»   » 'ಹೆಬ್ಬುಲಿ' ನಿರ್ಮಾಪಕನ ಸಾರಥ್ಯದಲ್ಲಿ ಬರಲಿದೆ ಸುದೀಪ್ 'ಕೆಂಪೇಗೌಡ 2'?

'ಹೆಬ್ಬುಲಿ' ನಿರ್ಮಾಪಕನ ಸಾರಥ್ಯದಲ್ಲಿ ಬರಲಿದೆ ಸುದೀಪ್ 'ಕೆಂಪೇಗೌಡ 2'?

Posted by:
Subscribe to Filmibeat Kannada

2012 ರಲ್ಲಿ ಬಿಡುಗಡೆ ಆದ ಕಿಚ್ಚ ಸುದೀಪ್ ಅಭಿನಯದ 'ಕೆಂಪೇಗೌಡ' ಚಿತ್ರ ಬಾಕ್ಸ್ ಆಫೀಸ್ ಲೂಟಿ ಮಾಡಿದ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ತಮಿಳಿನಲ್ಲಿ ಸೂರ್ಯ ಅಭಿನಯಿಸಿದ್ದ 'ಸಿಂಗಂ' ನ ರಿಮೇಕ್ ಚಿತ್ರವನ್ನು ಸುದೀಪ್ ಅವರೇ ನಿರ್ದೇಶನ ಮಾಡಿದ್ದರು.[ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

ಕಾಲಿವುಡ್ ನಲ್ಲಿ 'ಸಿಂಗಂ 2' ಚಿತ್ರ ಬಂದ ನಂತರ ಕನ್ನಡದಲ್ಲೂ ಸುದೀಪ್ ಅಭಿನಯದಲ್ಲಿ 'ಕೆಂಪೇಗೌಡ 2' ಬರಲಿದೆ ಎಂಬ ಸುದ್ದಿ ಗಾಂದಿನಗರದಲ್ಲಿ ಹರಿದಾಡಿದ್ದು. ಆದರೆ ಈ ಬಗ್ಗೆ ಕಳೆದ ನಾಲ್ಕೈದು ವರ್ಷಗಳಿಂದ ಯಾವುದೇ ಅಧಿಕೃತ ಮಾಹಿತಿ ಕಿಚ್ಚ ಸುದೀಪ್ ಕಡೆಯಿಂದ ಬಂದಿರಲಿಲ್ಲ. ಹಲವು ವರ್ಷಗಳ ನಂತರ ಈಗ 'ಕೆಂಪೇಗೌಡ 2' ಚಿತ್ರ ನಿರ್ಮಿಸಲು ನಿರ್ಮಾಪಕರೊಬ್ಬರು ಮುಂದೆ ಬಂದಿದ್ದು, ಕಿಚ್ಚ ಸುದೀಪ್ ಅವರ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿರುವ ಸುದ್ದಿ ಹರಿದಾಡುತ್ತಿದೆ.

'ಹೆಬ್ಬುಲಿ' ನಿರ್ಮಾಪಕನಿಂದ 'ಕೆಂಪೇಗೌಡ 2' ನಿರ್ಮಾಣ

'ಹೆಬ್ಬುಲಿ' ನಿರ್ಮಾಪಕನಿಂದ 'ಕೆಂಪೇಗೌಡ 2' ನಿರ್ಮಾಣ

ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಉಮಾಪತಿ ಶ್ರೀನಿವಾಸ್ ಅವರು 'ಕೆಂಪೇಗೌಡ 2' ಚಿತ್ರವನ್ನು ನಿರ್ಮಿಸಲಿದ್ದಾರೆ ಎಂಬ ಸುದ್ದಿ ಈಗ ಗಾಂದಿನಗರದಲ್ಲಿ ಹಬ್ಬಿದೆ.[ಸುದೀಪ್-ಶಿವಣ್ಣನ 'ದಿ ವಿಲನ್'ಗೆ ಬ್ರಿಟಿಷ್ ದೇಶದ ನಾಯಕಿ!]

ಕಿಚ್ಚನ ಜೊತೆಗೆ ಉಮಾಪತಿಯವರ ಎರಡನೇ ಸಿನಿಮಾ

ಕಿಚ್ಚನ ಜೊತೆಗೆ ಉಮಾಪತಿಯವರ ಎರಡನೇ ಸಿನಿಮಾ

ಅಂದಹಾಗೆ ನಿರ್ಮಾಪಕ ಉಮಾಪತಿ ಅವರು 'ಕೆಂಪೇಗೌಡ 2' ನಿರ್ಮಾಣ ಮಾಡಿದಲ್ಲಿ ಸುದೀಪ್ ಜೊತೆಗೆ ಅವರ ಎರಡನೇ ಸಿನಿಮಾ ಆಗಲಿದೆ. ಇದಕ್ಕೆ ಕಿಚ್ಚ ಸುದೀಪ್ ಸಹ ಗ್ರೀನ್ ಸಿಗ್ನಲ್ ನೀಡಿದ್ದು, " 'ಕೆಂಪೇಗೌಡ 2' ನನ್ನ ಅಣ್ಣ(ಸುದೀಪ್) ನನಗೆ ನೀಡಿರುವ ಗಿಫ್ಟ್, ಯುಗಾದಿ ಗೆ ಅಭಿಮಾನಿಗಳಿಗೂ ನೀಡಿರುವ ಉಡುಗೊರೆ" ಎಂದು ಉಮಾಪತಿ ಅವರು ಹೇಳಿದ್ದಾರಂತೆ.

'ದಿ ವಿಲನ್' ನಲ್ಲಿ ಸುದೀಪ್ ಬಿಜಿ

'ದಿ ವಿಲನ್' ನಲ್ಲಿ ಸುದೀಪ್ ಬಿಜಿ

ಸದ್ಯಕ್ಕೆ ಅಭಿನಯ ಚಕ್ರವರ್ತಿ ಸುದೀಪ್ 'ಜೋಗಿ' ಪ್ರೇಮ್ ನಿರ್ದೇಶನದ 'ದಿ ವಿಲನ್' ನಲ್ಲಿ ಬಿಜಿಯಾಗಿದ್ದಾರೆ. ಅಲ್ಲದೇ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾಗಳಲ್ಲಿ ಅಭಿನಯಿಸಲು ಕಮಿಟ್ ಆಗಿದ್ದಾರೆ. ಆದ್ದರಿಂದ 'ಕೆಂಪೇಗೌಡ 2' ಚಿತ್ರ ಯಾವಾಗಿನಿಂದ ಆರಂಭವಾಗುತ್ತೆ ಎಂಬುದು ಖಚಿತಗೊಂಡಿಲ್ಲ.

'ಕೆಂಪೇಗೌಡ 2' ರಿಮೇಕ್ ಅಥವಾ ಸ್ವಮೇಕ್?

'ಕೆಂಪೇಗೌಡ 2' ರಿಮೇಕ್ ಅಥವಾ ಸ್ವಮೇಕ್?

ಅಂದಹಾಗೆ 'ಸಿಂಗಂ' ರಿಮೇಕ್ 'ಕೆಂಪೇಗೌಡ' ಚಿತ್ರವನ್ನು ಸುದೀಪ್ ಅವರೇ ನಿರ್ದೇಶನ ಮಾಡಿದ್ದರು. ಆದರೆ ಕಳೆದ ವರ್ಷ 'ಕೆಂಪೇಗೌಡ -2' ರಿಮೇಕ್ ಆಗಿರದೇ ಸ್ವಮೇಕ್ ಆಗಿ ಬರಲಿದೆ. ಈ ಚಿತ್ರಕ್ಕೆ ಟಾಲಿವುಡ್ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆಯಲಿದ್ದು, ಸುದೀಪ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದ್ದರಿಂದ 'ಕೆಂಪೇಗೌಡ 2' ರಿಮೇಕ್ ಆಗಿ ಬರಲಿದೆಯೇ ಅಥವಾ ಸ್ವಮೇಕ್ ಆಗಿ ಬರಲಿದೆಯೇ ಎಂಬುದಕ್ಕೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ.

English summary
‘Kempegowda 2 is Sudeep’s gift to me, his fans for Ugadi’ said 'Hebbuli' producer Umapathy.
Please Wait while comments are loading...

Kannada Photos

Go to : More Photos