»   » ಜುಳುಜುಳು ಹರಿದಾಡಿದ ಹಂಸಿಕಾ ಜಳಕದ ವಿಡಿಯೋ!

ಜುಳುಜುಳು ಹರಿದಾಡಿದ ಹಂಸಿಕಾ ಜಳಕದ ವಿಡಿಯೋ!

Written by: ಉದಯರವಿ
Subscribe to Filmibeat Kannada

ತೆರೆಯ ಮೇಲೆ ತಾರೆಗಳ ಅದೆಷ್ಟೋ ಸ್ನಾನದ ಸನ್ನಿವೇಶಗಳು ಪಡ್ಡೆಗಳ ಮೈಕೈಯನ್ನು ತೊಯ್ದು ತೊಪ್ಪೆಯಾಗಿಸಿವೆ. ಅದು ತೆರೆಯ ಮೇಲಿನ ಕಥೆಯಾಯಿತು. ಅದೇ ರೀತಿ ತೆರೆಯ ಹಿಂದಿನ ಸ್ನಾನದ ವಿಡಿಯೋಗಳು ಆಗಾಗ ಬಿಡುಗಡೆಯಾಗಿ ಚಿತ್ರೋದ್ಯಮವನ್ನು ತಲ್ಲಣಗೊಳಿಸುತ್ತಿವೆ.

ಇದೀಗ ಅಂತಹದ್ದೇ ಒಂದು ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ರಾಜ್ ಕುಮಾರ್ ಜೊತೆ 'ಬಿಂದಾಸ್' ಚಿತ್ರದಲ್ಲಿ "ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ..." ಎಂದು ಕುಣಿದಾಡಿದ ಬೆಡಗಿ ಹಂಸಿಕಾ ಮೋತ್ವಾನಿ ಜಳಕದ ವಿಡಿಯೋ ಸೂಪರ್ ಫಾಸ್ಟ್ ವೇಗದಲ್ಲಿ ಮೊಬೈಲ್ ಗಳಲ್ಲಿ ಸರಿದಾಡುತ್ತಿದೆ. [ಬ್ಯೂಟಿ, ಟ್ಯಾಲೆಂಟೇ ಈ ಬೆಡಗಿಯರ ಗಾಡ್ ಫಾದರ್]

ಈ ಹಿಂದೆ ಮೋಹಕ ತಾರೆ ತ್ರಿಷಾ ಕೃಷ್ಣನ್ ಅವರ ಇದೇ ರೀತಿಯ ವಿಡಿಯೋ ಬಿಡುಗಡೆಯಾಗಿ ಸಾಕಷ್ಟು ರಾದ್ಧಾಂತ ಸೃಷ್ಟಿಸಿತ್ತು. ಅನಾರೋಗ್ಯಕರವಾದ ಈ ರೀತಿಯ ವಿಡಿಯೋಗಳನ್ನು ಕಾಣದ ಕೈಗಳು ಬಿಡುಗಡೆ ಮಾಡಿ ತಾರೆಗಳ ಘನತೆಗೆ ಕುತ್ತು ತರುತ್ತಿವೆ.

ಈ ವಿಡಿಯೋದಲ್ಲಿ ಇಷ್ಟಕ್ಕೂ ಇರುವುದು ಯಾರು?

ಈ ವಿಡಿಯೋದಲ್ಲಿ ಇಷ್ಟಕ್ಕೂ ಇರುವುದು ಯಾರು?

ಸರಿಸುಮಾರು ಮೂರು ನಿಮಿಷದ ಈ ವಿಡಿಯೋದಲ್ಲಿ ಇಷ್ಟಕ್ಕೂ ಇರುವುದು ಹಂಸಿಕಾನಾ? ಅವರನ್ನೇ ಹೋಲುವ ಬೆಡಗಿಯನ್ನು ತೋರಿಸಲಾಗಿದೆ. ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಈ ವಿಡಿಯೋ ಸಾರ್ವಜನಿಕರಿಗೂ ಮುಕ್ತವಾಗಿ ಲಭ್ಯವಾಗುತ್ತಿದೆ.

ರಾಧಿಕಾ ಆಪ್ಟೆಗೂ ಇದೇ ರೀತಿಯ ಪರಿಸ್ಥಿತಿ

ರಾಧಿಕಾ ಆಪ್ಟೆಗೂ ಇದೇ ರೀತಿಯ ಪರಿಸ್ಥಿತಿ

ಇತ್ತೀಚೆಗೆ ರಾಧಿಕಾ ಆಪ್ಟೆ ಎಂಬ ಬೆಡಗಿಯ ಟಾಪ್ ಲೆಸ್ ಫೋಟೋಗಳು ವೈರಲ್ ಆಗಿದ್ದವು. ಕೂಡಲೆ ಸ್ಪಂದಿಸಿದ ರಾಧಿಕಾ ಇವೆಲ್ಲಾ ಮಾರ್ಪ್ ಮಾಡಿದ ಚಿತ್ರಗಳೆಂದು ಸ್ಪಷ್ಟಪಡಿಸಿದ್ದರು. ಇದೀಗ ಅದೇ ರೀತಿಯ ಸನ್ನಿವೇಶ ಹಂಸಿಕಾಗೆ ಎದುರಾಗಿದೆ.

ಹಂಸಿಕಾ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ

ಹಂಸಿಕಾ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ

ಈ ಬಗ್ಗೆ ಹಂಸಿಕಾ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ತಾರೆಗಳ ಚಿತ್ರಗಳನ್ನು ಮಾರ್ಪ್ ಮಾಡಿ ಈ ರೀತಿ ಅಸಭ್ಯ ವಿಡಿಯೋಗಳನ್ನು ಮಾಡುತ್ತಿರುವವರನ್ನು ಸೈಬರ್ ಪೊಲೀಸರು ಬಂಧಿಸಿ ಅವರ ಹೆಡೆಮುರಿ ಕಟ್ಟಬೇಕಾಗಿದೆ ಎಂಬುದು ಅಭಿಮಾನಿಗಳ ಒಕ್ಕೊರಲಿನ ಮಾತು.

ಹಂಸಿಕಾ ಅವರ ಇಮೇಜ್ ಗೆ ಧಕ್ಕೆ ತರುವ ಉದ್ದೇಶ

ಹಂಸಿಕಾ ಅವರ ಇಮೇಜ್ ಗೆ ಧಕ್ಕೆ ತರುವ ಉದ್ದೇಶ

ಹಂಸಿಕಾ ಅವರ ಇಮೇಜ್ ಗೆ ಧಕ್ಕೆ ತರುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವೆಲ್ಲವೂ ಎಷ್ಟು ನಿಜವೋ ಏನೋ ಎಂಬುದು ಇನ್ನಷ್ಟೇ ಗೊತ್ತಾಗಬೇಕು.

ಶೀಘ್ರದಲ್ಲೇ ಹಸೆಮಣೆ ಏರಲಿರುವ ತಾರೆ

ಶೀಘ್ರದಲ್ಲೇ ಹಸೆಮಣೆ ಏರಲಿರುವ ತಾರೆ

ಹಂಸಿಕಾ ಅವರು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ಅದಕ್ಕೂ ಮುನ್ನ ಈ ರೀತಿಯ ಸ್ನಾನದ ವಿಡಿಯೋ ಬಿಡುಗಡೆಯಾಗಿರುವುದು ನಿಜಕ್ಕೂ ದುರಂತ.

ಸಿಂಬು ಅವರ ಕೈಹಿಡಿಯಲಿರುವ ಹಂಸಿಕಾ

ಸಿಂಬು ಅವರ ಕೈಹಿಡಿಯಲಿರುವ ಹಂಸಿಕಾ

ಇಷ್ಟಕ್ಕೂ ಹಂಸಿಕಾ ಮೋತ್ವಾನಿ ಕೈಹಿಡಿಯುತ್ತಿರುವುದು ತನ್ನ ಸಹನಟ, ತಮಿಳು ನಟ ಸಿಂಬು ಅವರನ್ನು. ಸಾಕಷ್ಟು ಹಿಂದೆಯೇ ಇವರಿಬ್ಬರೂ ಟ್ವೀಟಿಸಿ ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು.

English summary
Yet another famous actress' bathing video is spreading really fast. This time around the victim is none other than Hansika. Few years back similar video of actress Trisha was doing rounds and the unhealthy trend is back to haunt Kollywood actresses.
Please Wait while comments are loading...

Kannada Photos

Go to : More Photos