»   » ಪತ್ರಕರ್ತ ಚಂದ್ರಚೂಡ್ ಬಿಗ್ಬಾಸ್ಗೆ ಎಂಟ್ರಿಕೊಡ್ತಾರಾ?

ಪತ್ರಕರ್ತ ಚಂದ್ರಚೂಡ್ ಬಿಗ್ಬಾಸ್ಗೆ ಎಂಟ್ರಿಕೊಡ್ತಾರಾ?

Written by: ಜೀವನರಸಿಕ
Subscribe to Filmibeat Kannada

ಚಂದ್ರಚೂಡ್ ಅಂದ್ರೆ ಯಾರು ಅಂತ ಒಂದ್ಸಾರಿ ಯೋಚಿಸ್ತಿದ್ದೀರಾ? ಹಂಗೇ ಸ್ವಲ್ಪ ಫ್ಲಾಷ್ ಬ್ಯಾಕಿಗೆ ಹೋಗಿ. ಬಹುಷಃ ನೆನಪು ಮಾಡಿಕೊಂಡ್ರೆ ನಿಮ್ಗೇ ಗೊತ್ತಾಗುತ್ತೆ. ಬಾಸಿಂಗ ಕಟ್ಟಿಕೊಂಡು ನಟಿ ಶೃತಿಯವ್ರ ಜೊತೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಶಾಸ್ತ್ರಬದ್ಧವಾಗಿ ಮದುವೆಯಾದ ಕೆಲವೇ ದಿನದಲ್ಲಿ ಬೇರೆಯಾದವರು.

ಸದ್ಯ ನಟಿ ಶೃತಿ ಬಿಗ್ ಬಾಸ್ನಲ್ಲಿದ್ದಾರೆ. ಒಮ್ಮೆ ಮದುವೆಯಾಗಿ ಬೇರೆಯಾದ ಈ ಜೋಡಿ ಈಗ ಬಿಗ್ಬಾಸ್ ಮನೆಯಲ್ಲಿ ಕಾಣಿಸಿಕೊಂಡ್ರೆ ಶೃತಿಯವ್ರ ಜೊತೆ ಉಳ್ಕೊಳ್ಳೋದಾದ್ರೆ ಪರಿಸ್ಥಿತಿ ಹೇಗಿರುತ್ತೆ? ನಟಿ ಶೃತಿ ಇದನ್ನ ಹೇಗೆ ಸ್ವೀಕರಿಸ್ತಾರೋ ಗೊತ್ತಿಲ್ಲ. ಆದರೆ, ಶೃತಿ ಎಂಥ ಗಟ್ಟಿ ಮನಸ್ಸಿನ ಹೆಣ್ಣು ಎಂಬುದನ್ನು ಈಗಾಗಲೆ ಸಾಬೀತುಪಡಿಸಿದ್ದಾರೆ. [ಶ್ರುತಿ ಮಾಜಿ ಪತಿಯ ಮನದಾಳದ ಮಾತುಗಳು]

If at all Chandrachud enters Bigg Boss Kannada house

ಕವಿ, ಪತ್ರಕರ್ತ ನಿರ್ದೇಶಕ, ಚಂದ್ರಚೂಡ್ ಅವ್ರಿಗೆ ಬಿಗ್ ಬಾಸ್ ಮನೆಯಲ್ಲಿ ಖಂಡಿತ ಸಪೋರ್ಟ್ ಅಂತೂ ಇರಲಿದೆ. ಸಪೋರ್ಟ್ ಯಾರಿಂದ ಅಂತ ನಿಮ್ಗೆ ಗೊತ್ತಾಗಿರ್ಬೇಕು. ಚಂದ್ರಚೂಡ್ ಮುಂದಿನ ಸಿನಿಮಾ `ರಾವಣಿ'ಯ ನಾಯಕಿ, ಇನ್ನೂ ಮುಂಗಾರುಮಳೆ ಚಿತ್ರದ ಹುಡುಗಿ ಅಂತಲೇ ಖ್ಯಾತರಾಗಿರುವ ಪೂಜಾಗಾಂಧಿ.

ಬಿಗ್ ಬಾಸ್ ಓಪನಿಂಗ್ ದಿನ ಚಂದ್ರಚೂಡ್ ಕೂಡ ಪೂಜಾ ಅವರ ಜೊತೆ ಬಂದಿದ್ರು. ಪೂಜಾಗಾಂಧಿಯವ್ರಿಗೆ ಆಲ್ ದ ಬೆಸ್ಟ್ ಹೇಳಿದ್ರು. ಈಗಾಗ್ಲೇ ಹುಚ್ಚ ವೆಂಕಟ್ ನಿಂದಾಗಿ ಸಖತ್ ಹೀಟ್ನಲ್ಲಿ ಇರುವ ಬಿಗ್ಬಾಸ್ಗೆ ಚಂದ್ರಚೂಡ್ ಎಂಟ್ರಿಕೊಟ್ರೆ ಮತ್ತಷ್ಟು ಕಿಕ್ ಕೊಡೋದ್ರಲ್ಲಿ ಅನುಮಾನವಿಲ್ಲ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಇನ್ನು ಚಂದ್ರಚೂಡ್ ಇಷ್ಟಕ್ಕೂ ತಮ್ಮ ಹೆಸ್ರನ್ನ ಚಕ್ರವರ್ತಿ ಅಂತ ಬದಲಿಸಿಕೊಂಡಿದ್ದಾರೆ. ಆದ್ರೆ ಅವ್ರ ಅದೃಷ್ಟ ಬಿಗ್ಬಾಸ್ನಿಂದ ಬದ್ಲಾಗುತ್ತಾ? ಶೃತಿ ಮತ್ತು ಚಂದ್ರಚೂಡ್ ಒಂದೇ ಮನೆಯಲ್ಲಿ ಇದ್ದರೆ ಆಗುವ ಮುಜುಗರ ಅಥ್ವಾ ವಾದ ವಿವಾದಗಳ ಹೊಗೆ ಹೇಗಿರುತ್ತೆ ಕಾದು ನೋಡ್ಬೇಕಷ್ಟೆ. [ಮಂಜುಳಾ ಜೊತೆ ಬದುಕುವ ಪ್ರಮೇಯವೇ ಇಲ್ಲ]

English summary
If at all journalist, poet, director Chandrachud enters Bigg Boss Kannada 3 reality show, what happens? His ex wife Shruti is already in Bigg Boss, his new Kannada movie Ravani's heroine Pooja Gandhi is also there as contestant. But, will it happen?
Please Wait while comments are loading...

Kannada Photos

Go to : More Photos