»   » ಬಿಗ್ ಬಾಸ್ ಮನೆಯಿಂದ ಇಂದು ಹುಚ್ಚ ವೆಂಕಟ್ ಔಟ್?

ಬಿಗ್ ಬಾಸ್ ಮನೆಯಿಂದ ಇಂದು ಹುಚ್ಚ ವೆಂಕಟ್ ಔಟ್?

Posted by:
Subscribe to Filmibeat Kannada

ಅಚ್ಚರಿಯ ಬೆಳವಣಿಗೆ ಒಂದರಲ್ಲಿ, ಬಿಗ್ ಬಾಸ್ ಮನೆಯಿಂದ ಇಂದು ಹುಚ್ಚ ವೆಂಕಟ್ ಔಟ್ ಆಗಲಿದ್ದಾರೆ. ನಾಮಿನೇಟ್ ಆಗದಿದ್ದರು, ಹುಚ್ಚ ವೆಂಕಟ್ ಮನೆಯಿಂದ ಹೊರಗೆ ಹೋಗಲು ಅವರು ಮಾಡಿದ ಎಡವಟ್ಟು ಕಾರಣ?.

ಇಂದು ಶನಿವಾರ ಬಿಗ್ ಬಾಸ್ ಮನೆಯಿಂದ ಒಬ್ಬರು ಸ್ಪರ್ಧಿ ಹೊರ ಹೋಗುವುದು ಖಚಿತ. ಮೂವರು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು ಆದರೆ ಅಚ್ಚರಿಯ ಸಂಗತಿ ಎಂದರೆ ನಾಮಿನೇಟ್ ಆಗದ ಹುಚ್ಚ ವೆಂಕಟ್ ಹೊರಹೋಗುವುದು.

ಆಳು-ಅರಸ ಟಾಸ್ಕ್ ನಿಂದಾಗಿ ಮನೆಯ ಎಲ್ಲಾ ಸದಸ್ಯರ ಮೇಲೆ ಕಿಡಿಕಾರುತ್ತಿರುವ ಹುಚ್ಚ ವೆಂಕಟ್ ಅವರು ಇಂದು ಎಡವಟ್ಟು ಮಾಡಿಕೊಂಡಿದ್ದಾರೆ. ಆದ್ದರಿಂದ ಮನೆಯಿಂದ ಹೊರಹೋಗುತ್ತಿದ್ದಾರೆ.[ತಲೆ ಮೇಲೆ 'ಎಕ್ಕಡ' ಹೊತ್ತು ಶಿಕ್ಷೆ ಅನುಭವಿಸಿದ ಹುಚ್ಚ ವೆಂಕಟ್!]

ಮನೆಯಿಂದ ಹೊರಹೋಗುವ ವೆಂಕಟ್ ಟಿ ಆರ್ ಪಿ ಮತ್ತು ಜನರ ಒತ್ತಾಯದ ಮೇರೆಗೆ ಒಂದು ವಾರದ ಬಳಿಕ ಮತ್ತೆ ಮನೆಗೆ ವಾಪಸಾಗಲಿದ್ದಾರೆ ಎಂಬುದು ಸದ್ಯದ ಸುದ್ದಿ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ಕೆರಳಿದ ಹುಚ್ಚ ವೆಂಕಟ್ ಇನ್ನೊಬ್ಬ ಸ್ಪರ್ಧಾಳು ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆ ಎಂದು ಸುದ್ದಿಯಾಗಿದೆ.[ನಾನು ಯಾವತ್ತಿದ್ರೂ ರಾಜನೇ, ಎಂದ ಹುಚ್ಚ ವೆಂಕಟ್!]

ಇಂದು (ನವೆಂಬರ್ 14) ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್. ಹುಚ್ಚ ವೆಂಕಟ್ ಮನೆಯಿಂದ ಹೊರಹೋಗುತ್ತಾನೆ?, ವೆಂಕಟ್ ಮಾಡಿಕೊಂಡ ಎಡವಟ್ಟೇನು?, ಇದನ್ನು ತಿಳಿಯಲು ಇಂದಿನ ಎಪಿಸೋಡ್ ತಪ್ಪದೇ ನೋಡಿ. ಸಮಯ ರಾತ್ರಿ 9 ಘಂಟೆ ನಿಮ್ಮ ಕಲರ್ಸ್ ಕನ್ನಡದಲ್ಲಿ.

ಅಂದಹಾಗೆ ಈ ವಾರ ನಾಮಿನೇಟ್ ಆದವರು ನಟಿ ಕೃತಿಕಾ, ಗಗನಸಖಿ ನೇಹಾ ಗೌಡ ಹಾಗೂ ರವಿ ಮುರೂರು. ವೆಂಕಟ್ ಹೊರನಡೆಯದಿದ್ದರೆ, ಈ ಮೂವರಲ್ಲಿ ಒಬ್ಬರು ಹೊರಹೋಗುವುದು ಖಚಿತ.

English summary
Bigg Boss Kannada 3: Huccha Venkat allegedly slaps co-contestant in Bigg Boss house. And got direct Elimination. On Saturday He may come out from House. watch today's (November 14) episode.
Please Wait while comments are loading...

Kannada Photos

Go to : More Photos