»   » ಪ್ರಕಾಶ್ ರೈ ಶಟರ್ ಎಳೆಯಲು ಪ್ರಿಯಾಮಣಿ ಬರ್ತಾರ?

ಪ್ರಕಾಶ್ ರೈ ಶಟರ್ ಎಳೆಯಲು ಪ್ರಿಯಾಮಣಿ ಬರ್ತಾರ?

Posted by:
Subscribe to Filmibeat Kannada

ಬಹುಮುಖ ಪ್ರತಿಭೆ ಪ್ರಕಾಶ್ ರೈ ಅವರು ಮಲಯಾಳಂನ 'ಶಟರ್' ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿರುವ ವಿಷಯವನ್ನು ನಾವು ಇದೇ ಫಿಲ್ಮಿಬೀಟಲ್ಲಿ ನಿಮಗೆ ನಾವು ಹೇಳಿದ್ವಿ ಅಲ್ವಾ.

ಇದೀಗ ಈ ಸಿನಿಮಾದಿಂದ ಹೊರಬಿದ್ದಿರುವ ಖಾಸ್ ಖಬರ್ ಏನಪ್ಪಾ ಅಂದ್ರೆ, ಈ ಸಿನಿಮಾಕ್ಕೆ ನಾಯಕಿ ನಟಿಯಾಗಿ ನಟಿ ಪ್ರಿಯಾಮಣಿ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಪ್ರಕಾಶ್ ರಾಜ್ ಅವರು 'ಶಟರ್' ಚಿತ್ರಕ್ಕೆ, ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

ಈಗಾಗಲೇ ಪ್ರಕಾಶ್ ರೈ ಅವರು ನಟಿ ಪ್ರಿಯಾಮಣಿ ಅವರನ್ನು ಸಂಪರ್ಕಿಸಿದ್ದು, ಅವರು ಒಪ್ಪಿಕೊಂಡಿದ್ದು, ಚಿತ್ರದಲ್ಲಿ ನಟಿಸಲು ಬಹಳ ಉತ್ಸುಕರಾಗಿದ್ದಾರೆ.

ಇನ್ನು ಈ ಚಿತ್ರದಲ್ಲಿ ನಟ ಪ್ರಕಾಶ್ ರೈ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರಂತೆ. ಈ ಚಿತ್ರ ತುಳುವಿಗೂ ರಿಮೇಕ್ ಆಗಲಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದೆ.[ನಟ ಪ್ರಕಾಶ್ ರಾಜ್ ಗೆ ಶಟರ್ ಪ್ರಾಬ್ಲಂ! ]

ಅಂದಹಾಗೆ ಡಿಸೆಂಬರ್ ಕೊನೆಗೆ ಅಥವಾ ಜನವರಿ ತಿಂಗಳಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲು ನಟ ಕಮ್ ನಿರ್ದೇಶಕ ಪ್ರಕಾಶ್ ರೈ ಅವರು ನಿರ್ಧರಿಸಿದ್ದಾರೆ.

ಈ ಮೊದಲು ಪ್ರಕಾಶ್ ರಾಜ್ ಅವರ 'ಒಗ್ಗರಣೆ' ಚಿತ್ರ ಸ್ಯಾಂಡಲ್ ವುಡ್ ಬಾಕ್ಸಾಫೀಸ್ ನಲ್ಲಿ ಹಿಟ್ ಕಂಡಿದ್ದು, ಇದೀಗ ಶಟರ್ ಚಿತ್ರದ ರಿಮೇಕ್ ಮೂಲಕ ಮತ್ತೆ ಕನ್ನಡ ಸಿನಿ ಕ್ಷೇತ್ರದಲ್ಲಿ ಸೌಂಡ್ ಮಾಡಲಿದ್ದಾರೆ.

English summary
Kannada Actress Priyamani acting in Actor Prakash Rai directorial Shutter.
Please Wait while comments are loading...

Kannada Photos

Go to : More Photos