»   » 'ಫಸ್ಟ್ ರ‍್ಯಾಂಕ್‌ ರಾಜು' ಗುರುನಂದನ್ ಗೆ ಯಶಸ್ಸಿನ ಅಮಲು ನೆತ್ತಿಗೇರ್ತಾ?

'ಫಸ್ಟ್ ರ‍್ಯಾಂಕ್‌ ರಾಜು' ಗುರುನಂದನ್ ಗೆ ಯಶಸ್ಸಿನ ಅಮಲು ನೆತ್ತಿಗೇರ್ತಾ?

Written by: ಹರಾ
Subscribe to Filmibeat Kannada

'ಅಲ್ಪನಿಗೆ ಐಶ್ವರ್ಯ ಬಂದ್ರೆ, ಅರ್ಧ ರಾತ್ರೀಲಿ ಕೊಡೆ ಹಿಡಿದ್ನಂತೆ.!' ಈ ಗಾದೆ ಮಾತನ್ನ ಹೇಳ್ತಾ ಇಡೀ ಗಾಂಧಿನಗರ 'ಫಸ್ಟ್ ರ‍್ಯಾಂಕ್‌ ರಾಜು' ನಾಯಕ ನಟ ಗುರುನಂದನ್ ರತ್ತ ಬೆಟ್ಟು ಮಾಡಿ ತೋರಿಸುತ್ತಿದೆ. ಇದಕ್ಕೆ ಕಾರಣ ನಟ ಗುರುನಂದನ್ ರವರ ನಡವಳಿಕೆ.

ಒಂದ್ಕಾಲದಲ್ಲಿ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಗುರುನಂದನ್ 'ಫಸ್ಟ್ ರ‍್ಯಾಂಕ್‌ ರಾಜು' ಹಿಟ್ ಆಗಿದ್ದೇ ತಡ ಏಕ್ದಂ ಸ್ಟಾರ್ ಪಟ್ಟಕ್ಕೆ ಏರಿಬಿಟ್ಟಿದ್ದಾರೆ. ಸ್ಟಾರ್ ವಾಲ್ಯೂನ ನೆತ್ತಿಗೇರಿಸಿಕೊಂಡಿರುವ ಗುರುನಂದನ್ ನಿರ್ದೇಶಕರೊಬ್ಬರ ಬಳಿ ಆಡಿರುವ ಮಾತುಗಳು ಇಡೀ ಗಾಂಧಿನಗರದಲ್ಲಿ ಸೌಂಡ್ ಆಗ್ತಿದೆ. [ಫಸ್ಟ್ Rank ರಾಜು ಚಿತ್ರವಿಮರ್ಶೆ: ಡಿಸ್ಟಿಂಕ್ಷನ್ ಗೆ ಕೊಂಚ ಕಮ್ಮಿ]

ಅಂಥದ್ದೇನಾಯ್ತು ಅಂತ ಡೀಟೇಲ್ ಆಗಿ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......

ಹಳೆಯದನ್ನೆಲ್ಲಾ ಮರೆತುಬಿಟ್ರಾ ಗುರುನಂದನ್?

ಹಳೆಯದನ್ನೆಲ್ಲಾ ಮರೆತುಬಿಟ್ರಾ ಗುರುನಂದನ್?

ಕೇವಲ ಒಂದು ವರ್ಷ ಫ್ಲ್ಯಾಶ್ ಬ್ಯಾಕ್ ಗೆ ಹೋದರೆ, ಗುರುನಂದನ್ ಯಾರು ಅನ್ನೋದು ಗಾಂಧಿನಗರಕ್ಕೆ ಪರಿಚಯವೇ ಇರ್ಲಿಲ್ಲ. ಧಾರಾವಾಹಿಗಳಲ್ಲಿ, ಹಲವು ಸಿನಿಮಾಗಳಲ್ಲಿ ಹೀಗೆ ಬಂದು ಹಾಗೆ ಹೋಗುವ ಪಾತ್ರ ನಿರ್ವಹಿಸುತ್ತಿದ್ದ ಗುರುನಂದನ್ ಈಗ ಅದನ್ನೆಲ್ಲಾ ಮರೆತಂತಿದೆ.

'ಟ್ಯೂಬ್ ಲೈಟ್' ಚಿತ್ರದ ಬಗ್ಗೆ ಕೇಳಿದ್ದೀರಾ?

'ಟ್ಯೂಬ್ ಲೈಟ್' ಚಿತ್ರದ ಬಗ್ಗೆ ಕೇಳಿದ್ದೀರಾ?

'ಫಸ್ಟ್ ರ‍್ಯಾಂಕ್‌ ರಾಜು' ಸಿನಿಮಾ ಮಾಡುವ ಮುನ್ನ ಗುರುನಂದನ್ 'ಟ್ಯೂಬ್ ಲೈಟ್' ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ್ದರು. ಈಗ ಗುರುನಂದನ್ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಗಾಸಿಪ್ ಪಂಡಿತರ ಬಾಯಿಗೆ ಆಹಾರವಾಗುವುದಕ್ಕೆ ಇದೇ ಸಿನಿಮಾ ಕಾರಣ.

ವಿವಾದವೇನು?

ವಿವಾದವೇನು?

'ಟ್ಯೂಬ್ ಲೈಟ್' ಸಿನಿಮಾ ಸೆಟ್ಟೇರಿ ವರ್ಷದ ಮೇಲಾಗಿದೆ. ಅನಿವಾರ್ಯ ಕಾರಣಗಳಿಂದ ಚಿತ್ರ ನಿರ್ಮಾಣ ತಡವಾಗಿದೆ. ಚಿತ್ರೀಕರಣ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾದಲ್ಲಿರುವ ನಾಯಕರ ಪೈಕಿ ಗುರುನಂದನ್ ಕೂಡ ಒಬ್ಬರು. ಅವರ ಪಾತ್ರಕ್ಕೆ ಅವರೇ ಡಬ್ ಮಾಡಬೇಕು. ಸದ್ಯಕ್ಕೆ ಈ ಚಿತ್ರ ಡಬ್ಬಿಂಗ್ ಹಂತದಲ್ಲಿದೆ. ಕ್ಯಾತೆ ಶುರುವಾಗಿರುವುದು ಅಲ್ಲಿಂದಲೇ.

ಸಮಸ್ಯೆ ಏನು?

ಸಮಸ್ಯೆ ಏನು?

ತಮ್ಮ ಪಾಲಿನ ಡಬ್ಬಿಂಗ್ ಮುಗಿಸಿಕೊಡಿ ಅಂತ ಚಿತ್ರದ ನಿರ್ದೇಶಕ ವಿಷ್ಣು.ವಿ.ಪ್ರಸನ್ನ, ಗುರುನಂದನ್ ರವರನ್ನ ಕೇಳಿದ್ದಾರೆ. ಅದಕ್ಕೆ ಗುರುನಂದನ್ ಕೊಟ್ಟ ಪ್ರತಿಕ್ರಿಯೆಗೆ ನಿರ್ದೇಶಕರು ಧಂಗಾಗಿ ಹೋಗಿದ್ದಾರೆ.

ಗುರುನಂದನ್ ಹೇಳಿದ್ದೇನು?

ಗುರುನಂದನ್ ಹೇಳಿದ್ದೇನು?

''ನಾನು ತುಂಬಾ ಬಿಜಿ. ಟೈಮ್ ಇಲ್ಲ. ದೊಡ್ಡ ದೊಡ್ಡ ನಿರ್ಮಾಪಕರೇ ನನ್ನ ಡೇಟ್ಸ್ ಗಾಗಿ ಕಾದಿದ್ದಾರೆ. ಡಬ್ಬಿಂಗ್ ಮಾಡೋಕೆ ಟೈಮ್ ಇಲ್ಲ. ಮಾಡಲೇಬೇಕು ಅಂತಿದ್ರೆ ಐವತ್ತು ಲಕ್ಷ ರೂಪಾಯಿ ಕೊಡಿ'' ಅಂತ ಗುರುನಂದನ್ ನಿರ್ದೇಶಕ ವಿಷ್ಣು.ವಿ.ಪ್ರಸನ್ನ ಗೆ ಹೇಳಿದ್ರಂತೆ.

ಬೆಚ್ಚಿಬಿದ್ದ ನಿರ್ದೇಶಕ!

ಬೆಚ್ಚಿಬಿದ್ದ ನಿರ್ದೇಶಕ!

ಕೇವಲ ಒಂದು ವರ್ಷದ ಹಿಂದೆ 'ಚಾನ್ಸ್ ಕೊಡಿ ಸಾರ್' ಅಂತಿದ್ದ ಯುವಕ ಈಗ ಐವತ್ತು ಲಕ್ಷ ಬೇಡಿಕೆ ಇಟ್ಟಿದ್ದನ್ನ ಕೇಳಿ ನಿರ್ದೇಶಕ ವಿಷ್ಣು.ವಿ.ಪ್ರಸನ್ನ ಬೆಚ್ಚಿಬಿದ್ದಿದ್ದಾರಂತೆ.

ಮುಂದೇನು?

ಮುಂದೇನು?

'ಟ್ಯೂಬ್ ಲೈಟ್' ಚಿತ್ರದ ಕೆಲವು ಕ್ಲಿಪ್ಪಿಂಗ್ ಗಳನ್ನ ತೋರಿಸಿ ಗುರುನಂದನ್ ಮನವೊಲಿಸುವ ಕಾರ್ಯವನ್ನ ನಿರ್ದೇಶಕ ವಿಷ್ಣು.ವಿ.ಪ್ರಸನ್ನ ಮಾಡಿದ್ದಾರೆ. ಅದ್ರೂ ಗುರುನಂದನ್ ಇನ್ನೂ ಒಪ್ಪಿಗೆ ಸೂಚಿಸಿಲ್ಲವಂತೆ.

ಗಲ್ಲಿ ಗಾಸಿಪ್!

ಗಲ್ಲಿ ಗಾಸಿಪ್!

ಗುರುನಂದನ್ ರವರು ಆಡಿದ ಮಾತುಗಳು ಸದ್ಯ ಗಾಂಧಿನಗರ ತುಂಬೆಲ್ಲಾ ಹರಿದಾಡುತ್ತಿದೆ.

'ಟ್ಯೂಬ್ ಲೈಟ್' ಟ್ರೈಲರ್ ಇಲ್ಲಿದೆ ನೋಡಿ....

ಅಜಯ್ ರಾಜ್, ಗುರುನಂದನ್, ಆರ್ಯನ್, ರಾಜೇಂದ್ರ ಅಭಿನಯಿಸಿರುವ ವಿಷ್ಣು.ವಿ.ಪ್ರಸನ್ನ ಆಕ್ಷನ್ ಕಟ್ ಹೇಳಿರುವ 'ಟ್ಯೂಬ್ ಲೈಟ್' ಚಿತ್ರದ ಟ್ರೇಲರ್ ಇಲ್ಲಿದೆ ನೋಡಿ...

English summary
Kannada Actor Gurunandan of 'First Rank Raju' fame is in news for wrong reasons. Read the article to know more.
Please Wait while comments are loading...

Kannada Photos

Go to : More Photos