»   » ದುರಂತ ಸಾವನ್ನಪ್ಪಿದ ಹಳ್ಳಿಹೈದ ರಾಜೇಶ್ ದೆವ್ವವಾಗಿ ಬಂದನೇ?

ದುರಂತ ಸಾವನ್ನಪ್ಪಿದ ಹಳ್ಳಿಹೈದ ರಾಜೇಶ್ ದೆವ್ವವಾಗಿ ಬಂದನೇ?

Posted by:
Subscribe to Filmibeat Kannada

'ಹಳ್ಳಿಹೈದ ಪ್ಯಾಟೆಗೆ ಬಂದ' ರಿಯಾಲಿಟಿ ಶೋ ಮೂಲಕ ಜನಪ್ರಿಯಗೊಂಡಿದ್ದ ಜಂಗಲ್ ಜಾಕಿ ಆಲಿಯಾಸ್ ಹಳ್ಳಿಹೈದ ಆಲಿಯಾಸ್ ರಾಜೇಶ್ ದೆವ್ವವಾಗಿ ಕಾಣಿಸಿಕೊಂಡಿದ್ದಾನೆಯೇ?

ಹೌದು ಎನ್ನುತ್ತಾರೆ, ರಾಜೇಶ್ ನೆಲೆಸಿದ್ದ ಮೈಸೂರಿನ ಪರಸಯ್ಯನ ಹುಂಡಿಯ ಜನತೆ. ಜೊತೆಗೆ ರಾಜೇಶ್ ತಾಯಿ ಕೂಡಾ ಮಗ ದೆವ್ವವಾಗಿ ಬಂದಿದ್ದಾನೆ ಎನ್ನುವುದನ್ನು ಬಲವಾಗಿ ನಂಬುತ್ತಿದ್ದಾರೆ. (ಹಳ್ಳಿ ಹೈದ ರಾಜೇಶ್ ವಿಧಿ ವಿಲಾಸಕ್ಕೆ ಬಲಿಯಾದನೇ)

ಹಳ್ಳಿಹೈದ ಟಿವಿ ಶೋ ಮೂಲಕ ಕಿರುತೆರೆಗೆ ಬಂದಿದ್ದ ರಾಜೇಶ್ 'ಜಂಗಲ್ ಜಾಕಿ' ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು. ಇದಾದ ನಂತರ ಲವ್ ಈಸ್ ಪಾಯಿಸನ್ ಎನ್ನುವ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದರು.

ಈ ಚಿತ್ರ ಬಿಡುಗಡೆಗೆ ಮುನ್ನವೇ ತನ್ನ ಊರಿನ ಮನೆಯಲ್ಲಿ ಮಹಡಿಯಿಂದ ಬಿದ್ದು ರಾಜೇಶ್ ದುರಂತ ಸಾವನ್ನಪ್ಪಿದ್ದರು. ಈಗ ಆತ ನೆಲೆಸಿದ್ದ ಮನೆಯ ಮಾಲೀಕನ ಮಗನ ಮೇಲೆ ರಾಜೇಶ್ ದೆವ್ವವಾಗಿ ಬಂದಿದ್ದಾನೆ ಎನ್ನುವುದು ಪರಸಯ್ಯನ ಗುಂಡಿಯ ಜನತೆ ಆಡಿಕೊಳ್ಳುತ್ತಿರುವ ಮಾತು.

ಜಂಗಲ್ ಜಾಕಿ ಊರಿನವರು ಏನಂತಾರೆ

ಜಂಗಲ್ ಜಾಕಿ ಊರಿನವರು ಏನಂತಾರೆ

ಕಳೆದ ಕೆಲವು ದಿನಗಳಿಂದ ರಾಜೇಶ್ ಮನೆ ಮಾಲೀಕನ ಮಗ ರವಿಯ ವರ್ತನೆ ವಿಚಿತ್ರವಾಗಿದೆಯಂತೆ. ಈತನ ಬದಲಾದ ವರ್ತನೆ ರಾಜೇಶ್ ವರ್ತನೆಯನ್ನೇ ಹೋಲುತ್ತಿದೆ ಎನ್ನುವುದು ಈಗ ಇಲ್ಲಿನ ಜನರ ಪ್ರಮುಖ ಚರ್ಚೆಯ ವಿಷಯ.

ಈ ವಿಷಯ ಈಗ ಊರೆಲ್ಲಾ ಸುದ್ದಿಯಾಗಿದೆ

ಈ ವಿಷಯ ಈಗ ಊರೆಲ್ಲಾ ಸುದ್ದಿಯಾಗಿದೆ

ಜಂಗಲ್ ಜಾಕಿ ದೆವ್ವವಾಗಿ ರವಿ ಮೈಮೇಲೆ ಕಾಣಿಸಿಕೊಳ್ಳುತ್ತಿದ್ದಾನೆ ಎನ್ನುವ ಊರಿನ ಜನರ ಮಾತು ಈಗ ಊರೆಲ್ಲಾ ಹಬ್ಬಿದೆ. ಇದಕ್ಕೆ ಪೂರಕ ಎನ್ನುವಂತೆ ರಾಜೇಶ್ ತಾಯಿ ಕೂಡಾ ನನ್ನ ಮಗ ಮಾಲೀಕನ ಮಗನನ್ನು ಆವರಿಸಿದ್ದಾನೆ ಎನ್ನುತ್ತಿದ್ದಾರೆ.

ಅಕಾಲಿಕ ಸಾವನ್ನಪ್ಪಿದ್ದ ರಾಜೇಶ್

ಅಕಾಲಿಕ ಸಾವನ್ನಪ್ಪಿದ್ದ ರಾಜೇಶ್

ಮೈಸೂರಿನ ಶ್ರೀರಾಮಪುರದ ಪರಸಯ್ಯನ ಹುಂಡಿಯಲ್ಲಿ ವಾಸವಾಗಿದ್ದ ರಾಜೇಶ್, ತಾನು ವಾಸವಾಗಿದ್ದ ಮನೆಯ ಮೂರನೇ ಅಂತಸ್ತಿನ ಮನೆಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ನವೆಂಬರ್ 3, 2013ರಂದು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಮುಗ್ದ ಮನಸ್ಸಿನ ರಾಜೇಶ್

ಮುಗ್ದ ಮನಸ್ಸಿನ ರಾಜೇಶ್

ಮುಗ್ದ ಮನಸ್ಸಿನ ಭಾವುಕಜೀವಿಯಾಗಿದ್ದ ರಾಜೇಶ್, ಎಲ್ಲಾ ವಿಚಾರವನ್ನೂ ತೀವ್ರವಾಗಿ ಮನಸ್ಸಿಗೆ ತೆಗೆದುಕೊಳ್ಳುತ್ತಿದ್ದ. ಮಾನಸಿಕವಾಗಿ ಯಾತನೆಗೆ ಒಳಗಾಗಿದ್ದ ರಾಜೇಶ್ ನನ್ನು ಪುನೀತ್ ಮತ್ತು ದರ್ಶನ್ ಖುದ್ದು ಭೇಟಿಯಾಗಿದ್ದರು.

ಮಾರ್ಚ್ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರಾಜೇಶ್

ಮಾರ್ಚ್ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರಾಜೇಶ್

ಮಾರ್ಚ್ 2013ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರಾಜೇಶ್, ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. "ರಾಜೇಶ್ ಹುಚ್ಚನಂತೆ ವರ್ತಿಸುತ್ತಿದ್ದಾನೆ" ಎಂದು ಮೈಸೂರಿನ ಕೆ ಆರ್ ಆಸ್ಪತ್ರೆಯ ವೈದ್ಯರು ಹೇಳಿಕೆ ನೀಡಿದ್ದರು.

English summary
As per people of Parasayyana Hundi Jungle Jackie, Halli Haida fame actor Rajesh, has returned as ghost and haunting people. Rajesh acted in couple of Kannada movie and committed suicide in Mysore.
Please Wait while comments are loading...

Kannada Photos

Go to : More Photos