ನ ನಿರ್ಮಾಣದ ಚಿತ್ರ ಸೋತರೂ ಪರವಾಗಿಲ್ಲ. ಆದರೆ ನಾಯಕರಾಗಿ ನಟಿಸಿದವರ ಬಾಯಿಂದ 'ಹೇಗಿದ್ದೀರಾ...' ಎಂಬ ಮಾತೊಂದು ಬಂದರೆ ಸಾಕಿತ್ತು ಎಂದಿದ್ದರು. ಆ ಒಂದೇ ಮಾತಿನಿಂದ ನಾನು ತುಂಬಾ ಖುಷಿಯಾಗಿರುತ್ತಿದ್ದೆ ಎಂದು ಅವಲತ್ತುಕೊಂಡಿದ್ದರು.

    ಆದರೆ ಆ ವೇಳೆ ಗಣೇಶ್, "ಮುಂಜಾನೆ ಸೋಲಿಗೆ ನಾನು ಕಾರಣನಲ್ಲ. ಅದು ನನ್ನ ಸೋಲಲ್ಲ. ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದಲೇ ಮಾಡಿದ್ದೇನೆ" ಎಂದು ಮಾರ್ಮಿಕವಾಗೇ ಉತ್ತರಿಸಿದ್ದರು ಗೋಲ್ಡನ್ ಸ್ಟಾರ್ ಗಣೇಶ್. ನಾರಾಯಣ್ ಹೋದಲ್ಲೆಲ್ಲಾ ಗಣೇಶ್ ಮೇಲೆ ಮುಂಜಾನೆ ಸೋಲಿನ ಗೂಬೆ ಕೂರಿಸುವುದು ಹಾಗೂ ಗಣೇಶ್ ಅದಕ್ಕೆ ತಿರುಗೇಟು ನೀಡುವುದು ನಡೆದೇ ಇತ್ತು.

    "ನಿರ್ದೇಶಕ ನಾರಾಯಣ್ ಸೋಲಿನ ಪರಾಮರ್ಶೆ ಮಾಡಬೇಕಿತ್ತು. ಚಿತ್ರವೊಂದಕ್ಕೆ ನಿರ್ದೇಶಕನೇ ಕ್ಯಾಪ್ಟನ್. ಇದೇ ಗಣೇಶ್ ನಟನೆಯಲ್ಲಿ ಅವರ ನಿರ್ದೇಶನದ 'ಚೆಲುವಿನ ಚಿತ್ತಾರ" ಚಿತ್ರ ಸೂಪರ್ ಹಿಟ್ ಆಗಿರಲಿಲ್ಲವೇ?" ಎಂದು ಸಾಕಷ್ಟು ಜನರು ನಾರಾಯಣ್ ವಿರುದ್ಧ ಹೇಳಿಕೆ ನೀಡಿದ್ದರು. ಅದು ನಾರಾಯಣ್ ಕಿವಿ ತಲುಪಿಲ್ಲ ಎಂಬಂತೆ ನಂತರವೂ ಸಾಕಷ್ಟು ಬಾರಿ ನಾರಾಯಣ್ ದೂರು, ಗಣೇಶ್ ಪ್ರತಿದೂರು ನಡೆದೇ ಇತ್ತು.

    ಇದೀಗ ನಾರಾಯಣ್ ತಮ್ಮ ನೇರವಾಗಿ ಹೇಳುವ ದಾರಿ ಬದಲಾಯಿಸಿಕೊಂಡಿದ್ದಾರೆ. ಗಣೇಶ್ ಮಾತನ್ನು ಒಪ್ಪಿಕೊಂಡಿದ್ದಾರೆ ನಾರಾಯಣ್. ಈಗವರು ಮಾತು "ಹೌದು, ಮುಂಜಾನೆ' ಸೋಲಿಗೆ ನಾನೇ ಕಾರಣ, ಗಣೇಶ್ ಅಲ್ಲ. ನಾನು ಗಣೇಶ್ ಮೇಲೆ ಸೋಲಿನ ಆರೋಪ ಹೊರಿಸಲಾರೆ. ಒಬ್ಬ ನಟನಾಗಿ ಏನು ಮಾಡಬಹುದೋ ಅದನ್ನು ಗಣೇಶ್ ಮಾಡಿದ್ದಾರೆ.

    ಆದರೆ ಸಿನಿಮಾವೊಂದು ಸೋತಾಗ ಅದರ ಹಿಂದಿರುವ ಕಾರಣಗಳಿಂದ ಚಿತ್ರದ ಕಲಾವಿದರು ಹೊರಗುಳಿಯಲು ಸಾಧ್ಯವಿಲ್ಲ. ಒಮ್ಮೆ ಹಾಗೆ ಅಂದುಕೊಂಡರೆ, ಮುಂದೆ ಸಿನಿಮಾ ಗೆಲುವು, ಗಳಿಕೆ ಕಷ್ಟವಾಗುತ್ತದೆ." ಎಂದು ಹಿರಿಯರು ನೀಡುವ ಉಪದೇಶದಂತೆ ಮಾತನಾಡಿದ್ದಾರೆ ನಾರಾಯಣ್. ಅವರ ಮನಸ್ಥಿತ ಬದಲಾಗಿಲ್ಲ ಎಂಬುದು ಈ ಮಾತಿನಿಂದ ತಿಳಿದುಬಂದಿದೆ. ಇನ್ನು ಇದಕ್ಕೆ ಗಣೇಶ್ ಕೊಡುವ ಉತ್ತರ ಯಾರ ಉಪದೇಶದಂತೆ ಇರತ್ತದೆಯೋ ಏನೋ! ಮುಂದಿನ ಪುಟ ನೋಡಿ...

    <ul id="pagination-digg"><li class="next"><a href="/gossips/ganesh-cheque-bounce-producers-s-narayan-movies-067042.html">Next »</a></li></ul>

    English summary
    The controversy between Golden Star Ganesh and director S Narayan not came to an end. Both are not ready to take responsibility of flop their movie.
    Thursday, August 2, 2012, 16:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X