»   » ಲವ್ಲಿ ಸ್ಟಾರ್ ಪ್ರೇಮ್ ನಿಜ ಜೀವನದ ಕಥೆ ಸಿನಿಮಾ ಆಗುತ್ತಾ?

ಲವ್ಲಿ ಸ್ಟಾರ್ ಪ್ರೇಮ್ ನಿಜ ಜೀವನದ ಕಥೆ ಸಿನಿಮಾ ಆಗುತ್ತಾ?

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನ ಲವ್ಲಿ ಸ್ಟಾರ್ ಪ್ರೇಮ್ ಅವರು ತಮ್ಮ ಹೋಮ್ ಬ್ಯಾನರ್ ನಲ್ಲಿ ಒಂದು ಸಿನಿಮಾ ಮಾಡಬೇಕು ಅಂತ ತುಂಬಾ ದಿನಗಳಿಂದ ಅಂದುಕೊಳ್ಳುತ್ತಿದ್ದರು. ಆದರೆ ಸರಿಯಾದ ಅವಕಾಶ ಸಿಕ್ಕಿರಲಿಲ್ಲ ಅನ್ಸುತ್ತೆ.

ಆದರೆ ಈಗ ಕಾಲ ಕೂಡಿ ಬಂದಿದೆ. ಇದೀಗ 'ನೆನಪಿರಲಿ' ಪ್ರೇಮ್ ಅವರು ಕೊನೆಗೂ ತಮ್ಮ ಹೋಮ್ ಬ್ಯಾನರಡಿಯಲ್ಲಿ ಸಿನಿಮಾ ಮಾಡುವ ಯೋಚನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮದೇ ಬ್ಯಾನರ್ ನಲ್ಲಿ ತಮ್ಮ ರಿಯಲ್ ಲೈಫ್ ಸ್ಟೋರಿಯನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ.[ಬಯಲಾದ ಲವ್ಲಿ ಸ್ಟಾರ್ ಪ್ರೇಮ್ ಇನ್ನೊಂದು ಮುಖ..!]

ಅಂದಹಾಗೆ ಈ ಮಾತನ್ನು ಬೇರೆ ಯಾರಾದ್ರೂ ಹೇಳಿದ್ದರೆ ನಂಬುವುದು ಸ್ವಲ್ಪ ಕಷ್ಟ ಆಗುತ್ತಿತ್ತು. ಆದರೆ ಸ್ವತಃ ಪ್ರೇಮ್ ಅವರೇ ಈ ಮಾತನ್ನು ಬಹಿರಂಗಪಡಿಸಿರುವುದರಿಂದ ನಂಬಲೇಬೇಕು.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

'ನೆನಪಿರಲಿ' ಪ್ರೇಮ್ ಹೇಳುವಂತೆ ತಾವೇ ಒಂದು ಚಿತ್ರ ನಿರ್ಮಾಣ ಮಾಡಲಿದ್ದಾರಂತೆ, ಈಗಾಗಲೇ ಸದ್ದಿಲ್ಲದೇ ಆ ಚಿತ್ರಕ್ಕೆ ಚಾಲನೆ ಕೂಡ ದೊರೆತಿದೆಯಂತೆ.[ಮೊದಲ ದಿನವೇ ಬಾಕ್ಸಾಫೀಸಲ್ಲಿ ಭರ್ಜರಿ ಸುರಿ'ಮಳೆ'! ]

ಇನ್ನು ಅಷ್ಟಕ್ಕೂ ಲವ್ಲಿ ಸ್ಟಾರ್ ಪ್ರೇಮ್ ಅವರ ನಿಜ ಜೀವನದ ಕುರಿತ ಚಿತ್ರ ಮಾಡುವುದಕ್ಕೆ ಅವರ ಜೀವನದಲ್ಲಿ ಅಂತಹ ಮಹತ್ತರ ಘಟನೆಗಳೇನು ನಡೆದಿದೆ ಅಂತ ನಿಮಗೆ ಪ್ರಶ್ನೆ ಮೂಡಬಹುದು.

ವಿಷ್ಯಾ ಇಲ್ಲಿದೆ, ಒಂದು ಸಾಮಾನ್ಯ ಕುಟುಂಬದಿಂದ ಬಂದ ಪ್ರೇಮ್ ಅವರು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದು ಸಾಮಾನ್ಯ ವಿಚಾರ ಅಲ್ಲ ಅಲ್ವೇ?, ಆದ್ರಿಂದ ಪ್ರೇಮ್ ಅವರು ಅದನ್ನೇ ಸಿನಿಮಾ ಮಾಡಬಹುದು ಅಂತ ಒಂದು ಅನುಮಾನ.

English summary
Kannada Actor Lovely Star Prem's next movie related to his real life story. The movie is produced by Actor Prem Kumar.
Please Wait while comments are loading...

Kannada Photos

Go to : More Photos