»   » 'ನಾಟಿ ಕೋಳಿ' ಸಾರಿಗೆ ಪ್ರಿಯಾಮಣಿ ಗರಂಮಸಾಲೆ ಇಲ್ಲ?

'ನಾಟಿ ಕೋಳಿ' ಸಾರಿಗೆ ಪ್ರಿಯಾಮಣಿ ಗರಂಮಸಾಲೆ ಇಲ್ಲ?

Posted by:
Subscribe to Filmibeat Kannada

ಸೆಟ್ಟೇರುವ ಮೊದಲೇ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಸಿನಿಮಾ 'ನಾಟಿ ಕೋಳಿ'. ಅದ್ರಲ್ಲೂ 'ನಾಟಿ ಕೋಳಿ' ಸಾರಿಗೆ ರಾಗಿಣಿ ತುಪ್ಪ ಬೀಳುತ್ತೆ ಅಂತ ಗೊತ್ತಾದ್ಮೇಲೆ ಹೈಪ್ ಜಾಸ್ತಿ ಕ್ರಿಯೇಟ್ ಆಯ್ತು.

ಆದ್ರೆ, ರಾಗಿಣಿ ಮತ್ತು ಆಕೆಯ ಅಪ್ಪಟ ಅಭಿಮಾನಿಯೊಬ್ರು ಮಾಡಿದ ಎಡವಟ್ಟಿಂದ ಈಗ 'ನಾಟಿ ಕೋಳಿ' ಸ್ಥಿತಿ ಅತಂತ್ರದಲ್ಲಿದೆ. 'ನಾಟಿ ಕೋಳಿ' ಚಿತ್ರದಿಂದ ಹೊರಬಂದ ಮೇಲೆ ರಾಗಿಣಿ ಹಾಯಾಗಿದ್ದಾರೆ. [ರಾಗಿಣಿ ದ್ವಿವೇದಿ 'ನಾಟಿಕೋಳಿ' ಮೇಲೆ ಎರಗಿದ 'ಹುಲಿ']

Priyamani not in Kannada Movie 'Nati Koli'?

ಆದ್ರೆ, ನಿರ್ದೇಶಕ ಶ್ರೀನಿವಾಸ್ ರಾಜು ಕಥೆ ಏನಾಯ್ತು ಅಂದ್ರೆ, ಹೊಸ 'ನಾಟಿ ಕೋಳಿ'ಯ ತಲಾಶ್ ನಲ್ಲಿ ತೊಡಗಿದ್ದಾರೆ. ರಾಗಿಣಿ ಕೈಬಿಟ್ಟ ಮೇಲೆ ಪ್ರಿಯಾಮಣಿ 'ನಾಟಿ ಕೋಳಿ' ಆಗ್ತಾರೆ ಅಂತ ಸುದ್ದಿ ಇತ್ತು. [ಜಂಬದ ಕೋಳಿಗೆ ಕೊಕ್ ಪ್ರಿಯಾಮಣಿ 'ನಾಟಿಕೋಳಿ']

ಆದ್ರೆ, ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿರುವ ಸುದ್ದಿ ಪ್ರಕಾರ, 'ನಾಟಿ ಕೋಳಿ' ಸಾರಿಗೆ ಗರಂಮಸಾಲೆ ಹಾಕೋಕೆ ಪ್ರಿಯಾಮಣಿ ಒಪ್ಪಿಕೊಂಡಿಲ್ಲವಂತೆ. ಸುಖಾಸುಮ್ಮನೆ ಪ್ರಿಯಾಮಣಿ ಹೆಸರನ್ನ ಬಳಸಿ, 'ನಾಟಿ ಕೋಳಿ' ಚಿತ್ರತಂಡ ಪ್ರಚಾರ ಮಾಡುತ್ತಿದ್ಯಂತೆ.

ಸದ್ಯ ಪ್ರಿಯಾಮಣಿ ರಿಯಾಲಿಟಿ ಶೋಗಳಲ್ಲಿ ಬಿಜಿಯಾಗಿದ್ದಾರೆ. ಆದ್ದರಿಂದ ಕಾಲ್ ಶೀಟ್ ಇಲ್ಲಾ ಅಂತ ಹೇಳಿದ್ದಾರಂತೆ. ಪ್ರಿಯಾಮಣಿ ಬರುವವರೆಗೂ ಶ್ರೀನಿವಾಸ್ ರಾಜು ಕಾಯ್ತಾರೋ, ಇಲ್ಲಾ ಬೇರೆ ಕೋಳಿ ಹಿಂದೆ ಬೀಳ್ತಾರೋ ನೋಡೋಣ.

English summary
According to the grapevine, Actress Priyamani has not agreed to play lead in Srinivas Raju Directorial 'Nati Koli'.
Please Wait while comments are loading...
Best of 2016

Kannada Photos

Go to : More Photos