»   » ಅಂದು 'ನಾನು', ಇಂದು 'ನೀನು' ಮುಂದೆ 'ಯಾರು'?

ಅಂದು 'ನಾನು', ಇಂದು 'ನೀನು' ಮುಂದೆ 'ಯಾರು'?

Posted by:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಉಪ್ಪಿ-2' ಇಂದು ರಿಲೀಸ್ ಆಗಿದೆ. ಎಲ್ಲರ ತಲೆಯಿಂದ ಹುಳ ತೆಗೆಯುತ್ತೇನೆ ಅಂತ ಹೇಳಿದ್ದ ಉಪೇಂದ್ರ ಈ ಬಾರಿ ತಲೆಗೆ ಹುಳ ಅಲ್ಲ, ಹಾವನ್ನೇ ಬಿಟ್ಟಿದ್ದಾರೆ.

ಇಂದು ಬೆಳಗ್ಗೆ ಬಿಸಿ ಬಿಸಿ ಉಪ್ಪಿಟ್ಟು ತಿಂದ ಪ್ರೇಕ್ಷಕರಿಗೆ 'ನಾನು' ಮತ್ತು 'ನೀನು' ಸಿಕ್ಕಾಪಟ್ಟೆ ಕನ್ ಫ್ಯೂಸ್ ಮಾಡಿದ್ದಾರೆ. ನಾನು ನಾನಲ್ಲ, ನಾನು ನೀನು, ನಿನ್ನೊಳಗಿನ ನಾನು ಯಾರು? ನಿನ್ನೊಳಗಿನ ನೀನು ಯಾರು? ಅನ್ನೋ ಹುಡುಕಾಟದಲ್ಲಿ ನೀನು ಸಿಕ್ಕಿದ್ನಾ ಅನ್ನೋದೇ ಯಾರಿಗೂ ಗೊತ್ತಾಗ್ಲಿಲ್ಲ. [ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]


Kannada Movie 'Uppi-2' ends abruptly: Is Upendra planning for Uppi-3?

ಅಸಲಿಗೆ 'ಉಪ್ಪಿ-2' ಸಿನಿಮಾ ಮುಗಿದ ಮೇಲೂ, ಇನ್ನೂ ಇರಬಹುದು ಅಂತ ಪ್ರೇಕ್ಷಕರು ಕಾಯ್ತಿದ್ರು. ಹಾಗೆ, ಖಾಲಿ ಸ್ಕ್ರೀನ್ ತೋರ್ಸಿ ನಿಮ್ಮ ತಲೆಗೆ ಕೆಲಸ ಕೊಟ್ಟಿದ್ದಾರೆ ಉಪೇಂದ್ರ.


ಇದರ ಅರ್ಥ 'ನೀನು' ಯಾರು ಅನ್ನೋದನ್ನ ನೀವೇ ಕಂಡುಕೊಳ್ಳಬೇಕೋ ಅಥವಾ ಉತ್ತರವನ್ನ ಉಪೇಂದ್ರ ಅವರೇ ಮುಂದೆ ಹೇಳ್ತಾರೋ ಅನ್ನೋದು ಮಾತ್ರ ಕ್ಲಿಯರ್ ಆಗಿಲ್ಲ.


ಆದ್ರೆ, 'ಉಪ್ಪಿ-2' ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಮಾತ್ರ 'ಉಪ್ಪಿ-3' ಬರೋದು ಗ್ಯಾರೆಂಟಿ ಅಂತಿದ್ದಾರೆ. ಇದು ನಿಜವೇ ಆದರೆ, ಅಂದು 'ನಾನು' ಆಗಿದ್ದ ಉಪ್ಪಿ ಇಂದು 'ನೀನು' ಆಗಿದ್ದಾರೆ. ಮುಂದಕ್ಕೆ 'ಯಾರು' ಆಗ್ತಾರೆ ಅನ್ನೋದು ಸದ್ಯಕ್ಕೆ ಅಭಿಮಾನಿಗಳಿಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ.

English summary
Upendra directorial and starrer Kannada Movie 'Uppi-2' has hit the screens today (Aug 14th). 'Uppi-2' has abrupt ending without conclusion. Does this mean Upendra is planning for Uppi-3?
Please Wait while comments are loading...

Kannada Photos

Go to : More Photos