ಕೀಳು ಅಭಿರುಚಿಯ 'ಗಾಲಿ'ಗೆ ಕೀಲಾಗಿದ್ದು ಎಚ್ಡಿಕೆ?

Written by: ಜೀವನರಸಿಕ

'ಗಾಲಿ' ಅನ್ನೋ ಚಿತ್ರದ ಹೆಚ್ಚು ಕಡಿಮೆ 10 ನಿಮಿಷದ ಟ್ರೈಲರ್ ನೋಡಿ ಸ್ಯಾಂಡಲ್ ವುಡ್ ಮಂದಿ ಬೆಚ್ಚಿಬಿದ್ದಿದ್ರು. ಪಡ್ಡೆ ಪೋಲಿಗಳಿಗೆ ಟ್ರೈಲರ್ ನ ಡೈಲಾಗ್ ಗಳು ಹಬ್ಬ ನೀಡಿದ್ರೆ, ಸದಭಿರುಚಿಯ ಸಿನಿ ಪ್ರೇಮಿಗಳಿಗೆ ವಾಕರಿಕೆ ತರಿಸುವಂತಿದ್ವು ಈ 'ಗಾಲಿ' ಚಿತ್ರದ ಡಬಲ್ ಮೀನಿಂಗ್ ಡೈಲಾಗ್ ಗಳು.

ಈಗ ಆ ಗಾಲಿಗೆ ಕೀಲಾಗಿದ್ದು ಮಾಜಿ ಮುಖ್ಯಮಂತ್ರಿ, ಸ್ಯಾಂಡಲ್ ವುಡ್ ನ ಸಿನಿಮಾ ನಿರ್ಮಾಪಕರೂ ಆಗಿರೋ ಕುಮಾರಸ್ವಾಮಿ ಅಂತಿದೆ 'ಗಾಲಿ' ಚಿತ್ರತಂಡ.
ಆದ್ರೆ 'ಚಂದ್ರ ಚಕೋರಿ' ಯಂತಹಾ ಸದಭಿರುಚಿಯ ಸಿನಿಮಾ ನಿರ್ಮಿಸಿದ, ಡಾ.ರಾಜ್ ಅವರ ಕಟ್ಟಾ ಅಭಿಮಾನಿಯಾಗಿರೋ ಹೆಚ್ ಡಿ ಕುಮಾರಸ್ವಾಮಿ ಇಂತಹಾ ಕೀಳು ಅಭಿರುಚಿಯ ಚಿತ್ರಕ್ಕೆ ಸಹಕಾರ ಕೊಟ್ರಾ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡತೊಡಗಿದೆ.


ಚಿತ್ರದ ಆಡಿಯೋ ರಿಲೀಸ್ ನಲ್ಲಿ ಪ್ರದರ್ಶಿಸಿದ ವಿಡಿಯೋ ಒಂದರಲ್ಲಿ ಕುಮಾರಸ್ವಾಮಿ ಈ ಚಿತ್ರಕ್ಕೆ ಸರ್ವ ರೀತಿಯ ಸಹಕಾರ ನೀಡಿ ಪ್ರೋತ್ಸಾಹಿಸಿದ್ರು ಅಂತ ಹೇಳಲಾಗಿದೆ. ಇಷ್ಟಕ್ಕೂ ಚಿತ್ರದ ಆಡಿಯೋ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದು ಕೂಡ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ.

ನಿಜವಾಗಿಯೂ ಕುಮಾರಸ್ವಾಮಿಯವ್ರು 'ಗಾಲಿ' ಚಿತ್ರದ 10 ಲಕ್ಷ ಹಿಟ್ಸ್ ಗಳಿಸಿರೋ ಆ ಟ್ರೈಲರ್ ನೋಡಿದ್ರೆ ಚಿತ್ರ ಮಾಡೋಕೆ ಪ್ರೋತ್ಸಾಹ ಕೊಡ್ತಿದ್ರಾ. ಇಲ್ಲವೇ ಚಿತ್ರದ ಟ್ರೈಲರ್ ನೋಡೀನೂ ಪ್ರೋತ್ಸಾಹ ಕೊಟ್ರಾ ಸ್ವತಃ ಹೆಚ್ ಡಿ ಕೆ ಯವ್ರೇ ಇದಕ್ಕೆ ಉತ್ತರ ಹೇಳಬೇಕು.

ಅಂದಹಾಗೆ ಈ ಗಾಲಿ ಚಿತ್ರಕ್ಕೆ ಹೊಸ ಹುಡುಗ ಜೀವನ್ ಹೀರೋ. ಚಿತ್ರದ ಹೀರೋಯಿನ್ ರೂಪಾ ನಟರಾಜ್. ಈ ಚಿತ್ರದ ಟ್ರೇಲರ್ ನಲ್ಲಿ ಓವರ್ ಡೋಸ್ ಡೈಲಾಗ್ ಗಳು, ಫಿಲ್ಟರ್ ಇಲ್ಲದ ಮಾತುಗಳ ಭರಾಟೆ ಲೈಟಾಗಿ ಕಿಕ್ ಕೊಟ್ಟರೂ ಮುಜುಗರಕ್ಕಂತೂ ಈಡು ಮಾಡುತ್ತವೆ. ಟ್ರೇಲರ್ ಸರ್ವಂ ದ್ವಂದ್ವಾರ್ಥಮಯಂ ಆಗಿದೆ. 'ಏನೂ ಇಲ್ಲ ನಮ್ ಕೈಲಿ' ಎಂಬುದು ಚಿತ್ರದ ಅಡಿಬರಹ.

Read more about: hd kumaraswamy, trailer, video, youtube, ಎಚ್ ಡಿ ಕುಮಾರಸ್ವಾಮಿ, ವಿಡಿಯೋ, ಯೂಟ್ಯೂಬ್

English summary
Karnataka former Chief Minister HD Kumaraswamy upset over the movie Gali. The movie is full of double meaning dialogues. The movie had new hero Jeevan. The dialogues are not in good taste.
Please Wait while comments are loading...

Kannada Photos

Go to : More Photos