»   » ಸ್ಯಾಂಡಲ್ ವುಡ್ ನಲ್ಲಿ ಬರ್ತಿದೆ ಡಬಲ್ ಮೀನಿಂಗ್ ಚಿತ್ರ

ಸ್ಯಾಂಡಲ್ ವುಡ್ ನಲ್ಲಿ ಬರ್ತಿದೆ ಡಬಲ್ ಮೀನಿಂಗ್ ಚಿತ್ರ

Written by: ಜೀವನರಸಿಕ
Subscribe to Filmibeat Kannada

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಬಂದಾಗ ಏನ್ ಡಬ್ಬಲ್ ಮೀನಿಂಗ್ ಸಿನಿಮಾ ಇದು ಅಂತ ಮುದುಕರು ಮೂಗು ಮುರಿದ್ರೆ. ಯುವಕರ ಮನಸ್ಸು ಹುಣಸೇ ಹಣ್ಣು ತಿಂದಂಗೆ ಹುಳ್ಳಗಾಗಿತ್ತು. ಡಬಲ್ ಮೀನಿಂಗ್ ಡೈಲಾಗ್ ಮೂಲಕಾನೆ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡ್ರೂ ಸಿನಿಮಾ ಚೆನ್ನಾಗಿದ್ದಿದ್ದರಿಂದ ಗೆದ್ದಿತ್ತು.

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ನಂತರ ಹಲವು ಸಿನಿಮಾಗಳು ತಮ್ಮ ಸಿನಿಮಾದಲ್ಲಿ ಈ ಡಬಲ್ ಮೀನಿಂಗ್ ಪ್ರಯೋಗ ಮಾಡಿದ್ವು,ಆದ್ರೆ ಗೆಲ್ಲಲಿಲ್ಲ. ಅಚ್ಚರಿ ಅಂದ್ರೆ ಇಲ್ಲಿಯವರೆಗೂ ಸಿನಿಮಾದಲ್ಲಿ ಡಬ್ಬಲ್ ಮೀನಿಂಗ್ ಇರ್ತಿತ್ತು. ಆದರೆ ಈಗ 'ಡಬಲ್ ಮೀನಿಂಗ್' ಅನ್ನೋದೇ ಒಂದು ಸಿನಿಮಾ ಆಗ್ತಿದೆ. ['ಡಬಲ್ ಮೀನಿಂಗ್' ಸಿನಿಮಾ ಮಾಡ್ತಿಲ್ಲ: ಸಾಯಿಪ್ರಕಾಶ್]

Kannada movie titled as 'Double Meaning'

ಇನ್ನು ಈ ಡಬಲ್ ಮೀನಿಂಗ್ ಅನ್ನೋ ಟೈಟಲನ್ನು ಸಾಯಿಪ್ರಕಾಶ್ ಬ್ಯಾನರ್ ಪಡ್ಕೊಂಡಿದಿಯಂತೆ. ಸಾಯಿಪ್ರಕಾಶ್ ಇಂತಹಾ ಸಿನಿಮಾ ಮಾಡೋದು ಡೌಟು. ಆದರೆ ಸದ್ಯ 'ಕ' ಅನ್ನೋ ಟಿಪಿಕಲ್ ಸಿನಿಮಾ ಮಾಡ್ತಿರೋ ಸಾಯಿಪ್ರಕಾಶ್ ಪುತ್ರ ಸಾಯಿಕೃಷ್ಣ ಡಬ್ಬಲ್ ಸಿನಿಮಾವನ್ನ ಯೂತ್ ಗೆ ಇಷ್ಟವಾಗೋ ತರಹ ಮಾಡಬಹುದು ಅನ್ನಿಸ್ತಿದೆ.

ಯಾರಾದ್ರೂ ಮಾಡಿ ಆದ್ರೆ ಡಬ್ಬಲ್ ಮೀನಿಂಗ್ ಸ್ವಲ್ಪ ಕಡಿಮೆ ಮಾಡಿ ಫ್ಯಾಮಿಲಿ ಕೂತ್ಕೊಂಡ್ ನೋಡೋ ಸಿನಿಮಾ ಕೊಡಿ ಅಂತಿದ್ದಾರೆ ಚಿತ್ರಪ್ರೇಮಿಗಳು. ಇತ್ತೀಚೆಗೆ ಬಂದಂತಹ ಸಿದ್ಲಿಂಗು, ಗಾಲಿ, ಡೈರೆಕ್ಟರ್ಸ್ ಸ್ಪೆಷಲ್ ಚಿತ್ರಗಳು ಡಬ್ಬಲ್ ಮೀನಿಂಗ್ ನಿಂದ ತುಂಬಿ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Sandalwood grapevine is that, Saipraksh banner registers 'Double Meaning' title in Karnataka Film Chamber of Commerce. But who directs the movie is yet disclosed. More details are awaited.
Please Wait while comments are loading...

Kannada Photos

Go to : More Photos