»   » ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ-ಶ್ರಿಯಾ ಭೂಪಾಲ್ ಮದುವೆ ರದ್ದು!

ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ-ಶ್ರಿಯಾ ಭೂಪಾಲ್ ಮದುವೆ ರದ್ದು!

Posted by:
Subscribe to Filmibeat Kannada

ಟಾಲಿವುಡ್ ಸೂಪರ್ ಸ್ಟಾರ್ ನಟ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ಮತ್ತು ಡಿಸೈನರ್ ಶ್ರಿಯಾ ಭೂಪಾಲ್ ಅವರ ವಿವಾಹ ರದ್ದುಗೊಂಡಿದೆ ಎಂಬ ಸುದ್ದಿ ಬಹಿರಂಗವಾಗಿದೆ.[ಧಾಂ ಧೂಂ ಆಗಿ ನಡೆದ ನಾಗಾರ್ಜುನ ಪುತ್ರ ಅಖಿಲ್ ನಿಶ್ಚಿತಾರ್ಥ]

ಎಲ್ಲ ಅಂದುಕೊಂಡಂತೆ ಆಗಿದ್ದರೇ, ಮೇ ತಿಂಗಳಲ್ಲಿ ಅಖಿಲ್ ಅಕ್ಕಿನೇನಿ ಮತ್ತು ಶ್ರಿಯಾ ಭೂಪಾಲ್ ವಿವಾಹ ಇಟಲಿಯಲ್ಲಿ ಅದ್ಧೂರಿಯಾಗಿ ನಡೆಯಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಈ ಮದುವೆ ರದ್ದಾಗಿದೆ ಎಂಬ ಊಹಾಪೋಹಗಳು ತೆಲುಗು ಲೋಕದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ.....

ಅಖಿಲ್-ಶ್ರಿಯಾ ಮದುವೆ ರದ್ದು!

ಅಖಿಲ್-ಶ್ರಿಯಾ ಮದುವೆ ರದ್ದು!

ಅಖಿಲ್ ಮತ್ತು ಶ್ರಿಯಾ ಮದುವೆ ರದ್ದಾಗಿದೆ ಎಂಬ ಸುದ್ದಿ ಇಡೀ ಟಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ಕಳೆದ ಕೆಲ ದಿನಗಳಿಂದ ಮದುವೆ ತಯಾರಿಯಲ್ಲಿದ್ದ ಎರಡು ಕುಟುಂಬದವರು ದಿಢೀರ್ ಅಂತ ವಿವಾಹವನ್ನ ಮೊಟಕುಗೊಳಿಸಿದ್ದಾರೆ ಎನ್ನಲಾಗಿದೆ.

ಟಿಕೆಟ್ ಕ್ಯಾನ್ಸಲ್ ಮಾಡಲು ಸೂಚನೆ!

ಟಿಕೆಟ್ ಕ್ಯಾನ್ಸಲ್ ಮಾಡಲು ಸೂಚನೆ!

ಅಖಿಲ್ ಮದುವೆಗಾಗಿ ಹಲವು ಸೆಲಬ್ರೆಟಿಗಳು ಇಟಲಿಗೆ ತೆರಳಲು ಈಗಾಗಲೇ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದರು. ಕಳೆದ ಶನಿವಾರ ಅತಿಥಿಗಳಿಗೆ ತಾವು ಬುಕ್ ಮಾಡಿರುವ ಫ್ಲೈಟ್ ಟಿಕೆಟ್ ಕ್ಯಾನ್ಸಲ್ ಮಾಡಿಸುವಂತೆ ಎರಡು ಕುಟುಂಬದವರು ಹೇಳಿದ್ದಾರೆ ಎನ್ನಲಾಗಿದೆ.

ಇಟಲಿಯಲ್ಲಿ ಮದುವೆ ತಯಾರಿ ನಡೆಯುತ್ತಿತ್ತು!

ಇಟಲಿಯಲ್ಲಿ ಮದುವೆ ತಯಾರಿ ನಡೆಯುತ್ತಿತ್ತು!

ಮದುವೆಗಾಗಿ ರೋಮ್ ನ ಅರಮನೆಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದವು. ದಕ್ಷಿಣ ಭಾರತದ ಚಿತ್ರ ತಾರೆಯರು, ದೊಡ್ಡ ಉದ್ಯಮಿಗಳು, ಹಾಗೂ ಬಾಲಿವುಡ್ ಸ್ಟಾರ್ ಗಳು ಸೇರಿದಂತೆ ಸುಮಾರು 700 ಮಂದಿಗೆ ಆಹ್ವಾನ ನೀಡಲಾಗಿತ್ತು. ಹೀಗಾಗಿ, ಅತಿಥಿಗಳಿಗೆ ಹೋಟೆಲ್ ಹಾಗೂ ರೆಸಾರ್ಟ್ ಬುಕ್ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಮದುವೆ ರದ್ದು ಮಾಡಲು ಕಾರಣವೇನು?

ಮದುವೆ ರದ್ದು ಮಾಡಲು ಕಾರಣವೇನು?

ಮದುವೆ ರದ್ದು ಮಾಡುತ್ತಿರುವುದೇಕೆ ಎಂದು ಎರಡು ಕುಟುಂಬದವರು ಬಿಟ್ಟುಕೊಟ್ಟಿಲ್ಲ. ಕಳೆದ ವಾರದವರೆಗೂ ಎಲ್ಲವೂ ಸರಿಯಿತ್ತು. ಆದ್ರೆ, ದಿಢೀರ್ ಎಂದು ಈ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಜೋಡಿ

ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಜೋಡಿ

ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದ ಶ್ರಿಯಾ ಭೂಪಾಲ್, ಕಾಜಲ್ ಅಗರ್ ವಾಲ್, ಶ್ರಿಯಾ ಶರಣ್, ಶ್ರದ್ಧಾ ಕಪೂರ್ , ಅಲಿಯಾ ಭಟ್ ಸೇರಿದಂತೆ ಹಲವು ನಾಯಕಿಯರಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಮತ್ತೊಂದೆಡೆ ಅಖಿಲ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು. ಕಳೆದ ಎರಡು ವರ್ಷಗಳಿಂದ ಅಖಿಲ್ ಮತ್ತು ಶ್ರಿಯಾ ಪರಸ್ಪರ ಪರಿಚಿತರು.

'ಡಿಸೆಂಬರ್'ನಲ್ಲಿ ನಿಶ್ಚಿತಾರ್ಥ ಆಗಿತ್ತು!

'ಡಿಸೆಂಬರ್'ನಲ್ಲಿ ನಿಶ್ಚಿತಾರ್ಥ ಆಗಿತ್ತು!

ಕಳೆದ ಡಿಸೆಂಬರ್ ತಿಂಗಳಲ್ಲಿನಷ್ಟೇ ಅಖಿಲ್ ಮತ್ತು ಶ್ರಿಯಾ ಅವರ ನಿಶ್ಚಿತಾರ್ಥ ಆಗಿತ್ತು. ಈ ಕಾರ್ಯಕ್ರಮಕ್ಕೆ ನಾಗಾರ್ಜುನ ಕುಟುಂಬ, ಮತ್ತು ಶ್ರಿಯಾ ಭೂಪಾಲ್ ಕುಟುಂಬದವರು ಸೇರಿದಂತೆ ಚಿತ್ರರಂಗದ ಹಲವರು ಈ ಭಾಗಿಯಾಗಿದ್ದರು.[ಧಾಂ ಧೂಂ ಆಗಿ ನಡೆದ ನಾಗಾರ್ಜುನ ಪುತ್ರ ಅಖಿಲ್ ನಿಶ್ಚಿತಾರ್ಥ ]

ನಾಗಚೈತನ್ಯ-ಸಮಂತಾ ಕಥೆಯೇನು?

ನಾಗಚೈತನ್ಯ-ಸಮಂತಾ ಕಥೆಯೇನು?

ಅಖಿಲ್ ನಿಶ್ಚಿತಾರ್ಥ ಬೆನ್ನಲ್ಲೆ ನಾಗಾರ್ಜುನ ಅವರ ದೊಡ್ಡ ಮಗ ನಾಗಚೈತನ್ಯ ಮತ್ತು ನಟಿ ಸಮಂತಾ ಅವರ ನಿಶ್ಚಿತಾರ್ಥ ನೆರವೇರಿತ್ತು. ಆದ್ರೆ, ಇನ್ನು ಇವರಿಬ್ಬರ ಮದುವೆ ದಿನಾಂಕ ನಿಗದಿಯಾಗಿಲ್ಲ.[ಚಿತ್ರಗಳು: ಟಾಲಿವುಡ್ ಪ್ರೇಮಪಕ್ಷಿ ಸಮಂತಾ-ನಾಗಚೈತನ್ಯ ನಿಶ್ಚಿತಾರ್ಥ]

English summary
According to Source Tollywood Star Nagarjuna’s son Akhil Akkineni Engagement with fashion designer Shriya Bhupal has Reportedly Been called off Months Before their Destination Wedding in Italy.
Please Wait while comments are loading...

Kannada Photos

Go to : More Photos