»   » ಕತ್ರಿನಾ ಕೈಫ್, ರಣಬೀರ್ ಮದುವೆಗೆ ಲೈನ್ ಕ್ಲಿಯರ್!

ಕತ್ರಿನಾ ಕೈಫ್, ರಣಬೀರ್ ಮದುವೆಗೆ ಲೈನ್ ಕ್ಲಿಯರ್!

Written by: ಉದಯರವಿ
Subscribe to Filmibeat Kannada

ಬಾಲಿವುಡ್ ಚಾಕೊಲೇಟ್ ಹೀರೋ ಹಾಗೂ ಬಳುಕುವ ಬಳ್ಳಿ ಕತ್ರಿನಾ ಕೈಫ್ ನಡುವೆ ಲವ್ವಿಡವ್ವಿ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇಬ್ಬರ ನಡುವೆ ಲಿವ್ ಇನ್ ರಿಲೇಷನ್ ಶಿಪ್ ಇದ್ದು ಒಂದೇ ಮನೆಯಲ್ಲಿ ವಾಸವಾಗಿದ್ದಾರೆ ಎಂಬುದೂ ಚಿದಂಬರ ರಹಸ್ಯವೇನಲ್ಲ.

ಭಾರತದಲ್ಲಿ ಕ್ಯಾಮೆರಾ ಕಣ್ಣು ತಪ್ಪಿಸಿಕೊಂಡು ತಿರುಗಾಡುವುದು ಕಷ್ಟ ಎಂದು ಗೊತ್ತಿರುವ ಈ ಯುವ ಜೋಡಿ ಆಗಾಗ ಎಲ್ಲರ ಕಣ್ಣು ತಪ್ಪಿಸಿ ವಿದೇಶಕ್ಕೆ ಹಾರಿ ಎಂಜಾಯ್ ಮಾಡುತ್ತಾ ಬಂದಿದ್ದಾರೆ. ಆದರೆ ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲವೇ ಎಂಬಂತಾಗಿತ್ತು ಇವರ ಪರಿಸ್ಥಿತಿ.

ಇದೀಗ ಇವರಿಬ್ಬರ ಮತ್ತಷ್ಟು ಸನಿಹಕ್ಕೆ ಬರುತ್ತಿದ್ದಾರೆ. ಶೀಘ್ರದಲ್ಲೇ ಇವರಿಬ್ಬರೂ ಹಾರಬದಲಾಯಿಸಿಕೊಳ್ಳಲಿದ್ದಾರೆ. ಇವರಿಬ್ಬರ ಮದುವೆಗೆ ತೆರೆಮರೆಯ ಕಸರತ್ತುಗಳು ನಡೆಯುತ್ತಿದೆ ಎನ್ನುತ್ತವೆ ಮೂಲಗಳು. ಅತ್ತ ರಣಬೀರ್ ಕುಟುಂಬ ಹಾಗೂ ಇತ್ತ ಕತ್ರಿನಾ ಕುಟುಂಬಿಕರು ಒಪ್ಪಿಗೆ ನೀಡಿದ್ದಾರೆ. ಇನ್ನೇನಿದ್ದರೂ ಗಟ್ಟಿಮೇಳ ಮೊಳಗುವುದೊಂದು ಬಾಕಿ.

ಫೆಬ್ರವರಿ 2015ಕ್ಕೆ ಗಟ್ಟಿಮೇಳ ಗ್ಯಾರಂಟಿ

ಫೆಬ್ರವರಿ 2015ಕ್ಕೆ ಗಟ್ಟಿಮೇಳ ಗ್ಯಾರಂಟಿ

ರಣಬೀರ್ ಅವರ ತಂದೆ ರಿಷಿ ಕಪೂರ್ ಮದುವೆಗೆ ಆರಂಭದಲ್ಲಿ ಸ್ವಲ್ಪ ರಾಗ ಎಳೆದರೂ ಮಗನ ಕೋರಿಕೆಗೆ ನೋ ಹೇಳಲಾಗದೆ ಕಡೆಗೆ ಒಪ್ಪಿದ್ದಾರಂತೆ. ಇವರಿಬ್ಬರ ಮದುವೆ ಫೆಬ್ರವರಿ 2015ಕ್ಕೆ ನಡೆಯುವುದು ಗ್ಯಾರಂಟಿ ಎನ್ನುತ್ತಿವೆ ಮೂಲಗಳು.

ಬಾಲಿವುಡ್ ನಲ್ಲಿ ನಡೆಯಲಿರುವ ಅದ್ದೂರಿ ಮದುವೆ

ಬಾಲಿವುಡ್ ನಲ್ಲಿ ನಡೆಯಲಿರುವ ಅದ್ದೂರಿ ಮದುವೆ

ಇವರಿಬ್ಬರ ಮದುವೆ ಅದ್ದೂರಿಯಾಗಿ ನಡೆಯಲಿದ್ದು, ಬಾಲಿವುಡ್ ಚಿತ್ರರಂಗದಲ್ಲಿ ನಡೆಯಲಿರುವ ಮತ್ತೊಂದು ರಾಯಲ್ ಮದುವೆ ಇದಾಗಲಿದೆಯಂತೆ. ಇವರಿಬ್ಬರ ಪ್ರೀತಿ ಪ್ರೇಮ ಪ್ರಣಯದ ಫ್ಲ್ಯಾಷ್ ಬ್ಯಾಕ್ ಕಡೆಗೆ ಗಮನಹರಿಸೋಣ ಬನ್ನಿ.

ಅಜಬ್ ಪ್ರೇಮ್ ಕಿ ಗಜಬ್ ಕಹಾನಿ

ಅಜಬ್ ಪ್ರೇಮ್ ಕಿ ಗಜಬ್ ಕಹಾನಿ

ರಣಬೀರ್ ಹಾಗೂ ಕತ್ರಿನಾ ಮೊಟ್ಟ ಮೊದಲ ಬಾರಿಗೆ 'ಅಜಬ್ ಪ್ರೇಮ್ ಕಿ ಗಜಬ್ ಕಹಾನಿ' (2009) ಚಿತ್ರದಲ್ಲಿ ಅಭಿನಯಿಸಿದರು. ಆಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು ಎಂಬುದು ಬಾಲಿವುಡ್ ನ ಬಾತ್.

ಇನ್ನಷ್ಟು ಹತ್ತಿರಕ್ಕೆ ತಂದ ರಾಜ್ ನೀತಿ

ಇನ್ನಷ್ಟು ಹತ್ತಿರಕ್ಕೆ ತಂದ ರಾಜ್ ನೀತಿ

ಆ ಬಳಿಕ ಇಬ್ಬರೂ ರಾಜ್ ನೀತಿ ಎಂಬ ಚಿತ್ರದಲ್ಲಿ ಬಣ್ಣಹಚ್ಚಿದರು. ಆ ಚಿತ್ರ ಇಬ್ಬರನ್ನು ಇನ್ನಷ್ಟು ಹತ್ತಿರಕ್ಕೆ ತಂದು ಕೂರಿಸಿತು.

ವಿದೇಶಕ್ಕೆ ಹಾರಿ ಎಂಜಾಯ್ ಮಾಡಿದ ಜೋಡಿ

ವಿದೇಶಕ್ಕೆ ಹಾರಿ ಎಂಜಾಯ್ ಮಾಡಿದ ಜೋಡಿ

ಇಬ್ಬರ ನಡುವೆ ಪ್ರೀತಿ ಪ್ರೇಮ ಶುರುವಾಯಿತು. ನಿಂತರೆ ಚಾಟಿಂಗ್ ಕುಂತರೆ ಡೇಟಿಂಗ್ ಎಂಬಂತಾಯಿತು. ಭಾರತದಲ್ಲಿ ಮಾಧ್ಯಮಗಳ ಕಾಟ ಜಾಸ್ತಿಯಾದ ಮೇಲೆ ವಿದೇಶಕ್ಕೆ ಹಾರಿ ಲವ್ ಲೈಫ್ ಎಂಜಾಯ್ ಮಾಡಿದರು.

ಐದು ವರ್ಷ ಸುತ್ತಾಡಿ ಈಗ ಮದುವೆ ತಯಾರಿ

ಐದು ವರ್ಷ ಸುತ್ತಾಡಿ ಈಗ ಮದುವೆ ತಯಾರಿ

ಸರಿಸುಮಾರು ಐದು ವರ್ಷ ಸುತ್ತಾಡಿ ದಣಿದ ಈ ಜೋಡಿ ಈಗ ಮನೆಯವರನ್ನು ಒಪ್ಪಿಸಿ ಮದುವೆಗೆ ಸಿದ್ಧವಾಗಿದೆ. ಇಬ್ಬರಿಗೂ ಆಲ್ ದ ಬೆಸ್ಟ್ ಹೇಳೋಣ.

English summary
B-Town is abuzz with reports of Bollywood hero Ranbir kapoor and Katrina Kaif tying the knot in February next year.
Please Wait while comments are loading...

Kannada Photos

Go to : More Photos