»   » ನಿಖಿಲ್ 'ಜಾಗ್ವಾರ್' ನಲ್ಲಿ ಸೊಂಟ ಬಳುಕಿಸಲು ಕ್ಯಾಟ್ ಬರ್ತಾರಂತೆ.!

ನಿಖಿಲ್ 'ಜಾಗ್ವಾರ್' ನಲ್ಲಿ ಸೊಂಟ ಬಳುಕಿಸಲು ಕ್ಯಾಟ್ ಬರ್ತಾರಂತೆ.!

Posted by:
Subscribe to Filmibeat Kannada

ಬಿಟೌನ್ ನಲ್ಲಿ ಕ್ಯಾಟ್ ಅಂತಾನೇ ಫೇಮಸ್ ಆಗಿರುವ ಕತ್ರಿನಾ ಕೈಫ್ ಅವರು ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಾಟ್ ತಾರೆಯರನ್ನು ಕರೆತರಲು ದಕ್ಷಿಣ ಭಾರತದ ಚಿತ್ರರಂಗದ ಹಲವಾರು ದಿಗ್ಗಜರು ಪ್ರಯತ್ನಿಸಿದ್ದರು. ಆದರೆ ಯಾರಿಗೂ ಒಲಿಯದ ಅದೃಷ್ಟ ಇದೀಗ ನಿಖಿಲ್ ಕುಮಾರ್ ಅವರ 'ಜಾಗ್ವಾರ್' ಗೆ ಒಲಿದಿದೆ.

ನಿರ್ದೇಶಕ ಮಹದೇವ್ ಆಕ್ಷನ್-ಕಟ್ ಹೇಳುತ್ತಿರುವ, ನಿಖಿಲ್ ಕುಮಾರ್ ಚೊಚ್ಚಲ ಅಭಿನಯದ 'ಜಾಗ್ವಾರ್' ಸಿನಿಮಾ ಸೆಟ್ಟೇರಿದಾಗಿನಿಂದ ಒಂದಲ್ಲಾ ಒಂದು ವಿಷಯದಿಂದ ಸೌಂಡ್ ಮಾಡುತ್ತಿದೆ.[ನಿಖಿಲ್ 'ಜಾಗ್ವಾರ್'ನಲ್ಲಿ ತೆಲುಗಿನ ಜಗಪತಿ ಬಾಬು ಮಿಂಚಿಂಗು]

ತೆಲುಗಿನ ಜಗಪತಿ ಬಾಬು ಈ ಸಿನಿಮಾದಲ್ಲಿ ಮಿಂಚಲಿದ್ದಾರೆ ಎನ್ನುವ ಸುದ್ದಿಯ ಬೆನ್ನಲ್ಲೇ ಇದೀಗ ಕತ್ರಿನಾ ಕೈಫ್ ಅವರನ್ನು ಕರೆತರುವುದೆಂದು ಚಿತ್ರತಂಡ ತಿಳಿಸಿದೆ. ಅಂದಹಾಗೆ ನಮ್ಮ ಬಾಲಿವುಡ್ ತಾರೆ ಕೈಫ್ ಗೆ ಈ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಟನೆ ಇಲ್ಲದಿದ್ದರು ಒಂದು ಹಾಡಿಗಂತೂ ಹೆಜ್ಜೆ ಹಾಕುವುದು ಪಕ್ಕಾ.

'ನಿಖಿಲ್ ಕುಮಾರ್ ಸಿನಿಮಾದ ಭಾಗವಾಗಲು ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಅವರು ಆಸಕ್ತಿ ತೋರಿದ್ದಾರೆ. ಅವರು ಸ್ಕ್ರಿಪ್ಟ್ ಬಗ್ಗೆ ಚರ್ಚಿಸುತ್ತಿದ್ದಾರೆ. ವಾಣಿಜ್ಯಾತ್ಮಕ ಅಂಶಗಳು ಅಂತಿಮವಾದ ಮೇಲೆ ಅಧಿಕೃತವಾಗುತ್ತದೆ' ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕ ಸುನೀಲ್ ಗೌಡ ತಿಳಿಸಿದ್ದಾರೆ.[ಸ್ಯಾಂಡಲ್ ವುಡ್ ನ ಭರವಸೆಯ 'ಸ್ಟಾರ್' ನಿಖಿಲ್ ಕುಮಾರ್!]

Look who Bagged the Kat Nikhil Kumar's 'Jaguar'

ಅಂದಹಾಗೆ ಈ ನಟಿ ದಕ್ಷಿಣ ಭಾರತದಲ್ಲಿ ಸರಿಯಾದ ಸಿನಿಮಾ ಆಯ್ಕೆ ಮಾಡಲು ಹವಣಿಸುತ್ತಿದ್ದರಂತೆ, 'ನಾವು ಕತ್ರಿನಾ ಅವರನ್ನು ಕೇಳಿದಾಗ, ತಾವೇ ಏಕಾಗಬೇಕು ಎಂಬ ಮರುಪ್ರಶ್ನೆ ಹಾಕಿದರಂತೆ ನಟಿ ಕತ್ರಿನಾ ಅವರು. ನಾವು ಸಿನಿಮಾ ಕಥೆ ಮತ್ತು ವಿಷಯವನ್ನು ವಿವರಿಸಿದಾಗ ಅವರು ಆಸಕ್ತಿ ತೋರಿದರು' ಎಂದು ಸುನೀಲ್ ನುಡಿಯುತ್ತಾರೆ.[ವಿಡಿಯೋ ; 'ಜಾಗ್ವಾರ್' ನಿಖಿಲ್ ತಯಾರಿ ಸೂಪರ್ರೋ ಸೂಪರ್.!]

'ಕತ್ರಿನಾ ಅವರು ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿರುವುದರಿಂದ ಮೊದಲೇ ಅವರ ದಿನಾಂಕ ತೆಗೆದುಕೊಳ್ಳಬೇಕು. ಚಿತ್ರೀಕರಣಕ್ಕೆ ಏಪ್ರಿಲ್ ತಿಂಗಳಿನಲ್ಲಿ 8 ದಿನಗಳ ಕಾಲ ಅವರ ಸಮಯ ಬೇಕು. ಅವರು ಈಗಾಗಲೇ ನಮಗೆ ಕಾಲ್ ಶೀಟ್ ಕೊಡಲು ಒಪ್ಪಿದ್ದಾರೆ' ಎಂದು ಸುನೀಲ್ ಹೇಳಿದ್ದಾರೆ.

ಜನವರಿ 4ರಿಂದ ಹೊಸ ವರ್ಷಕ್ಕೆ ಚಿತ್ರೀಕರಣ ಆರಂಭವಾಗಲಿದ್ದು, ನಾಯಕಿ ನಟಿಯರ ಆಯ್ಕೆ ಇನ್ನೇನು ನಡೆಯಬೇಕಿದೆ.

English summary
Several filmmakers in south India have tried to bag the Kat. Finally, looks like Nikhil Kumar has done it with his debut film Jaguar. Directed by Mahadev, it has had its share of hype since its launch.
Please Wait while comments are loading...

Kannada Photos

Go to : More Photos