»   » ದೂದ್ಪೇಡ ಅನಾರ್ಕಲಿ ಲವ್ ಸ್ಟೋರಿ ಇನ್ನೂ ಚಾಲ್ತಿಯಲ್ಲಿದೆ!

ದೂದ್ಪೇಡ ಅನಾರ್ಕಲಿ ಲವ್ ಸ್ಟೋರಿ ಇನ್ನೂ ಚಾಲ್ತಿಯಲ್ಲಿದೆ!

Written by: ಜೀವನರಸಿಕ
Subscribe to Filmibeat Kannada

ಈ ಹಿಂದೆ ಮನಸಾರೆ ಪ್ರೀತಿಸುತ್ತಿದ್ದ ಐಂದ್ರಿತಾ-ದಿಗಂತ್ ಪ್ರೀತಿ ಮುರಿದುಬಿತ್ತು ಅಂತ ಸುದ್ದಿ ಬಂದಿತ್ತು. ಅದ್ಯಾರು ಇಂಥ ಸುದ್ದಿ ಹಬ್ಬಿಸಿದರೋ? ಇದರಿಂದ ಅವರಿಬ್ಬರನ್ನು ಅಪಾರವಾಗಿ ಪ್ರೀತಿಸುವ ಅಭಿಮಾನಿಗಳು ಕೊಂಚ ಗಲಿಬಿಲಿಗೊಂಡಿದ್ದು ಕೂಡ ಸುಳ್ಳಲ್ಲ.

ಈ ಸುದ್ದಿಗೆ ಇಂಬು ಕೊಡುವಂತೆ ಐಂದ್ರಿತಾ ಕೂಡ ಕೆಲಕಾಲ ಕಾಣೆಯಾಗಿದ್ದರು. ಐಂದ್ರಿತಾ ಬೆಂಗಾಲಿಯಲ್ಲಿ ಕಿಚ್ಚನ ಕನ್ನಡದ ವಿಷ್ಣುವರ್ಧನ ರೀಮೇಕ್ನಲ್ಲಿ ನಟಿಸ್ತಾರೆ ಅನ್ನೋ ಸುದ್ದಿ ಇತ್ತು. ಆ ಸಿನಿಮಾ ರಿಲೀಸ್ ಆಯ್ತೋ ಇಲ್ವೋ ಗೊತ್ತಿಲ್ಲ. ಅದಾದ ನಂತ್ರ ಐಂದ್ರಿತಾ ಕಾಣಿಸಿಕೊಂಡಿದ್ದು ಶಾರ್ಪ್ ಶೂಟರ್ ಚಿತ್ರದ ಸ್ಪೆಷಲ್ ಸಾಂಗಿನಲ್ಲಿ.

ಕಟ್ಟಾ ಅಭಿಮಾನಿಗಳಿಗೆ ಹೋದ ಜೀವ ಮತ್ತೆ ಬಂದಂತಾಗಿತ್ತು. ಇದೇನು ವೃತ್ತಿಪರತೆಯೋ, ನಿಜವಾದ ಪ್ರೀತಿಯೋ ಎಂದು ಅಂದುಕೊಂಡವರಿಗೆ ಅವರಿಬ್ಬರ ನಡುವೆ ಪ್ರೇಮ್ ಕಹಾನಿ ಚುಪ್ಕೆ ಚುಪ್ಕೆ ನಡೆಯುತ್ತಿದೆ ಎಂಬ ಸುಳಿವು ಸಿಕ್ಕಿದೆ.[ಗನ್ನು ಹಿಡಿದು ರಾಂಗ್ ಆದ ದಿಗಂತ್ 'ಶಾರ್ಪ್ ಶೂಟರ್']

ಹಾಗಾದ್ರೆ ದಿಗಂತ್-ಐಂದ್ರಿತಾ ಈಗ್ಲೂ ಪ್ರೀತಿ ಮಾಡ್ತಿದ್ದಾರಾ ಅಂದ್ರೆ ಹೌದು ಅಂತಿದೆ ಈ ಪ್ರೇಮಿಗಳ ಆಪ್ತ ಮೂಲ. ಈಗ ಈ ಜೋಡಿ ಲಂಡನ್ನಲ್ಲಿ ಹಾಯಾಗಿ ಸುತ್ತಾಡ್ತಿದೆಯಂತೆ. ದಿಗಂತ್ ತಮ್ಮ ಚಿತ್ರದ ಶೂಟಿಂಗ್ಗೆ ಹೋದ್ರೆ ಐಂದ್ರಿತಾ ಮಾತ್ರ ಏನೂ ಕೆಲಸ ಇಲ್ಲದಿದ್ರೂ ದಿಗಂತ್ ಜೊತೆ ವಿಮಾನ ಏರಿದ್ದರಂತೆ.[ರಾಗಿಣಿ 'ಪರಪಂಚ'ದೊಳ್ ಏನೇನೈತಿ?]

ಸೋ ಕನ್ನಡದಲ್ಲಿ ದೂದ್ಪೇಡ ದಿಗಂತ್-ಅನಾರ್ಕಲಿ ಐಂದ್ರಿತಾ ಲವ್ಸ್ಟೋರಿ ಇನ್ನೂ ಚಾಲ್ತಿಯಲ್ಲಿದೆ ಅಂಬೋದು ಪ್ರಮಾಣಿತವಾಯ್ತು. ಮದ್ವೆ ಯಾವಾಗಲೋ ಕಾದುನೋಡ್ಬೇಕು. ಒಟ್ಟಿನಲ್ಲಿ ಅಭಿಮಾನಿಗಳು ಹೋಳಿಗೆ ಊಟವನ್ನು ನಿರೀಕ್ಷಿಸಬಹುದು.

English summary
Here is good news for hardcore fans of Diganth and Aindrita Ray. There was news that both have broken up. But, contrary that both are dancing to a number in Shart Shooter. Moreover, both the love birds flew to London to spend precious time together. Let's expect Hooranada Holige. ದೂದ್ಪೇಡ ಅನಾರ್ಕಲಿ ಲವ್ ಸ್ಟೋರಿ ಇನ್ನೂ ಚಾಲ್ತಿಯಲ್ಲಿದೆ!
Please Wait while comments are loading...

Kannada Photos

Go to : More Photos