»   » ಹಿನ್ನೆಲೆ ಗಾಯಕ ಮನ್ನಾ ಡೇ ಸಾವಿನ ಸುದ್ದಿ ಸುಳ್ಳು

ಹಿನ್ನೆಲೆ ಗಾಯಕ ಮನ್ನಾ ಡೇ ಸಾವಿನ ಸುದ್ದಿ ಸುಳ್ಳು

Posted by:
Subscribe to Filmibeat Kannada
Manna Dey death news a rumour
ಬೆಂಗಳೂರು, ಜೂ. 9 : ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇ ಅವರು ಇನ್ನೂ ಜೀವಂತರಾಗಿದ್ದಾರೆ. ತೀರಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಬಾರದು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ. ಮನ್ನಾದಾ ಅವರ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ಡಾ. ಹೆಗಡೆ ಹೇಳಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ 94 ವರ್ಷದ ಮನ್ನಾ ಡೇ ಅವರು ತೀರಿಕೊಂಡಿದ್ದಾರೆ ಎಂದು ಟ್ವಿಟ್ಟರಿನಲ್ಲಿ ಸುದ್ದಿ ಹರಡಿದ್ದು ಸುಳ್ಳು ಎಂದು ಸಾಬೀತಾಗಿದೆ. ಈ ಸುದ್ದಿ ಕಾಳ್ಗಿಚ್ಚಿನಂತೆ ಟ್ವಿಟ್ಟರಿನಲ್ಲಿ ಹಬ್ಬುತ್ತಿದ್ದಂತೆ ಅವರ ಅಭಿಮಾನಿಗಳು ಕಳವಳಕ್ಕೀಡಾಗಿದ್ದರು. ಮನ್ನಾ ಡೇ ಅವರ ಸ್ಥಿತಿ ಚಿಂತಾಜನಕವಾಗಿದ್ದರೂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಹೇಳಿಕೆ ಹೊರಬೀಳುತ್ತಿದ್ದಂತೆ ನಿರಾಳರಾಗಿದ್ದಾರೆ.

ಕನ್ನಡದ 'ಮಾರ್ಗದರ್ಶಿ' ಚಿತ್ರದಲ್ಲಿ 'ಸತ್ಯಮೇವ ಜಯತೆ' ಮತ್ತು 'ಕಲಾವತಿ' ಚಿತ್ರದಲ್ಲಿ 'ಕುಹೂ ಕುಹೂ ಎನ್ನುತ ಹಾಡುವ ಕೋಗಿಲೆ' ಎನ್ನುವ ಹಾಡುಗಳನ್ನು ಸುಮಧುರವಾಗಿ ಹಾಡಿರುವ ಮನ್ನಾ ಡೇ ಅವರಿಗೆ ಹೃದಯ ಸೋಂಕು ತಗುಲಿದ ಕಾರಣ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿದೆ. ಅಲ್ಲಿಯವರೆಗೆ ಕಲ್ಯಾಣ ನಗರದಲ್ಲಿರುವ ಅವರ ನಿವಾಸದಲ್ಲಿಯೇ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

ಮನ್ನಾ ಡೇ ಅವರ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕಾಗಿ ಟ್ವಿಟ್ಟರಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇಂಥ ಸುದ್ದಿ ಹಬ್ಬಿಸಿದ ಮೀಡಿಯಾದವರಿಗೆ ಎಳ್ಳಷ್ಟಾದರೂ ನಾಚಿಕೆ, ಮಾನ, ಮರ್ಯಾದೆ ಮತ್ತು ನೈತಿಕೆಯೆನ್ನುವುದಾದರೂ ಇದೆಯಾ ಎಂದು ಟ್ವೀಟಿಗರು ಕೆಂಡ ಕಾರುತ್ತಿದ್ದಾರೆ. ಹಾಗೆಯೆ, ಮನ್ನಾ ಡೇ ಅವರ ಆರೋಗ್ಯ ಸುಧಾರಿಸಲು ಪ್ರಾರ್ಥನೆಗಳು ಶುರುವಾಗಿವೆ.

ಈ ಸುದ್ದಿ ಹಬ್ಬಿಸಿದ್ದು ಖ್ಯಾತ ಪತ್ರಕರ್ತೆ ಬರ್ಖಾ ದತ್. ತಾನೇ ಮೊದಲು ಈ ಸುದ್ದಿಯನ್ನು ಟ್ವೀಟ್ಟರಲ್ಲಿ ಬ್ರೇಕ್ ಮಾಡಬೇಕು ಎಂಬ ಧಾವಂತದಲ್ಲಿ ಅಚಾತುರ್ಯ ನಡೆದುಹೊಗಿದೆ. ಇದು ವದಂತಿ ಎಂದು ತಿಳಿಯುತ್ತಿದ್ದಂತೆ, ಬರ್ಖಾ ದತ್ ಅವರು ಟ್ವಿಟ್ಟರಿನಲ್ಲಿ ಕ್ಷಮೆ ಕೋರಿದ್ದಾರೆ. ಟ್ವೀಟಿಗರು ಮಾತ್ರ ಬರ್ಖಾ ಮೇಲೆ ಕೆಂಡದ ಮಳೆಯನ್ನು ಸುರಿಸುತ್ತಿದ್ದಾರೆ.


ಮೇ 1ರಂದು ಮನ್ನಾ ಡೇ ಅವರು ತಮ್ಮ 94ನೇ ಜನ್ಮದಿನವನ್ನು ಆಚರಿಸಿಕೊಂಡರು. ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೆಂಗಳೂರಿಗೆ ಬಂದು ಮನ್ನಾ ಡೇ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದರು.

English summary
Tweeples are bashing rumour mongers for spreading false news about death of famous playback singer Manna Dey, who has been admitted to hospital in Bangalore with chest infection. Doctors say he is still alive. Manna has sung in Kannada films too.
Please Wait while comments are loading...

Kannada Photos

Go to : More Photos