»   » ವೈಎಸ್ಸಾರ್ ಕಾಂಗ್ರೆಸ್ ನಾಯಕಿ ಮೇಲೆ 'ಬಾಹುಬಲಿ' ಕಣ್ಣು?

ವೈಎಸ್ಸಾರ್ ಕಾಂಗ್ರೆಸ್ ನಾಯಕಿ ಮೇಲೆ 'ಬಾಹುಬಲಿ' ಕಣ್ಣು?

Written by: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತೆ ಗಾಸಿಪ್ ಗಾಳಿಗೆ ಸಿಲುಕಿದ್ದಾರೆ ಈ ವಾರದಲ್ಲೆ ಎರಡನೇ ಬಾರಿಗೆ ಗಾಳಿಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಐದಾರು ದಿನಗಳಿಂದ ಯಾಕೋ ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಸೋದರಿ ಶರ್ಮಿಳಾ ಜತೆ ಪ್ರಭಾಸ್ ಹೆಸರು ಕೇಳುತ್ತಲೇ ನಿನ್ನೆ ಕೂಡಾ ಬಾಹುಬಲಿ ಚಿತ್ರದ ರಿಲೀಸ್ ಬಗ್ಗೆ ಮಾತನಾಡಲು ಬಾಯ್ತೆರೆದ ಪ್ರಭಾಸ್ ಗೆ ಮತ್ತೆ ಶರ್ಮಿಳಾ ಬಗ್ಗೆ ಹೇಳಿ ಎಂದು ಮಾಧ್ಯಮದವರು ಕೇಳಿದ್ದು ಪಿತ್ತ ನೆತ್ತಿಗೇರಿಸಿದೆ.

'ಗಾಳಿ ಸುದ್ದಿ ಹಬ್ಬಿಸುವವರನ್ನು ಹಿಡಿದು ತದುಕಿರಿ' ಎಂದು ವೈಎಸ್ಸಾರ್ ಪಕ್ಷದವರು ಇನ್ನೊಂದೆಡೆ ಆರ್ಭಟಿಸುತ್ತಿದ್ದಾರೆ. ಒಟ್ಟಾರೆ ವೈಎಸ್ಸಾರ್ ಪಕ್ಷದ ಸ್ಥಾಪಕ ಮಾಜಿ ಸಿಎಂ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ವೈಎಸ್ ಶರ್ಮಿಳಾ ಹಾಗೂ ಪ್ರಭಾಸ್ ನಡುವೆ ಏನೋ ಇದೆ ಎಂದು ಯಾರು ಹಬ್ಬಿಸಿದರೋ ಟಾಲಿವುಡ್ ಹಾಗೂ ಆಂಧ್ರ ರಾಜಕೀಯ ರಂಗದಲ್ಲಿ ಹೊಸ ಸಂಚಲನವನ್ನಂತೂ ಸೃಷ್ಟಿಸುತ್ತಿದೆ. ಇದೆಲ್ಲ ರಾಜಕೀಯ ಆಟ ಎನ್ನಲಾಗುತ್ತಿದೆ ಈ ಬಗ್ಗೆ ಶರ್ಮಿಳಾ ಮಾತನಾಡದಿದ್ದರೂ, ವಿಧಿಇಲ್ಲದೆ ಪ್ರಭಾಸ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ

'ಕಳೆದ ಕೆಲವು ತಿಂಗಳುಗಳಿಂದ ನನ್ನ ಹಾಗೂ ವೈಎಸ್ ಶರ್ಮಿಳಾ ಅವರ ನಡುವೆ ಪ್ರೇಮ ಸಂಬಂಧವಿದೆ ಎಂದು ಸುದ್ದಿ ಹಬ್ಬಿಸಲಾಗಿದೆ. ನನ್ನ ಕುಟುಂಬ ವರ್ಗ ಹಾಗೂ ಸ್ನೇಹಿತರಿಗೆ ಈ ಬಗೆ ಚಿತ್ರ ಸಮೇತ ಸುದ್ದಿ ಮುಟ್ಟಿಸಲಾಗಿದೆ. ಅನೇಕ ಮಂದಿ ಫೋನ್ ಕರೆ ಮಾಡಿ ನನ್ನನ್ನು ಕೇಳಿದ್ದಾರೆ. ಕೆಲವು ಮಂದಿ ರಾಜಕೀಯ ಮುಖಂಡರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ನಾನು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ, ಬಾಹುಬಾಲಿ ಚಿತ್ರೀಕರಣ ಹೀಗಾಗಿ ಮುಂದೂಡಲ್ಪಟ್ಟಿತ್ತು ಹೀಗೆ ಏನೇನೋ ಹೇಳಿದ್ದಾರೆ.. ಆದರೆ, ನಾನು ಎಂದೂ ಆಕೆಯನ್ನು ಭೇಟಿ ಆಗಿಲ್ಲ, ಫೋನ್ ಕರೆ ಮಾಡಿಲ್ಲ ಎಂದು ಪ್ರಭಾಸ್ ಹೇಳಿದ್ದಾರೆ. ಈ ಕಥೆ ಮುಂದೇನಾಯ್ತು ? ಓದಿ,...

ಪ್ರಭಾಸ್ ಆರೋಗ್ಯದ ಬಗ್ಗೆ ಗಾಳಿ ಸುದ್ದಿ
  

ಪ್ರಭಾಸ್ ಆರೋಗ್ಯದ ಬಗ್ಗೆ ಗಾಳಿ ಸುದ್ದಿ

ಮೊದಲಿಗೆ ಪ್ರಭಾಸ್ ಆರೋಗ್ಯದ ಬಗ್ಗೆ ಗಾಳಿ ಸುದ್ದಿ ಹಬ್ಬಿತ್ತು. ಬಾಹುಬಲಿ ಚಿತ್ರೀಕರಣದ ವೇಳೆ ಗಾಯಗೊಂಡಿದ್ದು ತೀವ್ರವಾಗಿ ಬಳಲುತ್ತಿದ್ದಾರೆ ಇನ್ಮುಂದೆ ಸಿನಿಮಾ ಮಾಡೋಕೆ ಆಗಲ್ಲ ಇನ್ನೂ ಏನೇನೂ ಸುದ್ದಿ ಹಬ್ಬಿತ್ತು. ಆದರೆ, ಕಿಚ್ಚ ಸುದೀಪ್ ಅವರು ತಮ್ಮ ಪಾಲಿನ ಬಾಹುಬಲಿ ಚಿತ್ರೀಕರಣ ಮುಗಿಸಿಕೊಂಡು ಬರುತ್ತಿದ್ದಾನೆ ಪ್ರಭಾಸ್ ಜತೆ ಚಿತ್ರ ಹಾಕಿದ್ದರು. ನಿರ್ದೇಶಕ ರಾಜಮೌಳಿ ಅವರು ಫೇಸ್ ಬುಕ್ ನಲ್ಲಿ ಅಪ್ದೇಡ್ ಮಾಡಿದ್ದರು. ಪ್ರಭಾಸ್ ಗಾಸಿಪ್ ಸುದ್ದಿಗೆ ಬೆಲೆ ಕೊಟ್ಟಿರಲಿಲ್ಲ.

ಶರ್ಮಿಳಾ ರಕ್ಷಣೆಗಾಗಿ ಬಾಯ್ತೆರಲೇ ಬೇಕಾಯ್ತು
  

ಶರ್ಮಿಳಾ ರಕ್ಷಣೆಗಾಗಿ ಬಾಯ್ತೆರಲೇ ಬೇಕಾಯ್ತು

ಇದು ನನ್ನೊಬ್ಬ ಪ್ರಶ್ನೆಯಾಗಿರಲಿಲ್ಲ ವೈಎಸ್ ಶರ್ಮಿಳಾ ಅವರ ಬಗ್ಗೆ ಇಲ್ಲಸಲ್ಲದ ಗಾಸಿಪ್ ಹಬ್ಬುವುದು ನನಗಿಷ್ಟವಿರಲಿಲ್ಲ. ಸಿನಿಮಾ ಮಂದಿಗೆ ಗಾಸಿಪ್ ಕಾಮನ್. ಆದರೆ, ವೈಎಸ್ಸಾರ್ ಕುಟುಂಬದ ಬಗ್ಗೆ ವಿನಾಕರಣ ಸುದ್ದಿ ಹಬ್ಬಿಸುವುದು ಅದರಲ್ಲೂ ಮದುವೆಯಾಗಿ ಮಗು ಹೊಂದಿರುವ ಮಹಿಳೆಯ ಬಗ್ಗೆ ಕೆಟ್ಟ ಸಂದೇಶ ಸಮಾಜ ತಲುಪುದನ್ನು ತಪ್ಪಿಸಲು ನಾನು ಮಾತನಾಡಲೇಬೇಕಾಯಿತು ಎಂದಿದ್ದಾರೆ.

ನನಗೇನೂ ರಾಜಕೀಯ ಸೇರುವ ಇಚ್ಛೆ ಇಲ್ಲ
  

ನನಗೇನೂ ರಾಜಕೀಯ ಸೇರುವ ಇಚ್ಛೆ ಇಲ್ಲ

ಗಾಳಿ ಸುದ್ದಿಗಳ ಪ್ರಕಾರ ನಡೆದಿದ್ದರೆ ನಾನು ಈ ವೇಳೆಗೆ ಕೇಂದ್ರ ಸಚಿವನಾಗಿರುತ್ತದೆ. ನನಗೆ ಮೊದಲಿನಿಂದಲೂ ರಾಜಕೀಯ ರಂಗ ಇಷ್ಟವಿಲ್ಲ. ಆದರೆ, ರಾಜಕೀಯ ರಂಗದಲ್ಲಿರುವ ಸಭ್ಯರ ಪರಿಚಯವಿದೆ. ಅವರ ಹೆಸರು ಕೆಡಿಸಲು ಯತ್ನಿಸಿದರೆ ನಾನು ಸ್ಪಷ್ಟನೆ ನೀಡಲೇಬೇಕಾಗುತ್ತದೆ.

ಸೈಬರ್ ಕ್ರೈಂ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿ
  

ಸೈಬರ್ ಕ್ರೈಂ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿ

ಸೈಬರ್ ಕ್ರೈಂ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿ, ಈ ಹಿಂದೆ ಟ್ವಿಟ್ಟರ್ ನಲ್ಲಿ ಫೇಸ್ ಬುಕ್ ನಲ್ಲಿ ನಟಿಯರ ಜತೆ ಸಂಬಂಧ ಕಲ್ಪಿಸಿ ಅನೇಕ ಟಾಲಿವುಡ್ ನಾಯಕ ಹೆಸರನ್ನು ಹಾಳುಗೆಡವಲಾಗಿದೆ. ಗಾಸಿಪ್ ಹಬ್ಬಿಸುವವರ ಮೇಲೆ ಕೇಸ್ ಜಡಿದು ಶಿಕ್ಷಿಸಬೇಕು ಎಂದಿದ್ದಾರೆ.

ಈ ಹಿಂದೆ ಕೂಡಾ ಪ್ರಭಾಸ್ ಬಗ್ಗೆ ಗಾಳಿಸುದ್ದಿ
  

ಈ ಹಿಂದೆ ಕೂಡಾ ಪ್ರಭಾಸ್ ಬಗ್ಗೆ ಗಾಳಿಸುದ್ದಿ

ಈ ಹಿಂದೆ ಕೂಡಾ ಪ್ರಭಾಸ್ ಬಗ್ಗೆ ಗಾಳಿಸುದ್ದಿ ಹಬ್ಬಿತ್ತು. ಮಂಗಳೂರಿನ ಅನುಷ್ಕಾ ಶೆಟ್ಟಿ, ಕಾಜಲ್ ಅಗರವಾಲ್, ಸಂಜನಾ ಜತೆ ಪ್ರಭಾಸ್ ಇನ್ನೇನು ಹಸಮಣೆ ಏರುತ್ತಾರೆ ಎನ್ನಲಾಗಿತ್ತು. ಆದರೆ, ಎಲ್ಲವೂ ಗಾಳಿಸುದ್ದಿಯಾಗಿತ್ತು.

English summary
Rebel Star Prabhas, who is currently busy with shooting of his upcoming movie Baahubali, has slammed the reports that he has alleged relationship with politician YS Sharmila, a daughter of former Chief Minister YS Rajasekhar Reddy.
Please Wait while comments are loading...

Kannada Photos

Go to : More Photos