»   » ಸ್ಯಾಂಡಲ್ ವುಡ್ ಗೆ ನಾಟ್ಯ ಮಯೂರಿ ಮಾಧುರಿ ದೀಕ್ಷಿತ್?

ಸ್ಯಾಂಡಲ್ ವುಡ್ ಗೆ ನಾಟ್ಯ ಮಯೂರಿ ಮಾಧುರಿ ದೀಕ್ಷಿತ್?

Written by: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ನ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಸ್ಯಾಂಡಲ್ ವುಡ್ ಅಂಗಳಕ್ಕೆ ಅಡಿಯಿಡಲು ತಯಾರಿ ನಡೆದಿದೆ. ರಾಧಿಕಾ ಕುಮಾರಸ್ವಾಮಿ ನಿರ್ಮಿಸಲಿರುವ ಚಿತ್ರಕ್ಕೆ ಮಾಧುರಿಯ ಆಗಮನವಾಗಲಿದೆ ಎನ್ನುತ್ತವೆ ಮೂಲಗಳು.

ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು 'ನಮಗಾಗಿ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಾಯಕನಟನಾಗಿರುವ ಚಿತ್ರ ಇದಾಗಿದ್ದು, 'ನಿನಗಾಗಿ' ಚಿತ್ರದ ಬಳಿಕ ಈ ಜೋಡಿ ಮತ್ತೆ ಒಂದಾಗಿರುವ ಚಿತ್ರ. ಡಿಪಿ ರಘುರಾಮ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. [ಮಾಧುರಿ ದೀಕ್ಷಿತ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು]

Madhuri Dixit to make Sandalwood Debut?

ನಮಗಾಗಿ ಚಿತ್ರದ ಬಳಿಕ ರಾಧಿಕಾ ಅವರ ಮುಂದಿನ ಚಿತ್ರಕ್ಕೆ 'ಐ ಹೇಟ್ ಡಾನ್ಸ್' ಎಂದು ಹೆಸರಿಡಲಾಗಿದೆ. ಈ ವರ್ಷ ನವೆಂಬರ್ ವೇಳೆಗೆ ರಾಧಿಕಾ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ದಿನ ಚಿತ್ರ ಸೆಟ್ಟೇರಲಿದೆಯಂತೆ. ಈ ಚಿತ್ರಕ್ಕಾಗಿ ಮಾಧುರಿ ದೀಕ್ಷಿತ್ ಅವರನ್ನು ಕರೆತರಲು ಪ್ಲಾನ್ ಮಾಡಲಾಗಿದೆ.

ರಾಧಿಕಾ ಕುಮಾರಸ್ವಾಮಿ ನಿರ್ಮಾಣದ ಚಿತ್ರದ ಎಂದರೆ ಸ್ಯಾಂಡಲ್ ವುಡ್ ಗೆ ಮಾಧುರಿ ಬರುವುದು ಬಹುತೇಕ ಖಚಿತ ಎಂದುಕೊಳ್ಳಬಹುದು. ಚಿತ್ರದಲ್ಲಿ ಅವರದು ಸಣ್ಣ ಪಾತ್ರವಂತೆ. ಈಗಾಗಲೆ ಅವರೊಂದಿಗೆ ಮಾತುಕತೆಯಾಗಿದೆ. ಇನ್ನು ಅವರು ಗ್ರೀನ್ ಸಿಗ್ನಲ್ ಕೊಡುವುದು ಬಾಕಿ ಇದೆ.

ರಾಧಿಕಾ ಜೊತೆ ಮಾಧುರಿ ದೀಕ್ಷಿತ್ ಕುಣಿಯಲಿದ್ದಾರೆ ಎನ್ನುತ್ತವೆ ಮೂಲಗಳು. ಸ್ಯಾಂಡಲ್ ವುಡ್ ನಲ್ಲಿ ಮಾಧುರಿ ದೀಕ್ಷಿತ್ ನೃತ್ಯವನ್ನು ಕಣ್ತುಂಬಿಕೊಳ್ಳುವ ದಿನಗಳು ದೂರವಿಲ್ಲ. ಜೊತೆಗೆ ರಾಧಿಕಾ ಕುಮಾರಸ್ವಾಮಿ ಹೆಜ್ಜೆ ಹಾಕುತ್ತಿದ್ದರೆ ಕಣ್ಣಿಗೆ ಹಬ್ಬ ಅಲ್ಲವೇ? (ಏಜೆನ್ಸೀಸ್)

English summary
Bollywood actress Madhuri Dixit, is said to have been approached by Sandalwood filmmaker to play the small role in the upcoming Radhika Kumaraswamy movie. The movie titled as I Hate Dance, being directed by Raghuram DP.
Please Wait while comments are loading...

Kannada Photos

Go to : More Photos